ಮತದಾನಕ್ಕೆ ಸಕಲ ಸಿದ್ಧತೆ
Team Udayavani, May 12, 2018, 11:36 AM IST
ಬೀದರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮತಯಂತ್ರ ಮತ್ತು ಚುನಾವಣಾ ಸಾಮಗ್ರಿಗಳನ್ನು ವಿತರಿಸುವ ಮಸ್ಟರಿಂಗ್ ಕಾರ್ಯವು ಶುಕ್ರವಾರ ಜಿಲ್ಲೆಯಾದ್ಯಂತ ಶಿಸ್ತುಬದ್ಧವಾಗಿ ನಡೆಯಿತು.
ಆಯಾ ತಾಲೂಕು ಕೇಂದ್ರಗಳಿಂದ ಮತಗಟ್ಟೆಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ಚುನಾವಣಾ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಯಿತು. ಬೀದರ (ದಕ್ಷಿಣ) ಮತ್ತು ಬೀದರ ಉತ್ತರ ಕ್ಷೇತ್ರಗಳ ಮಸ್ಟರಿಂಗ್ ಕಾರ್ಯವು ನಗರದ ಬಿವಿಬಿ ಕಾಲೇಜಿನಲ್ಲಿ ಆವರಣದಲ್ಲಿ ನಡೆಯಿತು. ಮತಗಟ್ಟೆಗಳಿಗೆ ನೇಮಕಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯು ಬೆಳಗ್ಗೆ ಕಾಲೇಜಿನ ಆವರಣಕ್ಕೆ ಸೇರಿದರು. ಇವರನ್ನು ಕರೆದೊಯ್ಯಲು ಬಸ್‌ಗಳು, ಮಿನಿ ಬಸ್‌ಗಳು, ಕ್ರೂಸರ್ ಮತ್ತು ಜೀಪ್‌ಗ್ಳು ಅಲ್ಲಲ್ಲಿ ನಿಂತಿದ್ದವು.
ಆಯಾ ಮತಗಟ್ಟೆಗೆ ತೆರಳಬೇಕಾದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿವರವನ್ನು ಧ್ವನಿವರ್ಧಕದ ಮೂಲಕ ತಿಳಿಸಲಾಯಿತು. ಬಳಿಕ ಮಸ್ಟರಿಂಗ್ ಕೌಂಟರ್‌ನಿಂದ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯುನಿಟ್, ವಿವಿಪ್ಯಾಟ್ ಯಂತ್ರ, ವಿಎಸ್‌ಡಿಯು, ಅಡ್ರಸ್ ಟ್ಯಾಗ್ ಸಿಯು-5, ಬಿಯು-4, ವಿಶೇಷ ಟ್ಯಾಗ್-ಸಿಯು3, ಗ್ರೀನ್ ಪೇಪರ್ ಸೀಲ್ ಸಿಯು-3, ಸ್ಟ್ರೀಪ್ ಸೀಲ್ ಯು-3, ವಿಶೇಷ ಸ್ಟ್ರಿಪ್ ಸೀಲ್ ಬಿಯು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿತರಿಸಲಾಯಿತು.
ಬೀದರ ದಕ್ಷಿಣ ಕ್ಷೇತ್ರದಲ್ಲಿರುವ 228 ಮತಗಟ್ಟೆಗಳ 1,250 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಾಮಗ್ರಿ ವಿತರಿಸಲು 23 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು. 232 ಮತಗಟ್ಟೆಗಳಿರುವ ಬೀದರ ಕ್ಷೇತ್ರದ 1,800 ಸಿಬ್ಬಂದಿಗೆ 20 ಕೌಂಟರ್‌ಗಳ ಮೂಲಕ ಚುನಾವಣಾ ಯಂತ್ರಗಳು ಮತ್ತು ಸಾಮಗ್ರಿಗಳನ್ನು ವಿತರಿಸಲಾಯಿತು. ಕ್ಷೇತ್ರದ ಚುನಾವಣಾಧಿ ಕಾರಿಗಳಾದ ಮನೋಹರ್ ಮತ್ತು ಸಹಾಯಕ ಚುನಾವಣಾಧಿಕಾರಿ ಜಯಶ್ರೀ ಹಿರೇಮಠ ಹಾಗೂ ಇತರರು ಇದ್ದರು.
