ಬಾಡಿಗೆ ಕಟ್ಟಿ ಕಾರ್‌ ಓಡ್ಸಿ


Team Udayavani, May 14, 2018, 11:03 AM IST

badigege.jpg

ಬೆಂಗಳೂರು ಅಂದ್ರೇನೆ ಅದೊಂದು ಆಕರ್ಷಣೆ. ರಾಜಧಾನಿ ಅನ್ನೋದೊಂದು ಕಾರಣವಾಗಿದ್ದರೆ, ಇಲ್ಲಿನ  ಜೀವನ ಶೈಲಿಯೇ ಕಲರ್‌ಫ‌ುಲ್‌ ಎನ್ನುವ ಲೆಕ್ಕಾಚಾರ ಹೆಚ್ಚಿನವರಲ್ಲಿದೆ. ಇದಕ್ಕೂ ಪ್ರಬಲ ಕಾರಣ ಇದೆ. ಸಿಲಿಕಾನ್‌ ಸಿಟಿಯ ಹೊಸ ತಲೆಮಾರಿನ ಯುವಕ-ಯುವತಿಯರು ಒಂದಲ್ಲ ಒಂದು ಹವ್ಯಾಸಕ್ಕೆ ಒಗ್ಗಿಕೊಂಡಿರುತ್ತಾರೆ. ಹಾಗೇ ವಾಹನ ಚಾಲನೆಯೂ ಕ್ರೇಜಿ ಹವ್ಯಾಸಗಳಲ್ಲೊಂದಾಗಿದ್ದು, ಇದಕ್ಕೆ ಪೂರಕವಾಗಿ “ಸೆಲ್ಫ್ಡ್ರೈವ್‌, ಸೆಲ್ಫ್ ರೈಡ್‌’ ಉದ್ಯಮವಾಗಿ ಬೆಳೆದಿದೆ. ಬಯಸಿದ ವಾಹನವನ್ನು ಬಾಡಿಗೆ ಪಡೆದು ಓಡಿಸಿ ಸಂಭ್ರಮಿಸಬಹುದಾಗಿದೆ.

ಜಾಗ್ವಾರ್‌, ಲ್ಯಾಂಡ್‌ರೋವರ್‌ನಂಥ ಲಕ್ಸುರಿ ಕಾರಿನಲ್ಲಿ ಲಾಂಗ್‌ ಡ್ರೈವ್‌ ಮಾಡಬೇಕೆಂದೋ, ಹ್ಯಾರ್ಲಿ ಡೆವಿಡ್‌ಸನ್‌ನಂಥ ಬೈಕ್‌ನಲ್ಲಿ ಕರ್ನಾಟಕ ಸುತ್ತಿಬರಬೇಕೆಂದೋ ಅಥವಾ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲೇ ಒಂದು ಸುತ್ತು ಹಾಕಿ ಬರೋಣವೆಂದೋ ಕನಸು ಕಾಣುವ ಯುವಕ-ಯುವತಿಯರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಆದರೆ ಇವೆಲ್ಲ “ನನ್ನಿಂದ ಸಾಧ್ಯವಿಲ್ಲ’ ಎಂದು ನಿರಾಸೆಯಿಂದ ಮೌನಕ್ಕೆ ಶರಣಾಗುವವರೇ ಜಾಸ್ತಿ.

ಆದರೆ ನಿರಾಸೆಗೊಳ್ಳಬೇಕಿಲ್ಲ. ಎಲ್ಲವೂ ಕ್ಷಣಾರ್ಧದಲ್ಲಿ ಕೈಗೆಟಕುವ ರೀತಿಯಲ್ಲಿ ವಿಶ್ವದ ಬಹುತೇಕ ಕ್ಷೇತ್ರಗಳು ಬೆಳಯುತ್ತಿದೆ. ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿವೆ. ಆಟೋಮೊಬೈಲ್‌ ಹಾಗೂ ಬಾಡಿಗೆ ವಾಹನಗಳ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಬದಲಾಗುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಲೇ ಲಾಭದಾಯಕ ಉದ್ಯಮವಾಗಿ ಬೆಳೆದಿದೆ. ಹೌದು, ಕಳೆದ ನಾಲ್ಕಾರು ವರ್ಷಗಳಿಂದೀಚೆ “ಸೆಲ್ಫ್ ರೈಡ್‌, ಸೆಲ್ಫ್ ಡ್ರೈವ್‌’ ಕಾನ್ಸೆಫ್ಟ್ ಶರವೇಗದಲ್ಲಿ ಜನಪ್ರಿಯಗೊಳ್ಳುತ್ತಿದೆ.

