ದಾವಣಗೆರೆ ದಕ್ಷಿಣ: ಸಂಜೆ ಏರಿದ ಮತದಾನದ ಪ್ರಮಾಣ
Team Udayavani, May 13, 2018, 5:30 PM IST
ದಾವಣಗೆರೆ: ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತದಾನ ದಿನದ ಸಂಜೆಯವರೆಗೆ ನೀರಸ ಇದ್ದದ್ದು, ಮತದಾನ ಗಡುವು ಇನ್ನೇನು ಮುಗಿಯಲು ಕೆಲವೇ ಕ್ಷಣ ಇರುವಾಗ ಏಕಾಏಕಿ ಕಾವೇರಿತು.
ಎಲ್ಲೂ ಸಹ ಗಂಭೀರ ಸ್ವರೂಪದ ಗಲಾಟೆ, ಗೊಂದಲ ಇಲ್ಲದೆ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 8 ಗಂಟೆಯಿಂದಲೇ ಮತಗಟ್ಟೆಗಳಿಗೆ ಮತದಾರರು ಆಗಮಿಸಲು ಆರಂಭಿಸಿದರು. ಆದರೆ, ಮತದಾನ ಕೇಂದ್ರಕ್ಕೆ ಬರುವವರ ಸಂಖ್ಯೆ ಮಾತ್ರ ಕಡಿಮೆ ಇತ್ತು. ಮಧ್ಯಾಹ್ನದವರೆಗೆ ಇದೇ ರೀತಿ ಇತ್ತು. ಆದರೆ, 3 ಗಂಟೆ ನಂತರ ಏಕಾಏಕಿ ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡು ಬಂತು. ಅದರಲ್ಲೂ ಕೊನೆಯ ಒಂದು ತಾಸು ಎಲ್ಲಾ ಮತಗಟ್ಟೆಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದು ಗೋಚರಿಸಿತು.
ಕಾರ್ಲ್ ಮಾರ್ಕ್ ನಗರ, ಶಿವನಗರ, ಭಾಷಾನಗರದ ಹಲವು ಮತಗಟ್ಟೆಗಳಲ್ಲಿ ಸಂಜೆಯ 6 ಗಂಟೆಯ ನಂತರವೂ ಜನರ ಸಾಲುಗಟ್ಟಿ ಮತ ಹಾಕಲು ನಿಂತಿದ್ದರು. ಚುನಾವಣಾಧಿಕಾರಿಗಳು 6 ಗಂಟೆಯವರೆಗೆ ಬಂದವರಿಗೆ
ಮೊದಲೇ ಚೀಟಿ ನೀಡಿ, ಮತ ಹಾಕಲು ಅವಕಾಶ ಮಾಡಿಕೊಟ್ಟರು. ನಂತರ ಬಂದವರಿಗೆ ಮತ ಹಾಕಲು
ನಿರಾಕರಿಸಲಾಯಿತು.
ಗಾಂಧಿನಗರ, ಆಶ್ರಯ ಕಾಲೋನಿ, ದೇವರಾಜ ಅರಸು ಬಡಾವಣೆ ಭಾಗದಲ್ಲಿ ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆ ಚುರುಕಾಗಿತ್ತು. ಸಂಜೆ 6 ಗಂಟೆಯ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿನ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು.
ಅತ್ಯಂತ ಜನಸಾಂದ್ರತೆ ಇರುವ ಭಾಷಾನಗರ, ಆಜಾದ್ ನಗರದ ಭಾಗದ ಮತಗಟ್ಟೆಗಳ ಮುಂದೆ ಜನ ಜಮಾಯಿಸುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ರಕ್ಷಣಾ ಸಿಬ್ಬಂದಿ ಈ ಜನರನ್ನು ಚದುರಿಸಲು ಪದೇ ಪದೇ ಹರಸಾಹಸ ಪಡುತ್ತಲೇ ಇದ್ದರು. ಭಾಷಾ ನಗರದ 12 ತಿರುವಿನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಪಾಲಿಕೆ ಸದಸ್ಯರೊಬ್ಬರನ್ನು ಯುವಕರ ಗುಂಪೊಂದು ಅವರು ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಬಂದಿದ್ದು ಕಂಡು ಬಂತು. ಕೊನೆಗೆ ಪೊಲೀಸರು ಅವರನ್ನು ಚದುರಿಸಿದರು.
