ಜಿಲ್ಲೆಯಲ್ಲೇ ಮತ ದಾಖಲೆ ಮಾಡಿದ ಸೇಡಂ ಕ್ಷೇತ್ರ
Team Udayavani, May 13, 2018, 2:44 PM IST
ಸೇಡಂ: ಕೆಲ ಸಣ್ಣಪುಟ್ಟ ಗೊಂದಲ, ಗದ್ದಲಗಳ ಮಧ್ಯೆ ಮತದಾನ ಶಾಂತಿಯುತವಾಗಿ ಜರುಗಿದ್ದು, ಜಿಲ್ಲೆಯಲ್ಲೇ ಶೇ.73.89 ಮತಗಳು ಚಲಾವಣೆಯಾಗಿದ್ದು ತಾಲೂಕು ಆಡಳಿತ ಪ್ರಶಂಸೆಗೆ ಪಾತ್ರವಾಗಿದೆ.
ವಿಧಾನಸಭೆ ವ್ಯಾಪ್ತಿಯ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ 261 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಬಿಸಿಲ ಧಗೆಯಲ್ಲೂ ಸಾಲುಗಟ್ಟಿ ಬಂದ ಮತದಾರರು ಮತದಾನ ಮಾಡಿದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ದೇವನೂರ, ದುಗನೂರ, ಮೋತಕಪಲ್ಲಿ, ಮುಧೋಳ ಹಂದರಕಿ, ವೆಂಕಟಾಪುರ
ತಾಂಡಾಗಳಲ್ಲಿ ಕೆಲ ಸಣ್ಣಪುಟ್ಟ ಗದ್ದಲಗಳು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ನಡೆದವಾದರೂ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿತು.
ಅಭ್ಯರ್ಥಿಗಳ ಮತ: ತಮ್ಮ ಊರು ಊಡಗಿ ಗ್ರಾಮದಲ್ಲಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮತದಾನ ಮಾಡಿದರೆ, ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲ್ಕೂರ ವಿದ್ಯಾನಗರ ಬಡಾವಣೆಯಲ್ಲಿ ಪತ್ನಿ ಸಂತೋಷಿರಾಣಿ ಜೊತೆ ಆಗಮಿಸಿ ಮತದಾನ ಮಾಡಿದರು.
ಕಾಂಗ್ರೆಸ್‌ಗೆ ಮತ ಹಾಕಲು ಒತ್ತಾಯ: ದುಗನೂರ ಗ್ರಾಮದಲ್ಲಿ ಪೋಲಿಂಗ್ ಸಿಬ್ಬಂದಿ ಮತದಾರರಿಗೆ ಕಾಂಗ್ರೆಸ್‌ಗೆ ಮತ ನೀಡುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿ, ಅಧಿಕಾರಿಯನ್ನು ಹೊರ ಕಳಿಸುವಂತೆ ಒತ್ತಾಯಿಸಿದರು. ಇದರಿಂದ ಕೆಲಹೊತ್ತು ಮತ ಕೇಂದ್ರದ ಬಳಿ ಗೊಂದಲ ಸೃಷ್ಟಿಯಾಗಿತ್ತು, ಅಲ್ಲದೆ ಸಿಪಿಐ ಮಹಾದೇವ
ಪಂಚಮುಖೀ ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಮುಖಂಡ ಬಸವರಾಜ ಭೂತಪುರ, ನಾಗೇಂದ್ರಪ್ಪ ಸಾಹುಕಾರ, ಶಿವಕುಮಾರ ಪಾಟೀಲ, ಪೋಲಿಂಗ್ ಬೂತ್ ಸಿಬ್ಬಂದಿ ಕಾಂಗ್ರೇಸ್ ಮುಖಂಡ ಸಿದ್ದು ಬಾನಾರ ಅವರ ಪತ್ನಿಯಾಗಿದ್ದು, ಮೋಸದಿಂದ ಮತದಾರರನ್ನು ಕಾಂಗ್ರೆಸ್‌ಗೆ ಮತ ಹಾಕಲು ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಸಿಬ್ಬಂದಿಯನ್ನು ಹೊರಕಳಿಸಿದಾಗ ಪರಿಸ್ಥಿತಿ ತಿಳಿಗೊಂಡಿತು.
100 ಮೀ ಒಳಗೆ ಪ್ರಚಾರ: ಇನ್ನು ಕೋಡ್ಲಾ ಮತ್ತು ಬೆನಕನಹಳ್ಳಿ ಒಳಗೊಂಡಂತೆ ಅನೇಕ ಗ್ರಾಮಗಳ ಮತಗಟ್ಟೆಯ 100 ಮೀಟರ್ ಒಳಗಡೆ ಪ್ರಚಾರ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ತೆರೆಮರೆಯಲ್ಲಿ ಮತದಾರನನ್ನು ಸೆಳೆಯಲು ಹಣ ಮತ್ತು ಹೆಂಡ ಸಹ ಹಂಚಿಕೆ ಮಾಡಲಾಗುತ್ತಿತ್ತು.
1 ಗಂಟೆ ಮತದಾನಕ್ಕೆ ತಡೆ: ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಒಂದು ಗಂಟೆಕಾಲ ಮತದಾನ ಸ್ಥಗಿತಗೊಂಡಿತ್ತು. ನಂತರ ಆಗಮಿಸಿದ ಅ ಧಿಕಾರಿಗಳು ವಿವಿಪ್ಯಾಟ್ ಬದಲಾಯಿಸಿ, ಮತದಾನಕ್ಕೆ ಅನುವು ಮಾಡಿಕೊಟ್ಟರು. ಸಚಿವ ಡಾ. ಶರಣಪ್ರಕಾಶ ಪಾಟೀಲ ಆಡಕಿ ಗ್ರಾಮಕ್ಕೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಅವರು ಕುಳಿತಿದ್ದ ಕಾರ್‌ನ್ನು ತಡೆದು ಮೋದಿ ಮೋದಿ ಎಂದು ಘೋಷಣೆ ಕೂಗಿದ ಪ್ರಸಂಗ ನಡೆಯಿತು. ಈ ವೇಳೆ ಸಚಿವರು ಕಾರಿನಿಂದ ಇಳಿಯದೇ ಹಾಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.