ಮತಗಟ್ಟೆಯಲ್ಲಿ ಅವ್ಯವಸ್ಥೆ-ಮಧ್ಯಾಹ್ನ ಸರಿಯಾಯ್ತು
Team Udayavani, May 13, 2018, 3:29 PM IST
ಮುದ್ದೇಬಿಹಾಳ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶನಿವಾರ ಕೆಲ ಕಡೆ ಮತಯಂತ್ರ ಕೈಕೊಟ್ಟು ಮತದಾನ ತಡವಾಗಿದ್ದು ಹೊರತು ಪಡಿಸಿ ಎಲ್ಲ 239 ಮತಗಟ್ಟೆಗಳಲ್ಲಿ ಶಾಂತಯುತವಾಗಿ ಮತದಾನ ನಡೆಯಿತು. ಮತದಾನ ಸಂದರ್ಭದಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನವಿಲ್ಲದ ಕಾರಣ ಮತದಾರರು ಬಿಸಿಲಿನಿಂದ ಮುಕ್ತವಾಗಿ ಸಾಲಾಗಿ ನಿಂತು ಮತದಾನ ಮಾಡಿದರು.
ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ 121ನೇ ಮತಗಟ್ಟೆಯನ್ನು ಸಖೀ ಪಿಂಕ್ ಮಹಿಳಾ ಮತಗಟ್ಟೆ ಕೇಂದ್ರವನ್ನಾಗಿ ಮಾಡಿ ಕೋಣೆಯನ್ನು ಗುಲಾಬಿ ಬಣ್ಣದಿಂದಲೇ ಅಲಂಕರಿಸಿದ್ದು ಗಮನ ಸೆಳೆಯಿತು. ಇನ್ನುಳಿದಂತೆ ಆಯಾ ಪಕ್ಷದ ಏಜೆಂಟರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದು ಹಾಗೂ ಮತದಾರರಿಗೆ ಬಡಾವಣೆಯಿಂದ ಮತಗಟ್ಟೆಗೆ ಬರಲು ಆಟೋ ವ್ಯವಸ್ಥೆ ಮಾಡಿದ್ದು ಕಂಡು ಬಂತು.
ಮತಗಟ್ಟೆಯಲ್ಲಿ ಅವ್ಯವಸ್ಥೆ: ಇಲ್ಲಿನ ಬಜಾರ್‌ನಲ್ಲಿರುವ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿನ 140, 141ನೇ ಮತಗಟ್ಟೆಯಲ್ಲಿ ವಿದ್ಯುತ್ ಬಲ್ಬ್ ವ್ಯವಸ್ಥೆ ಇಲ್ಲದ್ದರಿಂದ ಮತಗಟ್ಟೆಯೊಳಗೆ ಬೆಳಕಿನ ಸಮಸ್ಯೆ ಕಾಡಿತು. ನಂತರ ಚುನಾವಣಾ ಧಿಕಾರಿ ಗಮನಕ್ಕೆ ಬಂದ ತಕ್ಷಣ ಮಧ್ಯಾಹ್ನದ ನಂತರ ಸರಿಪಡಿಸಲಾಯಿತು.
ಕೈ ಕೊಟ್ಟ ಮತಯಂತ್ರ: ಮುದ್ದೇಬಿಹಾಳ ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟು ಅರ್ಧಗಂಟೆ, ನಾಲತವಾಡ ಪಟ್ಟಣದಲ್ಲಿನ 194ನೇ ಮತಗಟ್ಟೆಯಲ್ಲಿ 2 ಗಂಟೆ ತಡವಾಗಿ ಮತದಾನ ಶುರುವಾಯಿತು.