ಭಾರೀ ಬೇಡಿಕೆ ಇರುವ ಉದ್ಯಮ ಇದಾಗಿದೆ. ಅದರಲ್ಲೂ ಐಟಿ ಹಬ್‌ ಎಂದೇ ಕರೆಯಿಸಿಕೊಳ್ಳುವ ಬೆಂಗಳೂರಲ್ಲಂತೂ ಈಗಾಗಲೇ ಈ ಉದ್ಯಮ ದೊಡ್ಡ ಪ್ರಮಾಣದ ಗ್ರಾಹಕ ವರ್ಗವನ್ನು ಸೃಷ್ಟಿಸಿಕೊಂಡಿದೆ. ಸ್ವಂತದ್ದೆನ್ನುವ ಸಾಮಾನ್ಯ ಹಾಗೂ ಲಕ್ಸುರಿ ಬೈಕ್‌, ಕಾರುಗಳಿಲ್ಲದವರು ಸೆಲ್ಫ್ ರೈಡ್‌, ಸೆಲ್ಫ್ ಡ್ರೈವ್‌ ವಾಹನಗಳ ಮೊರೆಹೋಗುತ್ತಿದ್ದಾರೆ. ಕ್ರೇಜ್‌ ಇರುವ ಯುವಕ-ಯುವತಿಯರಿಂದಲೂ ಬೇಡಿಕೆ ಹೆಚ್ಚುತ್ತಿದೆ. ಲಕ್ಷಾಂತರ ಹಣ ಸುರಿದು ಲಕ್ಸುರಿ ಕಾರುಗಳನ್ನು ಕೊಳ್ಳುವ ಬದಲು ಬಾಡಿಗೆ ಪಡೆಯುವುದೇ ಒಳ್ಳೆಯದು ಎನ್ನುವ ಅಭಿಪ್ರಾಯ ಈ ಗ್ರಾಹಕರದ್ದಾಗಿದೆ.

ದೇಶದಲ್ಲಿವೆ 15 ರಿಂದ 20 ಕಂಪನಿಗಳು: ದೇಶದಲ್ಲಿ ನೋಂದಣಿ ಮಾಡಿಸಿಕೊಂಡು ಅಧಿಕೃತ ಉದ್ಯಮವಾಗಿಸಿ ಕೊಂಡಿರುವ 15 ರಿಂದ 20 ಕಂಪನಿಗಳು ಸೆಲ್ಫ್ ರೈಡ್‌, ಸೆಲ್ಫ್ ಡ್ರೈವ್‌ ಸೇವೆ ಒದಗಿಸುತ್ತಿವೆ. ಎಲ್ಲವೂ ಕರ್ನಾಟಕ ಅಥವಾ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿಲ್ಲ. ಆದರೆ ಅರ್ಧದಷ್ಟು ಕಂಪನಿಗಳು ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿವೆ. ಕೆಲವು ಕಂಪನಿಗಳು ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಿವೆ. ಇನ್ನು ಕೆಲವು ಈಗಾಗಲೇ ಆರಂಭಿಸಿ ಸ್ಪರ್ಧೆ ಸಾಧ್ಯವಾಗದೇ ಹಿಂದೆ ಸರಿದಿವೆ. ಇವೆಲ್ಲದರ ಮಧ್ಯೆ ನೋಂದಣಿ ಮಾಡಿಸಿಕೊಳ್ಳದೇ ಸಣ್ಣ ಪ್ರಮಾಣದಲ್ಲಿ ನಡೆಸುತ್ತಿರು ವವರು ಬಹಳ ಮಂದಿ ಇದ್ದಾರೆ. ಪ್ರಾದೇಶಿಕವಾಗಿ ಉತ್ತಮ ಗ್ರಾಹಕ ವರ್ಗವನ್ನೇ ಸೃಷ್ಟಿಸಿಕೊಂಡಿದ್ದಾರೆ.

