ಹೂಡಿಕೆಗೆ ಹಲವು ದಾರಿ
Team Udayavani, May 14, 2018, 2:36 PM IST
ಈಗಂತೂ ಎಲ್ಲೆಡೆಗೂ ಬ್ಯಾಂಕ್‌ಗಳಿವೆ. ಬ್ಯಾಂಕ್ ವ್ಯವಹಾರ ಸರಳವೂ, ಸುಲಭವೂ ಆಗಿದೆ. ಹಾಗಾಗಿ ಬ್ಯಾಂಕಿನಲ್ಲಿ ಹಣ ಇಡುವುದು ಎಲ್ಲರಿಗೂ ದಕ್ಕುವ, ನಿಲುಕುವ ಅತ್ಯಂತ ಸಾಂಪ್ರದಾಯಿಕ ಹೂಡಿಕೆ ಆಗಿದೆ.
ಜೇನು ಅಳೆಯುವುದಕ್ಕೆ ಹೋದವನು ಜೇನು ತುಪ್ಪದ ರುಚಿ ನೋಡಿಯೇ ನೋಡುತ್ತಾನೆ. ಹೇಗಿದ್ದರೂ ಕೈಗೆ ಮೆತ್ತಿಕೊಂಡಿರುವ ಜೇನು ತುಪ್ಪವನ್ನು ನೀರಿನಲ್ಲಿ ತೊಳೆಯುವ ಮೊದಲು ಒಮ್ಮೆ ಕೈಯನ್ನು ಬಾಯಿಗಿಡುವುದು ಎಷ್ಟು ಸಹಜವಾದ ಅಭ್ಯಾಸವೊ, ಅಷ್ಟೇ ಸಹಜವಾದದ್ದು; ಉಳಿಸಿರುವವನು ಅದನ್ನು ಬೆಳೆಸುವುದಕ್ಕೆ ಯೋಚಿಸುವುದು. ಉಳಿಸುವುದು ಮೊದಲ ಹಂತ. ಉಳಿಸಿದ ನಂತರ, ಉಳಿಸುವಾಗಲೇ ಅವನ ಕಣ್ಣೆದುರು ಮುಂದಿನ ದಾರಿಯೂ ಸಿದ್ಧ ಇದ್ದೇ ಇರುತ್ತದೆ. ಇಲ್ಲವಾದರೂ, ಉಳಿಸುತ್ತ ಉಳಿಸುತ್ತ ಅದನ್ನು ಬೆಳೆಸುವತ್ತಲೂ ಅವನು ಯೋಚಿಸಿಯೇ ಇರುತ್ತಾನೆ.
ಉಳಿಸಿದ್ದನ್ನು ಬೆಳೆಸುವುದಕ್ಕೆ ಹಲವು ದಾರಿಗಳಿವೆ. ಆದರೆ ನಮಗೆ ಸೂಕ್ತವಾದದ್ದು ಯಾವುದು ಎನ್ನುವುದು ನಮ್ಮ ನಮ್ಮ ಅಗತ್ಯ ಮತ್ತು ಅನುಭವಗಳಿಗೆ ಬಿಟ್ಟಿದ್ದು. ಒಬ್ಬರಿಗೆ ಸೂಕ್ತ ಎನ್ನಿಸುವ ಹೂಡಿಕೆ ಇನ್ನೊಬ್ಬರಿಗೆ ಸೂಕ್ತ ಅಲ್ಲದೇ ಅನ್ನಿಸಬಹುದು. ಮುಖ್ಯವಾಗಿ ಮುಂದಿನ ಯೋಜನೆ, ಯೋಚನೆಗಳನ್ನು ಆಧರಿಸಿ, ಇವತ್ತಿನ ಹೂಡಿಕೆ ನಿಂತಿರುತ್ತದೆ ಎನ್ನುವುದನ್ನು ಮರೆಯುವ ಹಾಗಿಲ್ಲ.
ಮುಂದಿನ ಮೂರು ವರ್ಷದ ನಂತರ ಮಗನ ಕಾಲೇಜು ವ್ಯಾಸಂಗಕ್ಕೆ ಹಣ ಬೇಕಾಗುತ್ತದೆ ಎನ್ನುವವನು ಹೂಡಿಕೆ ಮಾಡುವುದಕ್ಕೆ ಆರಿಸಿಕೊಳ್ಳುವ ಮಾರ್ಗವೇ ಬೇರೆ. ನಿವೃತ್ತಿ ಆದ ನಂತರ ತಿಂಗಳು ತಿಂಗಳಿಗೆ ಹಣ ಬೇಕು ಎನ್ನುವವನು ಹಣ ಹೂಡಿಕೆಗೆ ಅನುಸರಿಸುವ ವಿಧಾನ ಬೇರೆ. ಹೂಡಿಕೆಯಿಂದ ನನ್ನ ಗಳಿಕೆ ಬೆಳೆಯಲಿ ಎನ್ನುವವನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ಮಾರ್ಗ ಬೇರೆ. ಅಂದರೆ, ಪ್ರತಿ ವ್ಯಕ್ತಿಯೂ ತನ್ನ ಅಗತ್ಯವನ್ನು ಅರಿತು ಹೂಡಿಕೆ ಮಾಡಲೇಬೇಕು. ಹೂಡಿಕೆಯಲ್ಲಿ ಹಲವು ವಿಧಗಳಿವೆ, ಮಾರ್ಗಗಳಿವೆ.