ಯರಝರಿಯ 179ನೇ ಮತಗಟ್ಟೆಯಲ್ಲಿ ಮಧ್ಯಾಹ್ನ 12:30ರ ಸುಮಾರು 373 ಮತ ಚಲಾವಣೆ ಆಗಿದ್ದ ವೇಳೆ ಮತಯಂತ್ರ ಕೈಕೊಟ್ಟು ಅಂದಾಜು 2 ಗಂಟೆವರೆಗೆ ಮತದಾನ ಸ್ಥಗಿತಗೊಂಡಿತ್ತು. ಇಲ್ಲಿ 1060 ಮತಗಳಿದ್ದು ಮತ ಹಾಕಲು ಬಂದ ಮತದಾರರು ಮತದಾನ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಉಳಿದಂತೆ ಕೆಲವೆಡೆ ಇಂಥ ಘಟನೆಗಳು ಬೆಳಕಿಗೆ ಬಂದಿದ್ದು ತಜ್ಞರು ಸ್ಥಳಕ್ಕೆ ದೌಡಾಯಿಸಿ ಸಮಸ್ಯೆ ಬಗೆಹರಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
ಮತದಾನ ಸಿಬ್ಬಂದಿಗೆ ತರಾಟೆ: ಸರೂರ ಗ್ರಾಮದಲ್ಲಿನ ಮತಗಟ್ಟೆಯೊಂದರಲ್ಲಿ ಮತದಾನ ಸಿಬ್ಬಂದಿಯೊಬ್ಬರು ಕಾಂಗ್ರೆಸ್ ಪರ ನಿಲುವು ತಾಳಿದ್ದಾರೆ ಎನ್ನುವ ಮಾಹಿತಿ ದೊರೆತ ಹಿನ್ನೆಲೆ ಅದೇ ಗ್ರಾಮದವರಾಗಿರುವ ಜನಸಾಮಾನ್ಯರ ಪಕ್ಷದ ಅಭ್ಯರ್ಥಿ ಡಾ| ಅಯ್ಯಪ್ಪ ದೊರೆ ಸ್ಥಳಕ್ಕೆ ಧಾವಿಸಿ ಆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ನಿಷ್ಪಕ್ಷಪಾತವಾಗಿ ಕೆಲಸ ಮಾಡದಿದ್ದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳಿಂದ ಮತದಾನ: ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ನಾಡಗೌಡ ಪತ್ನಿ ಸುವರ್ಣ ಸಮೇತ ಬಲದಿನ್ನಿಯ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ, ಬಿಜೆಪಿ ಅಭ್ಯರ್ಥಿ ಎ.ಎಸ್. ಪಾಟೀಲ ನಡಹಳ್ಳಿ ಪತ್ನಿ ಮಹಾದೇವಿ ಸಮೇತ ನಡಹಳ್ಳಿಯ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ, ಜೆಡಿಎಸ್ ಅಭ್ಯರ್ಥಿ ಮಂಗಳಾದೇವಿ ಬಿರಾದಾರ ಪತಿ ಶಾಂತಗೌಡ ಸಮೇತ ನಾಗರಾಳ ಗ್ರಾಮದ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮತವಂಚಿತ ಅಭ್ಯರ್ಥಿಗಳು: ಜನಸಾಮಾನ್ಯರ ಪಕ್ಷದ ಅಭ್ಯರ್ಥಿ ಡಾ| ಅಯ್ಯಪ್ಪ ದೊರೆ ಅವರ ಮತ ಬೆಂಗಳೂರಿನಲ್ಲಿ, ನಮ್ಮ ಕಾಂಗ್ರೆಸ್ ಅಭ್ಯರ್ಥಿ ವರ್ತೂರು ರಕ್ಷಿತ್ ಮತ ಕೋಲಾರ ಜಿಲ್ಲೆ ಬಿ.ಹೊಸಹಳ್ಳಿಯಲ್ಲಿ ಇವೆ. ಇವರು ಇಲ್ಲಿ
ಸಕ್ರಿಯರಾಗಿದ್ದರಿಂದ ಅಲ್ಲಿಗೆ ಹೋಗಿ ಮತ ಚಲಾಯಿಸುವುದು ಸಾಧ್ಯವಾಗದೆ ಮತ ಹಕ್ಕಿನಿಂದ ವಂಚಿತರಾದರು.
ಕೋಳೂರಲ್ಲಿ ಶಾಂತಿ: ತಾಲೂಕಿನ ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರವಾದ ಕೋಳೂರು ಗ್ರಾಮದಲ್ಲಿ ಶಾಂತಿಯುತ ಮತದಾನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.