ಕನ್ನಡಿಗರೇ ಕಟ್ಟಿ ಬೆಳೆಸಿದ ನೋಮಿ ಅಗಸ್ಟಿನ್‌ ಕಂಪನಿ: ಕಾರಷ್ಟೇ ಅಲ್ಲ ಬೈಕ್‌ಗಳನ್ನೂ ಸೆಲ್ಫ್ ರೈಡ್‌ಗೆ ಬಾಡಿಗೆ ನೀಡುವ ಮೂಲಕ ಕರ್ನಾಟಕದಲ್ಲಿ ಉದ್ಯಮಕ್ಕೆ ಇನ್ನೊಂದು ಆಯಾಮ ಪರಿಚಯಿಸಿದ ಕಂಪನಿ ಜೋಪ್‌ರೆಂಟ್‌. ಕನ್ನಡಿಗರೇ ಆರಂಭಿಸಿದ ಕಂಪನಿ ಇದು. ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನೋಮಿ ಅಗಸ್ಟಿನ್‌ ಎಂಬವರ ಹೂಡಿಕೆಯಲ್ಲಿ ಪ್ರದೀಪ್‌, ರಂಜನ್‌ ಹಾಗೂ ರಂಜನ್‌ ಕುಮಾರ್‌ ಕಂಪನಿಯ ಸಾರಥ್ಯ ಹೊತ್ತು ಮುನ್ನಡೆಸಿಕೊಂಡು ಬಂದಿದ್ದಾರೆ. ಹಂತ ಹಂತವಾಗಿ ಬೆಳೆದ ಕಂಪನಿ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಶಾಖೆ ಆರಂಭಿಸಿದೆ. ಬೆಂಗಳೂರಿನಲ್ಲಿಯೇ ಒಟ್ಟು 22 ಹಬ್‌ಗಳನ್ನು ಹೊಂದಿದೆ. ಇದೀಗ ತನ್ನದೇ ಗ್ರಾಹಕರು ದೇಶದ ಯಾವುದೇ ಮೂಲೆಗೆ ಹೋದರೂ ವಸತಿಗೂ ಸಮಸ್ಯೆ ಉಂಟಾಗಬಾರದೆನ್ನುವ ಕಾರಣದಿಂದ ವಸತಿ ಸೌಲಭ್ಯಕ್ಕೂ ಅವಕಾಶ ಮಾಡಿಕೊಡುತ್ತಿದೆ.

ಕಾರುಗಳಾದರೆ ಬಾಡಿಗೆ ಎಷ್ಟು?: ನಾಲ್ಕೈದು ಲಕ್ಷ ರೂ. ಬೆಲೆಬಾಳುವ ಕಾರುಗಳಾದಿಯಾಗಿ ಕೋಟಿ ರೂ. ಬೆಲೆಬಾಳುವ ಕಾರುಗಳೂ ದಿನ ಬಾಡಿಗೆಗೆ ಲಭ್ಯವಿರುತ್ತದೆ. ಕೆ10, ಇಯಾನ್‌, ಐ10, ಟಿಯಾಗೋ, ಕ್ವಿಡ್‌, ಎಟಿಯಾಸ್‌, ಫಿಗೋದಂತಹ ಕಾರುಗಳ ದಿನ ಬಾಡಿಗೆ 1500, 2000ದಿಂದ ಆರಂಭವಾದರೆ, ಸ್ಕಾರ್ಪಿಯೋ, ಇನ್ನೋವಾ, ಡಸ್ಟರ್‌, ಈಕೋನ್ಪೋರ್ಟ್ಸ್, ಎಕ್ಸ್‌ 1, ಕ್ಯೂ3, ಕ್ಯೂ7 ಕಾರುಗಳು 8ರಿಂದ 10ಸಾವಿರ ರೂ.ಗೆ ಬಾಡಿಗೆಗೆ ಲಭ್ಯವಿರುತ್ತದೆ. ಬೈಕ್‌ಗಳಿಗಿಂತ ಕಾರುಗಳನ್ನು ಬಾಡಿಗೆಗೆ ನೀಡುವ ಕಂಪನಿಗಳು ಜಾಸ್ತಿ ಇದ್ದು, ಸದ್ಯ ಬೆಂಗಳೂರಿನಲ್ಲಿ ಕಾರುಗಳನ್ನು ಬಾಡಿಗೆಗೆ ನೀಡುವ ಕಂಪನಿಗಳೇ ಜಾಸ್ತಿ ಇವೆ. ಕೆಲವು ಪ್ರತಿಷ್ಠಿತ ಕಂಪನಿಗಳೇ ಗಂಟೆ ಲೆಕ್ಕಾಚಾರದಲ್ಲಿಯೂ ಬಾಡಿಗೆಗೆ ನೀಡುತ್ತಿವೆ.

