ಸೂಚಿಸಿದರೆ ನಾನೂ ಚೆಂಡು ವಿರೂಪಗೊಳಿಸುತ್ತಿದ್ದೆ!
Team Udayavani, May 12, 2018, 6:00 AM IST
ಸಿಡ್ನಿ: ಒಂದು ವೇಳೆ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಜಾಗ ದಲ್ಲಿದ್ದರೆ ನಾನೂ ಕೂಡ ಚೆಂಡು ವಿರೂಪ ಮಾಡುತ್ತಿದ್ದೆ ಎಂದು ಆಸ್ಟ್ರೇಲಿಯ ತಂಡದ ನೂತನ ತರ ಬೇತುದಾರ ಜಸ್ಟಿನ್ ಲ್ಯಾಂಗರ್ ಹೇಳಿ ದ್ದಾರೆ. ಚಾನೆಲ್ 9ಗೆ ಸಂದರ್ಶನ ನೀಡಿದ ಅವರು ಬ್ಯಾನ್ಕ್ರಾಫ್ಟ್ ಪರಿಸ್ಥಿತಿಯ ಬಲಿಪಶು ಎಂದು ಸೂಚ್ಯ ವಾಗಿ ಹೇಳಿದ್ದಾರೆ.
“ನಾನು ಕ್ರಿಕೆಟ್ ಪ್ರವೇಶಿಸಿದ್ದಾಗ ಆಸ್ಟ್ರೇಲಿಯ ತಂಡದ ನಾಯಕರಾಗಿದ್ದ ಅಲನ್ ಬೋರ್ಡರ್ ಚೆಂಡು ವಿರೂಪ ಗೊಳಿಸುವಂತೆ ಹೇಳಿದ್ದರೆ ಇದನ್ನು ಪಾಲಿಸದೇ ಇರುವಷ್ಟು ಧೈರ್ಯ ನನಗಿರಲಿಲ್ಲ. ವ್ಯತ್ಯಾಸವೇನೆಂದರೆ, ಆಗ ಬೋರ್ಡರ್ ನನಗೆ ಹಾಗೆ ಹೇಳಲು ಸಾಧ್ಯವೇ ಇರಲಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ಅಂದಿನ ತರಬೇತುದಾರ ಬಾಬ್ ಸಿಂಪ್ಸನ್ ನನ್ನನ್ನು ಕೊಂದೇ ಬಿಡುತ್ತಿದ್ದರು. ಈಗ ನಿಷೇಧಕ್ಕೊಳಗಾಗಿರುವ ಬ್ಯಾನ್ಕ್ರಾಫ್ಟ್ ತಮ್ಮ ಪರಿಸ್ಥಿತಿಯಲ್ಲಿ ಆ ಕೃತ್ಯವನ್ನು ಎಸಗಲೇಬೇಕಾದ ಸ್ಥಿತಿಯಲ್ಲಿದ್ದರು…’ ಎಂದು ಲ್ಯಾಂಗರ್ ಹೇಳಿಕೊಂಡಿದ್ದಾರೆ. ಲ್ಯಾಂಗರ್ 1993ರಲ್ಲಿ ಆಸ್ಟ್ರೇಲಿಯ ತಂಡವನ್ನು ಪ್ರವೇಶಿಸಿದ್ದರು.
ತಿಂಗಳ ಹಿಂದೆ ಆಸ್ಟ್ರೇಲಿಯ ತಂಡದ ಅಂದಿನ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್, ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಮಾಡಿದ್ದು ಜಗಜ್ಜಾಹೀರಾಗಿತ್ತು. ಪರಿಣಾಮ, ಈ ಮೂವರೂ ಈಗ ನಿಷೇಧಕ್ಕೊಳಗಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.