ಶಾಂತಮೂರ್ತಿ ಧೋನಿಯಲ್ಲಿ ಚಿಗುರಿದ ಯೌವನ!
Team Udayavani, May 12, 2018, 11:36 AM IST
ಚುಟುಕು ಕ್ರಿಕೆಟ್‌ನಲ್ಲಿ ರನ್‌ಗಳಿಸಲು ದಿಗ್ಗಜ ಆಟಗಾರರೇ ಪರದಾಡುತ್ತಿದ್ದರೆ, 36ರ ಹರೆಯದ ಮಹೇಂದ್ರ ಸಿಂಗ್ ಧೋನಿ ಮಾತ್ರ ಮತ್ತೂಮ್ಮೆ ತಾವೊಬ್ಬ ಉತ್ತಮ ಮ್ಯಾಚ್ ಫಿನಿಷರ್ ಎಂದು ಸಾಬೀತುಪಡಿಸಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ಧೋನಿಗೆ ವಯಸ್ಸಾಗಿದೆ, ಅವರು ಟಿ20 ಪಂದ್ಯವನ್ನು ಟೆಸ್ಟ್ ರೀತಿಯಲ್ಲಿ ಆಡ್ತಾರೆ, ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಬೇಕು ಎನ್ನುತ್ತಿದ್ದ ಹಿರಿಯ ಆಟಗಾರರು ಹಾಗೂ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಬೆಸ್ಟ್ ಮ್ಯಾಚ್ ಫಿನಿಷರ್ ಆಗಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಕಳೆದ ಕೆಲವು ವರ್ಷಗಳಿಂದ ಫಾರ್ಮ್ ಕಳೆದುಕೊಂಡು ಟೀಕಾಕಾರರಿಗೆ ಆಹಾರವಾಗಿದ್ದರು. ಇದೀಗ ತಮ್ಮ ಹಳೆಯ ಫಾರ್ಮ್ಗೆ ಮರಳಿರುವ ಧೋನಿ ಅತ್ಯಂತ ಒತ್ತಡದ ಸಂದರ್ಭದಲ್ಲಿ ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಐಪಿಎಲ್ ಆರಂಭವಾದ ಪಂದ್ಯದಿಂದಲೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ಧೋನಿ, ಕಿರಿಯರು ನಾಚಿಸುವಂತೆ ಬ್ಯಾಟ್ ಬೀಸುವ ಮೂಲಕ ತಂಡಕ್ಕೆ ಅನಿರೀಕ್ಷಿತ ಗೆಲುವುಗಳನ್ನು ತಂದುಕೊಡುತ್ತಿದ್ದಾರೆ. ಈಗಾಗಲೇ ಒಟ್ಟು 9 ಪಂದ್ಯಗಳನ್ನು ಆಡಿರುವ ಅವರು 82.25ರ ಸರಾಸರಿಯಲ್ಲಿ 329 ರನ್ ದಾಖಲಿಸಿದ್ದಾರೆ. ಐದು ಪಂದ್ಯಗಳಲ್ಲಿ ಔಟಾಗದೆ ಉಳಿದಿರುವುದು ವಿಶೇಷ.
ನೆನಪಾದ ಹಳೇ ಧೋನಿ
ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಆಟವಾಡಿದ ಧೋನಿ ಕೇವಲ 34 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 1 ಬೌಂಡರಿ ಸಮೇತ 70 ರನ್ ಸಿಡಿಸಿದರು. ಅಷ್ಟು ಮಾತ್ರವಲ್ಲ ಗೆಲುವು ಅಸಾಧ್ಯವೆನಿಸಿದ ಪಂದ್ಯದಲ್ಲೂ ತಂಡವನ್ನು ಗೆಲ್ಲಿಸಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು. ಆ ಪಂದ್ಯವನ್ನು ಜನ ಖಂಡಿತ ನೋಡಿರುತ್ತಾರೆ. ಅವತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ ಗೆಲುವಿಗೆ 30 ರನ್‌ಗಳು ಬೇಕಿದ್ದಾಗ ಧೋನಿ ಹಾಗೂ ಬ್ರಾವೋ ಕ್ರೀಸ್‌ನಲ್ಲಿದ್ದರು. 19ನೇ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ 14 ರನ್ ನೀಡಿದರು. ಕೊನೆಯ 6 ಬಾಲ್‌ಗಳಲ್ಲಿ ಗೆಲುವಿಗೆ 16ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ನ ನಾಲ್ಕನೇ ಎಸೆತವನ್ನು ಸಿಕ್ಸರ್ ಬಾರಿಸಿ ಧೋನಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.
ಅತ್ಯುತ್ತಮ ಸ್ಟ್ರೈಕ್‌ರೇಟ್
ಕಳೆದ ಎಲ್ಲ ಐಪಿಎಲ್ ಋತುಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಧೋನಿ ಅತ್ಯುತ್ತಮವಾದ ಸ್ಟ್ರೈಕ್‌ರೇಟ್ (169.58) ಹೊಂದಿದ್ದಾರೆ. 2013ರ 162.89 ಸ್ಟ್ರೈಕ್‌ರೇಟ್ ಈ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.
ಸಿಕ್ಸರ್ ಕಿಂಗ್ ಧೋನಿ
ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಈವರೆಗೆ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ (ಮೇ 8ರಷ್ಟೊತ್ತಿಗೆ) ಎಂಬ ಹೆಗ್ಗಳಿಕೆಗೆ 36ರ ಹರೆಯದ ಧೋನಿ ಪಾತ್ರವಾಗಿದ್ದಾರೆ. ತಾವಾಡಿರುವ 9 ಪಂದ್ಯಗಳಲ್ಲಿ 27 ಸಿಕ್ಸರ್ ಬಾರಿಸಿರುವ ಅವರು ಪ್ರಸಕ್ತ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಧೋನಿ ಕ್ರೀಸ್‌ನಲ್ಲಿದ್ದರೆ ಗೆಲುವು ಪಕ್ಕಾ!
ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ನಲ್ಲಿದ್ದರೆ ಗುರಿ ಎಷ್ಟಿದ್ದರೂ ಗೆಲುವು ಮಾತ್ರ ನಮ್ಮದೇ ಎಂಬುದು ಚೆನ್ನೈ ಆಟಗಾರರ ನಂಬಿಕೆಯಾಗಿದೆ. ಅದಕ್ಕೆ ತಕ್ಕಂತೆ ಧೋನಿ ಅತ್ಯುತ್ತಮವಾಗಿ ಆಡುವ ಮೂಲಕ ಗೆಲುವು ತಂದುಕೊಡುತ್ತಿದ್ದಾರೆ. ಓವರ್‌ಗೆ 20 ರನ್ ಅಗತ್ಯವಿದ್ದರೂ ಗೊಂದಲಕ್ಕೆ ಒಳಗಾಗದೆ,
ತಾಳ್ಮೆಯಿಂದ ಬ್ಯಾಟ್ ಬೀಸುತ್ತಾ ಸಿಕ್ಸರ್, ಫೋರ್ ಗಳೊಂದಿಗೆ ಗೆಲುವಿನ ಮಾಲೆ ಹೆಣೆಯುವ ಧೋನಿ
ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ.
ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.