ಬೈಕ್‌ಗಳ ಬಾಡಿಗೆ ಎಷ್ಟಿರುತ್ತೆ?: ಮೂವತ್ತೈದು, ನಲವತ್ತೈದು, ಐವತ್ತೈದು ಸಾವಿರ ಬೆಲೆ ಬಾಳುವ ಸ್ಕೂಟರ್‌-ಬೈಕ್‌ಗಳಿಂದ ಹಿಡಿದು ಹತ್ತಿಪ್ಪತ್ತು ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳೂ ಬಾಡಿಗೆಗೆ ಲಭ್ಯವಿರುತ್ತದೆ. ಸ್ವಿಷ್‌, ಆಕ್ಟೀವಾ, ಜುಪಿಟರ್‌, ಡಿಯೋ, ಆ್ಯಕ್ಸಸ್‌, ಅಲ್ಫಾ, ವೆಗೋ, ನವಿಯಂಂಥ ಸಾಮಾನ್ಯ ಸಾಮರ್ಥ್ಯದ ಸ್ಕೂಟರ್‌ಗಳಿಂದ ಹಿಡಿದು ಹ್ಯಾರ್ಲಿ ಡೆವಿಡ್‌ಸನ್‌, ಹ್ಯಾರ್ಲಿ ರೋಡ್‌ಸ್ಟಾರ್‌,  ಹಯಾಬುಸಾ, ರಾಯಲ್‌ ಥಂಡರ್‌ಬರ್ಡ್‌, ರಾಯಲ್‌ ಎನ್‌ಫೀಲ್ಡ್‌, ಹ್ಯಾರ್ಲಿ ಐರನ್‌, ಡೆಸಾರ್ಟ್‌ ಸ್ಟ್ರೋಮ್‌ಗಳಂಥ ದುಬಾರಿ ಬೈಕ್‌ಗಳನ್ನು ದಿನ ಬಾಡಿಗೆಗೆ ಲಭ್ಯವಿರುತ್ತದೆ. ಪ್ರತಿದಿನದ ಬಾಡಿಗೆ 300 ರೂ.ನಿಂದ ಆರಂಭವಾಗಿ 15,000 ರೂ.ತನಕ ಇರಲಿದೆ.

