ಕಾಪಾಡೋ ಬಿದನಗೆರೆಯ ಶನೈಶ್ಚರ


Team Udayavani, May 12, 2018, 12:12 PM IST

200.jpg

ಬಿದನಗೆರೆ, ಸತ್ಯ ಶನೈಶ್ಚರ ಸ್ವಾಮಿಯ ನೆಲೆವೀಡು ಎಂದೇ ಹೆಸರಾಗಿದೆ. ಬಸವಣ್ಮ ಹಾಗೂ ಪಂಚಮುಖೀ ಆಂಜನೇಯನ ದೇಗುಲಗಳೂ ಇಲ್ಲಿವೆ. ಸಾಮೂಇಕ ವಿವಾಹ, ಉಚಿತ ಆರೋಗ್ಯ ತಪಾಸಣೆಯಂಥ ಕಾರ್ಯಕ್ರಮಗಳಿಂದಲೂ ಈ ಕ್ಷೇತ್ರ ಜನಮನ್ನಣೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ. 

 ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕು ಬಿದನಗೆರೆ ಎಂದರೆ ಅದು ಐತಿಹಾಸಿಕ ಶ್ರೀ ಸತ್ಯಶನೇಶ್ಚರಸ್ವಾಮಿ ದೇವಾಲಯವಿರುವ ಪುಣ್ಯ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದೆ. ಇದರ ಜೊತೆಗೆ ಉದ್ಬವ ಬಸವ, ಪಂಚಮುಖೀ ಆಂಜನೇಯಸ್ವಾಮಿಯ ದೇಗುಲಗಳೂ ಇಲ್ಲಿವೆ. ಅರಸಿ ಬಂದ ಭಕ್ತರ ಕಷ್ಟನಿವಾರಣೆ ಇಲ್ಲಿ ಸಾಧ್ಯ ಎನ್ನುವ ನಂಬಿಕೆ ಎಲ್ಲೆಡೆ ಹರಡಿರುವುದರಿಂದ ಈ ಕ್ಷೇತ್ರದಲ್ಲಿ ನಿತ್ಯ ಜನಸಾಗರ. 

 ಈ ದೇವಾಲಯದ ಹಿಂದೆ ಕೌತುಕವಾದ ಇತಿಹಾಸವೇ ಅಡಗಿದೆ. 
 ಸುಮಾರು  200 ವರ್ಷಗಳ ಹಿಂದೆ ಬಿದನಗೆರೆಯ ಕುರುಬರಹಟ್ಟಿ ಗ್ರಾಮದ ಬಸವಣ್ಣನ ಕಟ್ಟೆಯಲ್ಲಿ ಉದ್ಬವ ಬಸವಣ್ಣನನ್ನು ಗ್ರಾಮದ ಜನರು ಪ್ರತಿಷ್ಠಾಪಿಸಿ, ಆರಾಧ್ಯ ದೆ„ವವಾಗಿ ಪೂಜಿಸುತ್ತಿದ್ದರಂತೆ. ಈ ಬಸವಣ್ಣನ ಮೂರ್ತಿ ಚಾಲುಕ್ಯರ ಶೆ„ಲಿಯ ಕೆತ್ತನೆ ರೂಪದಲ್ಲಿ ಇತ್ತು. ಹೀಗಿರುವಾಗಲೇ ಅದೊಮ್ಮೆ ಭೀಕರ ಬರಗಾಲ ಎದುರಾಯಿತು. ಪರಿಣಾಮ, ಜನರು ತಮ್ಮ ಗ್ರಾಮವನ್ನು ತೊರೆದು ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ಎದುರಾಯಿತು. ಊರು ಬರಿದಾದ ಮೇಲೆ, ಆದರೆ ಪ್ರಾಕೃತಿಕ ಹೊಡೆತಕ್ಕೆ ಸಿಲುಕಿದ ಬಸವಣ್ಣನ ಮೂರ್ತಿ ಮಣ್ಣಿನಲ್ಲಿ ಮುಚ್ಚಿಹೊಯಿತು. ವರ್ಷಗಳು ಉರುಳಿದಂತೆ ಮಳೆಯ ನೀರು ಹರಿದು ಮಣ್ಣು ಕರಗಿ ಬಸವಣ್ಣನ ಮೂರ್ತಿ ಕಾಣಿಸತೊಡಗಿತು.  ಇದನ್ನು ಬಿದನಗೆರೆ ಗ್ರಾಮದ ಡಾ.ಧನಂಜಯ್ಯಸ್ವಾಮೀಜಿ ಗಮನಿಸಿ, ಮಣ್ಣಿನಿಂದ ಬಸವಣ್ಣನನ್ನು  ಹೊರತೆಗೆದು ಪೂಜಿಸಲು ಶುರುಮಾಡಿದರು.  ಜೊತೆಗೆ ಶ್ರೀ ಸತ್ಯ ಶನೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿ ಅಲ್ಲೊಂದು ದೇವಾಲಯವನ್ನು ನಿರ್ಮಿಸಿದರು ಎನ್ನುತ್ತದೆ ಇತಿಹಾಸ.  

