ಕಾಡುಹೊಳೆ ಕಾಮಗಾರಿ ಅಂತಿಮ ಹಂತದಲ್ಲಿ
Team Udayavani, May 15, 2018, 6:20 AM IST
ಅಜೆಕಾರು: ಮರ್ಣೆ ಪಂ.ವ್ಯಾಪ್ತಿಯ ಕಾಡುಹೊಳೆ ಎಂಬಲ್ಲಿ ಸುಮಾರು 1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಕಿಂಡಿ ಅಣೆಕಟ್ಟು ಸಹಿತ ಸೇತುವೆಯ ಕಾಮಗಾರಿ ಬಹುತೇಕ ಮುಗಿ ದಿದ್ದು ಅಂತಿಮ ಹಂತದಲ್ಲಿದೆ.
ಸ್ಥಳೀಯ ಜನರ ಬಹು ದಶಕಗಳ ಬೇಡಿಕೆಯಾಗಿದ್ದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಸಂಪೂರ್ಣಗೊಂಡಿದ್ದು, ಸುಮಾರು 3 ರಿಂದ 4 ಫೀಟ್ ನಷ್ಟು ನೀರು ಈ ಬಾರಿ ಸಂಗ್ರಹಗೊಂಡಿದೆ.
ಕಿಂಡಿ ಅಣೆಕಟ್ಟುವಿನ ನಿರ್ಮಾಣದಿಂದಾಗಿ ಅಂರ್ತಜಲ ವೃದ್ಧಿಗೊಂಡಿದ್ದು, ಹೊಳೆಯ ಇಕ್ಕೆಲಗಳ ಕೃಷಿಕರ ಬಾವಿ ನೀರಿನ ಮಟ್ಟ ಹೆಚ್ಚಳಗೊಂಡಿರುವ ಬಗ್ಗೆ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಬೇಸಿಗೆಯಲ್ಲಿ ಸುಮಾರು 8 ರಿಂದ 10 ಫೀಟ್ ನಷ್ಟು ನೀರು ಸಂಗ್ರಹಗೊಳ್ಳಲು ಅವಕಾಶವಿದ್ದು, ಮರ್ಣೆ ಪಂ.ವ್ಯಾಪ್ತಿಯ ಹಾಗೂ ವರಂಗ ಪಂಚಾಯತ್ ವ್ಯಾಪ್ತಿಯ ಕಾಡುಹೊಳೆ ಪ್ರದೇಶದ ಕೃಷಿಕರ ಬಾವಿಗಳ ಅಂತರ್ಜಲ ವೃದ್ಧಿಸಿ ಕೃಷಿಗೆ ಸಾಕಷ್ಟು ನೀರು ಒದಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.ಕಿಂಡಿ ಅಣೆಕಟ್ಟುವಿನೊಂದಿಗೆ ವಿಶಾಲ ವಾದ ಸೇತುವೆ ಕಾಮಗಾರಿಯು ನಡೆ ಯುತ್ತಿದ್ದು ಅಂತಿಮ ಹಂತದಲ್ಲಿದೆ.
ಮುಂಬರುವ ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳ್ಳಲಿದೆ. ಸೇತುವೆ ನಿರ್ಮಾಣದಿಂದಾಗಿ ವರಂಗ ಹಾಗೂ ಮರ್ಣೆ ಪಂಚಾಯತ್ ವ್ಯಾಪ್ತಿಯ ಕಾಡು ಹೊಳೆ ಪರಿಸರದ ಜನತೆಗೆ ಸಂಚಾರಕ್ಕೆ ಸಹಕಾರಿಯಾಗಲಿದೆ.
ಕಾಡುಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಹೊಳೆಯ ಇಕ್ಕೆಲಗಳ ಜನರಿಗೆ ಸಂಪರ್ಕಕ್ಕೆ ಸುತ್ತು ಬಳಸಿ ಹೋಗಬೇಕಾಗಿತ್ತು. ಈ ಸೇತುವೆ ನಿರ್ಮಾಣ ದಿಂದಾಗಿ ಸುಮಾರು 100 ಮನೆಗಳ ಜನರಿಗೆ ಸಂಪರ್ಕಕ್ಕೆ ಅನುಕೂಲವಾಗಿದೆ.
ಉತ್ತಮ ಸ್ಪಂದನೆ
ಕಾಡುಹೊಳೆ ಪರಿಸರದ ಕೃಷಿಕರ ಬಹುದಿನದ ಬೇಡಿಕೆ ಕಿಂಡಿ ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿದೆ. ಈ ಬಗ್ಗೆ ಸ್ಥಳೀಯರು ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದನೆ ದೊರೆತಂತಾಗಿದೆ.
– ಕೃಷ್ಣ ನಾಯ್ಕ , ಕೃಷಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.