ಡೆಪಾಸಿಟ್‌ ಹೇಗೆ?: ಒಂದೊಮ್ಮೆ ಬುಕ್‌ ಮಾಡಲಾದ ವಾಹನವನ್ನು ಪ್ರಯಾಣಕ್ಕೂ ಮೊದಲು 0-48 ಗಂಟೆಗಳಲ್ಲಿ ತಿಳಿಸಿದರೆ ಅದಕ್ಕೆ ಶುಲ್ಕ ಭರಿಸ ಬೇಕಾ ಗುತ್ತದೆ. ಅದನ್ನು ವಾಹನ ನೀಡುವಾಗಲೇ ಪಡೆದು ಕೊಳ್ಳಲಾಗುವ ಸೆಕ್ಯೂರಿಟಿ ಡೆಪಾಸಿಟ್‌ನಲ್ಲಿಯೇ ಕಡಿತ ಮಾಡಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಡೆಪಾಸಿಟ್‌ ಮೊತ್ತದ ಶೇ.20ರಷ್ಟನ್ನು ಶುಲ್ಕವನ್ನಾಗಿ ಪಡೆಯ ಲಾಗುತ್ತದೆ. ಉಳಿದ ಶೇ.80ರಷ್ಟು ಹಣವನ್ನು ಬುಕಿಂಗ್‌ ಮಾಡಿರುವ ವ್ಯಕ್ತಿಗೆ ಒಂದು ವಾರದಲ್ಲಿ ರೀಫ‌ಂಡ್‌ ಮಾಡುವ ವ್ಯವಸ್ಥೆ ಬಹುತೇಕ ಕಂಪನಿಗಳಲ್ಲಿವೆ. ಒಂದೊಮ್ಮೆ ಬುಕ್‌ ಮಾಡಿಸಿಕೊಂಡು ವಾಹನ ನೀಡಲು ಸಾಧ್ಯ ವಾಗದೇ ಇದ್ದಲ್ಲಿ ಕಂಪನಿ ಎಲ್ಲಾ ಹಣವನ್ನು ಒಂದು ವಾರದಲ್ಲೇ ಮರಳಿಸುವುದಾಗಿ ಹೇಳಿಕೊಂಡಿರುತ್ತವೆ. ಇತ್ತೀಚೆಗೆ ಕೆಲ ಕಂಪನಿಗಳು ತಾವು ಕೇಳಿದ ದಾಖಲೆಗಳನ್ನೆಲ್ಲ ನೀಡಿದಲ್ಲಿ ಸೆಕ್ಯೂರಿಟಿ ಡೆಪಾಸಿಟ್‌ ಕೂಡ ಪಡೆಯುವುದಿಲ್ಲ.

ಯಾಕೆ ಬೆಸ್ಟ್‌?: ಕೋಟಿ ಕೋಟಿ, ಲಕ್ಷ ಲಕ್ಷ ರೂ. ಸುರಿದು ಲಕ್ಸುರಿ ಬೈಕ್‌, ಕಾರುಗಳನ್ನು ಕೊಂಡು ರಸ್ತೆಯಲ್ಲಿ ನಿಲ್ಲಿಸಲು ಯಾರಿಗೂ ಮನಸ್ಸು ಬಾರದು. ಅಷ್ಟಕ್ಕೂ ಮನೆಗೆರಡು ಕಾರೋ, ಬೈಕೋ ಇರುವಾಗ ಪಾರ್ಕಿಂಗ್‌ ಸಮಸ್ಯೆಯಿಂದ ತಪ್ಪಿಸಿಕೊಳ್ಳಲೂ ಸಾಧುವಿಲ್ಲ. ಹೀಗಾಗಿ ಸೆಲ್ಫ್ ರೈಡ್‌ ಸೆಲ್ಫ್ ಡ್ರೈವ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವೆಲ್ಲದರ ಜತೆಗೆ ಬಯಸಿದ ಸ್ಕೂಟರ್‌-ಬೈಕ್‌, ಕಾರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇರಲಿದೆ. ಅದರಲ್ಲೂ ಇತ್ತೀಚೆಗೆ ಕಿಲೋ ಮೀಟರ್‌ ಕೂಡ ಅನ್‌ಲಿಮಿಟೆಡ್‌. ಕಾರಣ ದೇಶದ ಯಾವುದೇ ಮೂಲೆಗೂ ಕೊಂಡೊಯ್ಯಬಹುದು. ಒಂದೆರಡು ವಾರ ಬೇಕೆಂದರೂ ಬಳಕೆ ಮಾಡಬಹುದು. ಆದರೆ ಒಂದು ದಿನವೆಂದು ಎರಡು ದಿನ ಬಳಕೆ ಮಾಡಿಕೊಳ್ಳುವಂತಿಲ್ಲ. ಈ ಬಗ್ಗೆ ಮೊದಲೇ ಮಾಹಿತಿ ನೀಡಬೇಕು.

