ಅಪಘಾತ: ದೈಹಿಕ ಶಕ್ತಿ ಕಳೆದುಕೊಂಡ ಮಹಿಳೆಗೆ ನೆರವು
Team Udayavani, May 14, 2018, 11:25 AM IST
ಕೊಟ್ಟಾರಚೌಕಿ: ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬದುಕಬೇಕಾದ ನಾವು ಇತರರ ಕಷ್ಟದ ಸಮಯದಲ್ಲಿ ಸ್ಪಂದಿಸಿ, ಸಹಾಯ ಒದಗಿಸಿದಾಗ ಬದುಕು ಸಾರ್ಥಕ ಎನಿಸುತ್ತದೆ ಎಂದು ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್ ಹೇಳಿದರು.
ರವಿವಾರ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ ಇದರ ದುಬಾೖ ಘಟಕದ ವತಿಯಿಂದ ಗುರುವಾಯನಕೆರೆ ನಿವಾಸಿ ನಾರಾಯಣ ನಾೖಕ್ (45)ರ ಕಿಡ್ನಿ ಚಿಕಿತ್ಸೆಗೆ ಹಾಗೂ ಅಪಘಾತದಿಂದಾಗಿ ಕಳೆದ ಮೂರು ವರ್ಷದಿಂದ ಮಲಗಿದ ಸ್ಥಿತಿಯಲ್ಲಿಯೇ ದಿನ ಕಳೆಯುತ್ತಿರುವ ವಿಶಾಲಾಕ್ಷಿ (53) ಅವರಿಗೆ 60 ಸಾವಿರ ರೂಪಾಯಿ ಧನ ಸಹಾಯ ವಿತರಿಸಿ ಅವರು ಮಾತನಾಡಿದರು. ಇಂದು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ದುರ್ಬಲರಿದ್ದಾರೆ. ಇವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ. ಬಿರುವೆರ್ ಕುಡ್ಲ ಕಳೆದ ಮೂರು ವರ್ಷ ಗಳಲ್ಲಿ ಜಾತಿ ಮತ ನೋಡದೆ ಎಲ್ಲರಿಗೂ ಸಹಾಯ ನೀಡಿದೆ. ದುಬಾೖ ಘಟಕದ ಸದಸ್ಯರು ವಿದೇಶದಲ್ಲಿ ಶ್ರಮ ವಹಿಸಿ ದುಡಿದ ಹಣದಲ್ಲಿ ಒಂದು ಪಾಲು ತೆಗೆದಿಟ್ಟು ಊರಿನ ಬಡ ವರ್ಗಕ್ಕೆ ನೆರವು ನೀಡುತ್ತಾ ಬರುತ್ತಿದ್ದಾರೆ ಎಂದರು.
ದುಬಾೖ ಘಟಕದ ನರೇಶ್ ಅಮೀನ್ ಮಾತನಾಡಿ, ಉದಯ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಮ್ಮಿಂದಾದ ಸಹಾಯ ಮಾಡುತ್ತಿದ್ದೇವೆ. ರಕ್ತದಾನ ಶಿಬಿರ, ಮಾಹಿತಿ ಕಾರ್ಯಾಗಾರ, ದುರ್ಬಲ ವರ್ಗದ ಶಿಕ್ಷಣಕ್ಕೆ ಸಹಾಯ ಮತ್ತಿತರ ನೆರವು ಕಾರ್ಯ ನೀಡುತ್ತಾ ಬರುತ್ತಿದ್ದೇವೆ. ಇದೀಗ ನಮಗೆ ವಾಟ್ಸ್‌ಪ್ ಹಾಗೂ ನಮ್ಮ ಗುಂಪಿನ ಸದಸ್ಯರ ಮಾಹಿತಿ ಮೇರೆಗೆ 60,000 ರೂ. ಧನ ಸಹಾಯ ವಿತರಿಸಿದ್ದೇವೆ ಎಂದರು. ರಾಕೇಶ್ ಸುವರ್ಣ, ಅಭಿಷೇಕ್, ರಾಕೇಶ್ ಬಲ್ಲಾಳ್ ಬಾಗ್, ಅಕ್ಷಯ್, ಸುಶೀತ್, ನವೀನ್ ಆಚಾರ್ಯ, ನಾಗ ರಾಜ್ ಶೆಟ್ಟಿ, ಅಶೋಕ್ ಕುಮಾರ್, ಪುನೀತ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.