ಪುಸ್ತಕ ಓದುಗರ ಸಂಖ್ಯೆ ಕುಗ್ಗುತ್ತಿದೆ
Team Udayavani, May 14, 2018, 2:21 PM IST
ಮೈಸೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಂತರ್ಜಾಲದ ಬಳಕೆಯಿಂದ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಗೋವಿಂದೇಗೌಡ ತಿಳಿಸಿದರು.
ವಿಸ್ಮಯ ಪ್ರಕಾಶನದಿಂದ ನಗರದ ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪೊ›.ಜಿ.ಚಂದ್ರಶೇಖರ್ ಅವರು ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ದುಃಖ ಅಪರಿಮಿತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಇಂದಿನ ಸಾರ್ವಜನಿಕರು ಹಾಗೂ ಯುವಸಮುದಾಯ ಮೊಬೈಲ್, ಕಂಪ್ಯೂಟರ್ ಸೇರಿದಂತೆ ತಂತ್ರಜ್ಞಾನದ ಬಳಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
ಇದು ಪುಸ್ತಕ ಓದುಗರ ಸಂಖ್ಯೆ ಇಳಿಮುಖವಾಗಲು ಪ್ರಮುಖ ಕಾರಣವಾಗಿದೆ. ಪುಸ್ತಕಗಳ ಓದು ಪ್ರತಿಯೊಬ್ಬರಲ್ಲೂ ಮನುಷ್ಯತ್ವದ ಅರಿವಿನ ಸಂಸ್ಕೃತಿ ಮೂಡಿಸಲಿದೆ ಎಂದು ತಿಳಿಸಿದರು. ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು, ಬದ್ಧತೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ.
ಸಾಮಾಜಿಕ ಮೌಲ್ಯಗಳು ಇಲ್ಲದಿರುವ ಸಾಹಿತ್ಯಗಳು ಓದುಗರನ್ನು ಮುಟ್ಟುವುದಿಲ್ಲ. ಸಾಮಾಜಿಕ ಮೌಲ್ಯಗಳು ಇರುವ ಕೃತಿಗಳನ್ನು ರಚಿಸಲು ಅನುಭವ ಹಾಗೂ ಅದನ್ನು ಜನರಿಗೆ ತಲುಪಿಸುವ ಬರವಣಿಗೆ ಅತಿ ಮುಖ್ಯವಾಗಿದೆ. ಪೊ›.ಜಿ.ಚಂದ್ರಶೇಖರ್ ಅವರ ಕೃತಿಗಳಲ್ಲಿ ವಿದ್ವತ್, ಜೀವಂತಿಕೆ,
ಅನುಭವ, ಸಂವೇದನೆ, ಸ್ತ್ರೀ ಸಂವೇದನೆಗಳಿಗೆ ಒತ್ತು ನೀಡಲಾಗುತ್ತದೆ. ಸ್ತ್ರೀಯರ ಪ್ರಗತಿಪರ ಚಿಂತನೆಗಳು ಇವರ ಆಧರಿಸುವ ಕೃತಿಗಳು, ಮಾತನ್ನು ಬಂಡವಾಳ ಮಾಡಿಕೊಂಡು ಜನರನ್ನು ನಂಬಿಸಿ ಮೋಸ ಮಾಡುವ ಸಾರ್ವಕಾಲಿಕ ಚಿಂತನೆಗಳು ಅಡಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ, ದುಃಖ ಅಪರಿಮಿತ ಮೂಲ ಕೃತಿಯ ಲೇಖಕಿ ಡಾ.ಸರೋಜಿನಿ ಸಾಹೂ, ದಿನೇಶ್ ಕುಮಾರ್ ಮಾಲಿ, ಪ್ರಭಾ ಶ್ರೀನಿವಾಸಯ್ಯ, ವಿಸ್ಮಯ ಪ್ರಕಾಶನದ ಹಾಲತಿ ಲೋಕೇಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.