ಇದೇ ರೀತಿ ಸಂಜೆ 4 ಗಂಟೆಯ ವೇಳೆಗೆ ಶಿವನಗದಲ್ಲಿ ಗೊಂದಲ ಸೃಷ್ಟಿಯಾಯಿತು. ಪಾಲಿಕೆ ಸದಸ್ಯ, ಕಾಂಗ್ರೆಸ್
ಮುಖಂಡ ಶಿವನಗರದಲ್ಲಿ ಕಾಣಿಸಿಕೊಂಡರು. ಜೆಡಿಎಸ್ ಅಭ್ಯರ್ಥಿ ಅಮಾನುಲ್ಲಾ ಖಾನ್ ಇದನ್ನು ವಿರೋಧಿಸಿದರು.
ಉತ್ತರ ಕ್ಷೇತ್ರದ ಪಕ್ಷದ ಮುಖಂಡ ದಕ್ಷಿಣ ಕ್ಷೇತ್ರಕ್ಕೆ ಬಂದದ್ದನ್ನು ಪ್ರಶ್ನಿಸಿದರು. ಕೊನೆಗೆ ಚುನಾವಣಾ ಫ್ಲೆಯಿಂಗ್ ಸ್ಕಾರ್ಡ್
ಸ್ಥಳಕ್ಕೆ ಬರುತ್ತಲೇ ಪಾಲಿಕೆ ಸದಸ್ಯ ದಿನೇಶ್ ಶೆಟ್ಟಿ ಆದಿಯಾಗಿ ಎಲ್ಲರೂ ಅಲ್ಲಿಂದ ತೆರಳಿದರು. ಇದಕ್ಕೂ ಮುನ್ನ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆದಿತ್ತು.
ಭಾವುಕರಾದ ಜಾಧವ್ ಬಿಜೆಪಿ ಅಭ್ಯರ್ಥಿ ಯಶವಂತರಾವ್ ಜಾಧವ್ ದೇವರಾಜ ಅರಸು ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ತಮ್ಮ ಪತ್ನಿಯೊಂದಿಗೆ ಮತದಾನ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಭಾವುಕರಾದರು. ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದೇನೆ. ನಾಲ್ಕನೆ ಬಾರಿಗೆ ಸ್ಪರ್ಧೆ ಮಾಡುತ್ತಿದ್ದೇನೆ. ಈ ಬಾರಿಯಾದರೂ ಮತದಾರ ಪ್ರಭು ಕೈ ಹಿಡಿಯಲಿದ್ದಾರೆಂಬ ನಂಬಿಕೆ ಇದೆ ಎಂದು ನಗರದ ದೇವತೆ ದುರ್ಗಾಂಬಿಕೆ, ಕುಲದೇವತೆ ಅಂಬಾ ಭವಾನಿಯರನ್ನು ನೆನೆದು ಕಣ್ಣೀರಿಟ್ಟರು. ಕೊನೆಗೆ ಪತ್ನಿ ಸಮಾಧಾನ ಪಡಿಸಿದರು.
ಎಲ್ಲೆಡೆ ಹಣ ಹಂಚಿಕೆ ಮಾತು ಅಲ್ಲಲ್ಲಿ ಹಣ ಹಂಚಿಕೆಯಾಗಿದ್ದ ಕುರಿತು ಮಾತುಗಳು ಕೇಳಿಬಂದವು. ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮಾನುಲ್ಲಾ ಖಾನ್ ಹಣ ಹಂಚಿಕೆ ಕುರಿತು ಆರೋಪ ಸಹ ಮಾಡಿದರು. ನಾಲ್ಕಾರು ಕಡೆ ಹಣ ಹಂಚಿಕೆ ಮಾಡುವುದನ್ನು ವೀಡಿಯೋ ಸಮೇತ ಚಿತ್ರೀಕರಿಸಿರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ಸಹ ನೀಡಿದರು. ಆದರೆ, ಇಡೀ ದಿನ ಅಲ್ಲಲ್ಲಿ ಹಣ ಹಂಚಿಕೆಮಾಡುವ ಕುರಿತು ಮಾತುಗಳು ಮಾತ್ರ ಕ್ಷೇತ್ರದಲ್ಲಿ ಕೇಳಿಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.