ಹಣ ಹೂಡಿಕೆ ನಮ್ಮ ಅನುಭವವನ್ನು ಆಧರಿಸಿರುತ್ತದೆ. ನಾವು ಯಾವುದೇ ನಿರ್ಧಾರ ಕೈಗೊಳ್ಳುವುದೂ ನಮ್ಮ ಅನುಭವದ ನೆಲೆಯಲ್ಲಿಯೇ. ಅದು ಹೂಡಿಕೆಗೂ ಅನ್ವಯಿಸುತ್ತದೆ. ನಮಗೆ ಹೆಚ್ಚು ರಿಸ್ಕ್ ಬೇಡವೇ ಬೇಡ. ಸುರಕ್ಷಿತತೆಗೇ ಹೆಚ್ಚು ಒತ್ತು ಕೊಡುತ್ತೇನೆ ಎಂದಾದರೆ ಬ್ಯಾಂಕಿನಲ್ಲಿ ಇಡಬಹುದು. ಪೋಸ್ಟ್ ಆಫೀಸಿನಲ್ಲಿ ಇಡಬಹುದು. ಬ್ಯಾಂಕ್ ಎಂದಾಗ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಖಾಸಗಿಬ್ಯಾಂಕ್ ಗಳಿವೆ. ಇದಲ್ಲದೇ ಸಹಕಾರಿ ಬ್ಯಾಂಕ್‌ಗಳೂ ಇವೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಬಡ್ಡಿ ಕಡಿಮೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಅಧಿಕ ಬಡ್ಡಿ ಇದೆ. ಆದರೂ ಹೂಡಿಕೆ ಎನ್ನುವುದು ಪ್ರತಿ ವ್ಯಕ್ತಿಯ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿದೆ.
ಎಲ್ಲ ಹಣವನ್ನೂ ಒಂದೆಡೆ ಹೂಡಬಾರದು ಎನ್ನುವುದು ಹೂಡಿಕೆ ತಜ್ಞರು ಹೇಳುವ ಮಾತು. ಬೇರೆ ಬೇರೆ ರೀತಿಯ ಹೂಡಿಕೆ ಮಾಡಿದಾಗಲೇ ಉತ್ತಮ ಫಲಿತಾಂಶ ದೊರೆಯಲಿದೆ ಎಂದೂ ತಜ್ಞರು ಹೇಳುತ್ತಾರೆ. ದೀರ್ಘ ಕಾಲದ ಹೂಡಿಕೆ, ಕಡಿಮೆ ಅವಧಿಯ ಹೂಡಿಕೆ ಹೀಗೆ ಹೂಡಿಕೆಯಲ್ಲಿ ವೈವಿಧ್ಯತೆಯೂ ಇರಬೇಕು. ಆದರೆ ಇರುವ ಎಲ್ಲ ಹಣವನ್ನೂ ಹೂಡಿಕೆ ಮಾಡಬಾರದು. ನಿತ್ಯ ಬಳಕೆಗೆ, ಏನಾದರೂ ತುರ್ತು ಸಂದರ್ಭ ಎದುರಾದಾಗ ಬೇಕಾಗಬಹುದೆಂದು ಹಾಗೆ ಹಣ ಇಟ್ಟುಕೊಳ್ಳಲೇ ಬೇಕು. ನಗದು ಹಣ ಇರದಿದ್ದರೆ ಮುಖದಲ್ಲಿ ನಗು ಇರುವುದಿಲ್ಲ. ಎಷ್ಟೇ ಕೋಟ್ಯಾಧೀಶರಾದರೂ ಕೈಯಲ್ಲಿ ಕ್ಯಾಶ್ ಇರದಿದ್ದರೆ ಏನುಪಯೋಗ?
ಎಷ್ಟೇ ರೀತಿಯ ಹೂಡಿಕೆಯ ಪರಿಚಯವಿದ್ದರೂ ಎಲ್ಲರೂ ಹೇಳುವ ಮೊದಲ ಹೆಜ್ಜೆ, ಬ್ಯಾಂಕಿನಲ್ಲಿ ಬಡ್ಡಿ ಬರುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು. ಹಿರಿಯ ನಾಗರೀಕರಿಗೆ ವಿಶೇಷ ಅನುಕೂಲತೆಗಳೂ ಇರುವ ಈ ಹೂಡಿಕೆಯಲ್ಲಿ ರಿಸ್ಕ್ ಇಲ್ಲವೇ ಇಲ್ಲ. ಇಲ್ಲಿ ಆದಾಯ ಎಷ್ಟು ಎನ್ನುವುದೂ ಮೊದಲೇ ಖಚಿತವಾಗಿರುತ್ತದೆ. ಇದು ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹೂಡಿಕೆ. ಈಗಂತೂ ಎಲ್ಲೆಡೆಗೂ ಬ್ಯಾಂಕ್‌ಗಳಿವೆ. ಬ್ಯಾಂಕ್ ವ್ಯವಹಾರ ಸರಳವೂ, ಸುಲಭವೂ ಆಗಿದೆ. ಹಾಗಾಗಿ ಬ್ಯಾಂಕಿನಲ್ಲಿ ಹಣ ಇಡುವುದು ಎಲ್ಲರಿಗೂ ದಕ್ಕುವ, ನಿಲುಕುವ ಅತ್ಯಂತ ಸಾಂಪ್ರದಾಯಿಕ ಹೂಡಿಕೆ ಆಗಿದೆ.
-ಸುಧಾಶರ್ಮ ಚವತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Simple Life: ಬದುಕು ನಿರಾಡಂಬರವಾಗಿರಲಿ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.