ತಿಂಗಳ ಬಾಡಿಗೆ ಎಷ್ಟಿರುತ್ತೆ?: ಬೆಂಗಳೂರು ಸೇರಿದಂತೆ ದೇಶದಲ್ಲಿ ಒಂದೆರಡು ಕಂಪನಿಗಳು ಮಾತ್ರ ತಿಂಗಳ ಲೆಕ್ಕಾಚಾರದಲ್ಲಿ ಸ್ಕೂಟರ್‌, ಬೈಕ್‌ ಹಾಗೂ ಕಾರುಗಳನ್ನು ಬಾಡಿಗೆ ನೀಡುತ್ತಿವೆ. ಸ್ಕೂಟರ್‌ಗಳಾದರೆ ನಾಲ್ಕರಿಂದ ಆರು ಸಾವಿರ, ಬೈಕ್‌ಗಳಾದರೆ ಎಂಟರಿಂದ ಹತ್ತು ಸಾವಿರ, ಕಾರುಗಳಾದರೆ ಇಪ್ಪತ್ತರಿಂದ ಎಪ್ಪತ್ತು ಸಾವಿರ ರೂ.ಗಳಿಗೆ ತಿಂಗಳ ಬಾಡಿಗೆ ನೀಡಲಾಗುತ್ತದೆ.

ನಿಯಮಾವಳಿಗಳನ್ನು ಕಣ್ತೆರೆದು ಓದಿ: ಅಷ್ಟಕ್ಕೂ ಇದನ್ನೆಲ್ಲ ನಿಭಾಯಿಸುವುದು ಹೇಗೆ ಎನ್ನುವ ಕುತೂಹಲ ನಿಮ್ಮಲ್ಲಿ ಮೂಡಬಹುದು. ವಿಷಯ ಇಷ್ಟೆ, ಈ ಪ್ರಕಾರದ ಸಂಸ್ಥೆಗಳು ಬಾಡಿಗೆ ನೀಡುವ ವೇಳೆ ಒಂದಿಷ್ಟು ನಿಯಮಗಳನ್ನು ಮಾಡಿಕೊಂಡಿರುತ್ತವೆ. ಅಗತ್ಯವಾದಲ್ಲಿ ಒಂದಿಷ್ಟು ದಾಖಲೆಗಳನ್ನೂ ಪಡೆದುಕೊಳ್ಳುತ್ತವೆ. ಗ್ರಾಹಕ ಕೂಡ ನಿಯಮ ಉಲ್ಲಂ ಸಿದರೆ ಕಾನೂನು ಕ್ರಮ ಎದುರಿಸಬೇಕಾಗಿಯೂ ಬರಬಹುದು. ಕಾರಣ ನಿಯಮಗಳ ಬಗ್ಗೆ ಎಚ್ಚರದಿಂದಿರುವುದು ಸೂಕ್ತ. 

“ಜೂಮ್‌’ ದೇಶಕ್ಕೇ ಮೊದಲು: ಬೆಂಗಳೂರಿಗೂ ಜೂಮ್‌ ಕಾರಿಗೂ ಅವಿನಾಭಾವ ಸಂಬಂಧವಿದೆ. “ಸೆಲ್ಫ್ ಡ್ರೈವ್‌’ಗೆ ಕಾರುಗಳನ್ನು ನೀಡಿ ಬಾಡಿಗೆ ಪಡೆಯುವುದನ್ನೇ ಉದ್ಯಮವಾಗಿ ಮಾಡಿಕೊಳ್ಳುವ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಬೆಂಗಳೂರಿನಲ್ಲಿ. ಗ್ರೆಗ್‌ ಮಾರನ್‌ ಹಾಗೂ ಡೇವಿಡ್‌ ಬ್ಯಾಕ್‌ “ಜೂಮ್‌’ ಕಂಪನಿಯ ಸಂಸ್ಥಾಪಕರು. ಜೂಮ್‌  ಕಾರಿನ ಪ್ರಧಾನ ಕಚೇರಿ ಕೂಡ ಬೆಂಗಳೂರಿನಲ್ಲೇ ಇದ್ದು, ಜೂಮ್‌ ದೇಶದ “ಸೆಲ್ಫ್ ಡ್ರೈವ್‌’ ಉದ್ಯಮ ಕ್ಷೇತ್ರದ ಮೊದಲ ಕಂಪನಿಯಾಗಿದೆ.