  ದೇವಾಲಯ ಗೋಪುರದ ಮೇಲೆ ಈಶ್ವರ, ಗಣಪತಿ, ಷಣ್ಮುಖ, ಸುಬ್ರಮಣ್ಯ, ಲಕ್ಷಿ$¾à ಸೇರಿದಂತೆ 21 ವಿವಿಧ ದೇವರುಗಳ ಸುಂದರ ಕೆತ್ತನೆಗಳಿದ್ದು, ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಪ್ರವೇಶ ದ್ವಾರವನ್ನು ಅಂದಗಾಣಿಸಲು ಮಾಡಿರುವ ಕುಸುರಿ ಕೆಲಸ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ಗರ್ಭಗುಡಿಯಲ್ಲಿ ಶನೈಶ್ಚರಸ್ವಾಮಿಯೊಂದಿಗೆ ಶಿವ ,ಗಣಪತಿ ಹಾಗೂ  ನವಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಎದುರಿನಲ್ಲಿ ನಂದಿ ವಿಗ್ರಹವಿದೆ.  ನಿತ್ಯ ಪೂಜೆ ನಡೆಯುವ ಈ ದೇವಾಲಯದಲ್ಲಿ ಶಿವರಾತ್ರಿಯಂದು ಸುತ್ತಮುತ್ತಲ ಹತ್ತಾರು ಗ್ರಾಮಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತಾದಿಗಳು ಸೇರುತ್ತಾರೆ. ಈ ಸಂದರ್ಭದಲ್ಲಿ ವಿಶೇಷವಾದ ಅಭಿಷೇಕಗಳು ನಡೆಯುತ್ತವೆ. 

 ಭಕ್ತಾದಿಗಳಿಗೆ ಅನ್ನ ಸಂತರ್ಪಣೆ,  ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ದೇವಾಲಯದ ಆಡಳಿತ ಮಂಡಳಿಯಿಂದ ವ್ಯವಸ್ಥೆ ಮಾಡಲಾಗಿದೆ. ಈಗ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಸಹಾಸ್ರರು ಭಕ್ತರ ಅರಾಧ್ಯ ದೆ„ವವಾಗಿದೆ. 

  ಜಾತಿ, ಭಾಷೆ, ವರ್ಗ ಎನ್ನದೆ ಮದುವೆಯಾಗಲು ಇಚ್ಛಿಸುವ ವಧುವರರಿಗೆ ಶ್ರೀ ಕ್ಷೇತ್ರದಲ್ಲಿ ಸರಳ ವಿವಾಹ ನಡೆಯುತ್ತದೆ. ಆಡಳಿತ ಮಂಡಳಿಯಿಂದ ವಧು ಹಾಗೂ ವರನಿಗೆ ಮಾಂಗಲ್ಯ, ಕಾಲುಂಗರ, ವಸ್ತ್ರಗಳನ್ನು ಉಚಿತವಾಗಿ ನೀಡುತ್ತಾರೆ. ಈಗಾಗಲೇ 169 ಹೆಚ್ಚು ಜೋಡಿಗಳು ಇಲ್ಲಿ ಸಪ್ತಪದಿ ತುಳಿದಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಶ್ರೀ ಕ್ಷೇತ್ರದಲ್ಲಿ ನುರಿತ ತಜ್ಞ ವೈದ್ಯರಿಂದ   ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ.  ಹೀಗೆ ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳೂ ಈ ಕ್ಷೇತ್ರದಲ್ಲಿ ನಡೆಯುತ್ತಿದೆ.  ದೇವಾಲಯವು ತುಮಕೂರು ಜಿಲ್ಲಾ ಕೇಂದ್ರದಿಂದ 38 ಕಿ.ಮೀ ಹಾಗೂ ಕುಣಿಗಲ್‌ ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ಇದೆ. ಬಿದನಗೆರೆ ತಲುಪಲು ಕುಣಿಗಲ್‌ನಿಂದ ಸಾಕಷ್ಟು ಬಸ್‌ ಹಾಗೂ ಆಟೋಗಳ ವ್ಯವಸ್ಥೆ ಇರುತ್ತದೆ. 

ಲೋಕೇಶ್‌

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.