ಹರ್‌ಕೀರತ್ ಅಹ್ಲುವಾಲಿಯಾಗೆ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿ
Team Udayavani, May 11, 2018, 7:28 PM IST
ಚಂಡೀಗಢ : 2018ರ ಸಾಲಿನ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಖ್ಯಾತ ತೋಟಗಾರಿಕಾ ತಜ್ಞ ಹರ್‌ಕೀರತ್ ಅಹ್ಲುವಾಲಿಯಾ ಅವರನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಭಿನಂದಿಸಿದ್ದಾರೆ.
ತಮ್ಮ ಅಭಿನಂದನಾ ಸಂದೇಶದಲ್ಲಿ ಮುಖ್ಯಮಂತ್ರಿಗಳು, “ಅಹ್ಲುವಾಲಿಯಾ ಅವರ ಕಿತ್ತಳೆ ತೋಟ ರಾಜ್ಯದ ಹೆಮ್ಮೆಯಾಗಿದೆ; ಗ್ರಾಮೀಣ ಕೃಷಿ ಪ್ರವಾಸೋದ್ಯಮಕ್ಕೆ ಅಹ್ಲುವಾಲಿಯಾ ಅವರು ತಮ್ಮ ಪ್ರಗತಿಪರ ಕೃಷಿ ತಂತ್ರಜ್ಞಾನದ ಮೂಲಕ ನೀಡಿರುವ ಮಹತ್ವಪೂರ್ಣ ಕಾಣಿಕೆಯನ್ನು ಪರಿಗಣಿಸಿ ಸಂದಿರುವ ಈ ವಿಶ್ವ ಪ್ರಶಸ್ತಿ ಅವರ ಸಾಧನೆಗೆ ಸಂದಿರುವ ಪುರಸ್ಕಾರವಾಗಿದೆ’ಎಂದು ಹೇಳಿದ್ದಾರೆ.
ಅಹ್ಲುವಾಲಿಯಾ ಅವರಿಗೆ ಇದೇ ಮೇ 16ರಂದು ಮುಂಬಯಿಯಲ್ಲಿ ನಡೆಯಲಿರುವ 11ನೇ ವಿಶ್ವ ಕೃಷಿ ಪ್ರವಾಸೋದ್ಯಮ ಸಮಾವೇಶದಲ್ಲಿ 2018ರ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.