ಎಲ್ಲಿದ್ದರೂ ಗೊತ್ತಾಗುತ್ತೆ, ಹದ್ದಿನ ಕಣ್ಣಿಗೆ…: ಯಾವ ಧೈರ್ಯದ ಮೇಲೆ ಲಕ್ಷಾಂತರ ಮೌಲ್ಯದ ವಾಹನ ನೀಡುತ್ತಾರೆ? ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ ಇದಕ್ಕೆ ನೆರವಾಗುತ್ತಿರುವುದೇ ಜಿಪಿಆರ್‌ಎಸ್‌ ತಂತ್ರಜ್ಞಾನ. ಹೆಚ್ಚಿನ ಕಂಪನಿಗಳು ಬಾಡಿಗೆ ನೀಡುವ ವಾಹನಗಳಿಗೆ ಜಿಪಿಆರ್‌ಎಸ್‌ ಅಳವಡಿಕೆ ಮಾಡಿದ್ದು, ವಾಹನ ಎಲ್ಲೇ ಇದ್ದರೂ ಪತ್ತೆ ಮಾಡುವುದು ಕಷ್ಟವೇನಲ್ಲ. ವಾಹನದ ಚಲನ ವಲನದ ಮೇಲೆ ಸದಾ ಕಣ್ಣಿಟ್ಟಿರಲೆಂದೇ ತಂಡವೊಂದನ್ನು ರಚಿಸಿರಲಾಗುತ್ತದೆ. ಗ್ರಾಹಕರಿಗೆ ತೊಂದರೆ ಆದಲ್ಲಿಯೂ ತಕ್ಷಣ ಈ ತಂಡವೇ ಸ್ಪಂದಿಸುತ್ತದೆ. ಹೀಗಾಗಿ ಮೋಸ ಮಾಡುವ ಸಾಧ್ಯತೆಗಳೂ ಕಡಿಮೆ. 

ಕಾರು, ಬೈಕ್‌ ಓಡಿಸಬೇಕೆನ್ನುವ ಹಂಬಲ ಎಲ್ಲರಲ್ಲೂ ಇರುತ್ತದೆ. ಆದರೆ ಸಾಧ್ಯವಾಗಿರುವುದಿಲ್ಲ. ಹಾಗೇ ಬೇರೆ ಊರಿಗೆ ಹೋದ ಸಂದರ್ಭದಲ್ಲಿ ನಮ್ಮದೇ ಒಂದು ವಾಹನ ಇದ್ದಿದ್ದರೆ ಎನಿಸುವುದುಂಟು. ಇದೆಲ್ಲದಕ್ಕೂ ಜೋಪ್‌ರೆಂಟ್‌ ಒಂದು ಪರಿಹಾರ ನೀಡಿದೆ.
-ಪ್ರದೀಪ್‌, ವ್ಯವಸ್ಥಾಪಕರು, ಜೋಪ್‌ರೆಂಟ್‌

* ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

5-renukaswamy

Renukaswamy Case: ಶೆಡ್‌ನ‌ಲ್ಲಿ ಕೊಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ: ವಕೀಲ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-renukaswamy

Renukaswamy Case: ಶೆಡ್‌ನ‌ಲ್ಲಿ ಕೊಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ: ವಕೀಲ

4-bng

Bengaluru: ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಸರಗಳ್ಳತನ

3-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ : 2 ವಿದ್ಯಾರ್ಥಿಗಳು ಸಾವು

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5-renukaswamy

Renukaswamy Case: ಶೆಡ್‌ನ‌ಲ್ಲಿ ಕೊಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ: ವಕೀಲ

Tulu Movie: ಮೊದಲ ಹಂತದ ಚಿತ್ರೀಕರಣ ಮುಗಿಸಿದ ʼಪಿಲಿಪಂಜʼ ಸಿನಿಮಾ

Tulu Movie: ಮೊದಲ ಹಂತದ ಚಿತ್ರೀಕರಣ ಮುಗಿಸಿದ ʼಪಿಲಿಪಂಜʼ ಸಿನಿಮಾ

4-bng

Bengaluru: ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಸರಗಳ್ಳತನ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.