ಕರ್ತವ್ಯ ಸಿಬ್ಬಂದಿಗೆ ಸೂಚನೆ: ಬೆಳಗ್ಗೆ ಬಿವಿಬಿ ಕಾಲೇಜಿನ ಆವರಣಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾ ಧಿಕಾರಿಗಳಾದ ಡಿಸಿ ಅನಿರುದ್ಧ ಶ್ರವಣ್ ಅವರು ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಮಾತನಾಡಿ, ಮತಗಟ್ಟೆಗಳು ಶಿಸ್ತು ಬದ್ಧವಾಗಿರುವಂತೆ ನೋಡಿಕೊಳ್ಳಬೇಕು. ಪಿಂಕ್ ಬೂತ್‌ಗಳು ಹಾಗೂ ಮಾದರಿ ಮತಗಟ್ಟೆಗಳು ಕೂಡ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಆತಂಕವಿಲ್ಲದೆ ಚುನಾವಣೆಯ ಕರ್ತವ್ಯ ನಿರ್ವಹಿಸುವಂತೆ ಅವರು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಮತದಾನಕ್ಕಾಗಿ ಸರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,
ಈಗಾಗಲೇ ಚುನಾವಣಾಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಿದ್ದು, ಆಯಾ ಮತ ಕ್ಷೇತ್ರಗಳ ತಾಲೂಕು ಕೇಂದ್ರಗಳಲ್ಲಿ ಮತದಾನ ಯಂತ್ರಗಳನ್ನು ಪಡೆದು ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿತ ಮತಗಟ್ಟೆಗಳಿಗೆ ತೆರಳಲಿದ್ದಾರೆ.
ಜಿಲ್ಲೆಯಲ್ಲಿವೆ 1,495 ಮತಗಟ್ಟೆ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಒಟ್ಟು 1,495 ಮತಗಳನ್ನು ಸ್ಥಾಪಿಸಲಾಗಿದೆ. ಭಾಲ್ಕಿ ಕ್ಷೇತ್ರದಲ್ಲಿ ಅತಿ ಹೆಚ್ಚು 264 ಮತಗಟ್ಟೆಗಳಿದ್ದರೆ, ಬೀದರ ದಕ್ಷಿಣದಲ್ಲಿ ಕಡಿಮೆ ಅಂದರೆ 220 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇನ್ನುಳಿದಂತೆ ಬಸವಕಲ್ಯಾಣದಲ್ಲಿ 258, ಹುಮನಾಬಾದ್‌ನಲ್ಲಿ 260, ಬೀದರನಲ್ಲಿ 232 ಹಾಗೂ ಔರಾದ ಕ್ಷೇತ್ರಗಳಲ್ಲಿ 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 64 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬೀದರ ದಕ್ಷಿಣ, ಬಸವಕಲ್ಯಾಣ ಕ್ಷೇತ್ರದಲ್ಲಿ ತಲಾ 13, ಬೀದರ, ಭಾಲ್ಕಿ ಕ್ಷೇತ್ರದಲ್ಲಿ ತಲಾ 11, ಔರಾದ 9 ಮತ್ತು ಹುಮನಾಬಾದ ಕ್ಷೇತ್ರದಲ್ಲಿ 7 ಜನ ಅಭ್ಯರ್ಥಿಗಳು ಸೇರಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 13,19,598 ಮತದಾರರಿದ್ದು, ಅದರಲ್ಲಿ 6,87,586 ಪುರುಷರು ಮತ್ತು 6,31,944 ಮಹಿಳೆಯರು ಅಲ್ಲದೇ 68 ಇತರೆ ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. 1,020 ಸೇವಾ ನಿರತ ಮತದಾರರು ಇದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.