ಅಮೆರಿಕ ಮಾದರಿ ವಾಯುದಳ ಹೋರಾಟಕ್ಕೆ ಭಾರತ ತಯಾರಿ
Team Udayavani, May 14, 2018, 5:05 AM IST
ಜೈಪುರ : ಅಮೆರಿಕ ಸೇನೆಯು ವಿಯೆಟ್ನಾಂ ಯುದ್ಧದಲ್ಲಿ ಬಳಸಿದ ವಾಯುದಳ (ಏರ್ ಕ್ಯಾವಲರಿ) ಮಾದರಿಯ ಹೋರಾಟದ ತರಬೇತಿಯನ್ನು ಭಾರತೀಯ ಸೇನೆ ನಡೆಸಿದೆ. ರಾಜಸ್ಥಾನದ ಸೂರತ್‌ಗಡದ ಉರಿಬಿಸಿಲಿನಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ಇದರಿಂದ ಯುದ್ಧದ ಸಂದರ್ಭದಲ್ಲಿ ಭೂಸೇನೆಯ ಜೊತೆಗೇ ವಾಯುಪಡೆ ಕೂಡ ಕೆಲಸ ಮಾಡಲಿದೆ. ಇದರಿಂದ ಶತ್ರುಗಳನ್ನು ಸದೆಬಡಿಯುವುದು ಸುಲಭವಾಗಲಿದೆ.
ವಿಜಯ್ ಪ್ರಹಾರ್: ಸಾಮಾನ್ಯವಾಗಿ ಯುದ್ಧ ಅಥವಾ ಪ್ರತಿದಾಳಿ ಸಂದರ್ಭದಲ್ಲಿ ಭೂಸೇನೆಗೆ ನಿಲುಕದ ಪ್ರದೇಶದಲ್ಲಿ ವಾಯುಪಡೆಯ ಹೆಲಿಕಾಪ್ಟರುಗಳು ದಾಳಿ ನಡೆಸುತ್ತವೆ. ಆದರೆ ಏರ್ ಕ್ಯಾವಲರಿ ಶೈಲಿಯ ಹೋರಾಟದಲ್ಲಿ ಭೂಸೇನೆಯ ಜೊತೆಗೇ ವಾಯುಪಡೆಯೂ ಕಾರ್ಯನಿರ್ವಹಿಸುತ್ತದೆ. ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಗಳು ಭೂಸೇನೆಯೊಂದಿಗೆ ಸಂವಹನ ನಡೆಸಿ, ನಿಗದಿತ ಸ್ಥಳದ ಮೇಲೆ ದಾಳಿ ನಡೆಸುವುದು ಹಾಗೂ ಭೂಸೇನೆ ಮುಂದುವರಿಯಲು ನೆರವು ನೀಡುವುದು, ಶತ್ರುಗಳ ಸ್ಥಿತಿಯ ಬಗ್ಗೆ ವಿವರ ನೀಡುವುದನ್ನು ಹೆಲಿಕಾಪ್ಟರ್‌ಗಳು ಮಾಡುತ್ತವೆ. ಇದಕ್ಕೆ ಉತ್ತಮ ಸಂವಹನ ಹಾಗೂ ನಿಖರತೆ ಅಗತ್ಯವಿದ್ದು, ಕಾಲಕಾಲಕ್ಕೆ ಭೂಸೇನೆ ಹಾಗೂ ವಾಯುಪಡೆಗಳು ಅಪ್ ಡೇಟ್ ಆಗಬೇಕಿರುತ್ತವೆ. ಇದರಿಂದ ಸೇನೆ ತನ್ನ ಗುರಿಯನ್ನು ತ್ವರಿತವಾಗಿ ಸಾಧಿಸಬಹುದು ಹಾಗೂ ಶತ್ರುಗಳನ್ನು ಶೀಘ್ರವಾಗಿ ಸದೆಬಡಿಯಬಹುದು. ಯುದ್ಧ ಅಥವಾ ದಾಳಿಯ ತಂತ್ರಗಳ ಪೈಕಿ ಇದನ್ನು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
ಈ ವಿಧಾನವನ್ನು 1974-75ರಲ್ಲಿ ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕ ಬಳಸಿತ್ತು. ಕಡಿದಾದ ಕಾಡಿನಲ್ಲಿ ಭೂ ಸೇನೆ ಮುನ್ನುಗ್ಗಲು ಹೆಲಿಕಾಪ್ಟರ್‌ಗಳು ತುಂಬಾ ನೆರವಾಗಿದ್ದವು. ಇದನ್ನು ಬಳಸುವುದಕ್ಕಾಗಿಯೇ ಸೇನೆ ಹಲವು ವರ್ಷಗಳಿಂದಲೂ ಆಧುನಿಕ ಸೆನ್ಸಾರ್ ಹಾಗೂ ನಿಖರ ಆಯುಧಗಳನ್ನು ಒಳಗೊಂಡಿರುವ ಕಾಪ್ಟರ್‌ಗಳ ಖರೀದಿ ಮಾಡುತ್ತಿತ್ತು. ವಿಶೇಷವಾಗಿ ಗುಡ್ಡಗಾಡು ಪ್ರದೇಶದಲ್ಲಿ ಇದು ಹೆಚ್ಚು ಅನುಕೂಲರವಾಗಿರುವುದರಿಂದ ಭಾರತ-ಪಾಕ್ ಗಡಿಯಲ್ಲಿ ಇದು ಹೆಚ್ಚು ಅನುಕೂಲಕ್ಕೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.