ಪೀಡಕನ ಹಿಡಿದದ್ದು ಸಿಬಂದಿ
Team Udayavani, May 15, 2018, 6:00 AM IST
ತಿರುವನಂತಪುರ: ಕೇರಳದ ಮಣಪ್ಪುರಂದಲ್ಲಿ ಆಭರಣ ಉದ್ಯಮಿ ಮೊಯಿದೀನ್ ಕುಟ್ಟಿ 10 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣವು ಬೆಳಕಿಗೆ ಬಂದಿದ್ದು ಸಿನಿಮಾ ಥಿಯೇಟರಿನ ಸಿಬಂದಿ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ.
ಅಂದು ನಡೆದಿದ್ದಿಷ್ಟು. ಎಲ್ಲ ಸಮಯದಲ್ಲೂ ಸಿಸಿಟಿವಿ ಗಮನಿಸುವಂಥ ಸಿಬಂದಿ, ಅಂದು ಇನ್ನೊಂದು ಸ್ಕ್ರೀನ್‌ನಲ್ಲಿ ಯಾವುದೋ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಸಿಸಿಟಿವಿ ವೀಕ್ಷಿಸಿರಲಿಲ್ಲ. 9 ಗಂಟೆ ಹೊತ್ತಿಗೆ ಸಿಸಿಟಿವಿ ವೀಕ್ಷಿಸಲು ಆಗಮಿಸಿದಾಗ ಮಗುವಿನ ಮೇಲೆ ದೌರ್ಜನ್ಯ ನಡೆಯುತ್ತಿರು ವುದು ಕಂಡುಬಂತು ಎಂದಿದ್ದಾರೆ ಸಿಬಂದಿ ಸನೂಪ್. ಸ್ಕ್ರೀನ್ ಜೂಮ್ ಮಾಡಿದಾಗ ನನ್ನ ಅನುಮಾನ ನಿಜವಾಯಿತು. ಆದರೆ, ಸಿನಿಮಾ ಮುಗಿಯಲು 10 ನಿಮಿಷವಷ್ಟೇ ಬಾಕಿಯಿತ್ತು. ಕೂಡಲೇ ಥಿಯೇಟರ್ ಮ್ಯಾನೇಜರ್‌ಗೆ ತಿಳಿಸಿದೆ. ಮಕ್ಕಳ ಸಹಾಯವಾಣಿ ಅಧಿಕಾರಿ ಗಳಿಗೆ ವಿಡಿಯೋ ಹಸ್ತಾಂತರಿಸಿದೆವು. ಸಿನಿಮಾ ಮುಗಿಯುತ್ತಿದ್ದಂತೆ ಮೊಯಿದೀನ್‌ನನ್ನು ಬೆನ್ನಟ್ಟಿ ಹೋಗಿ, ಆತನ ಬೆಂಜ್ ಕಾರಿನ ನಂಬರ್ ಅನ್ನು ಬರೆದುಕೊಂಡೆವು. ದೌರ್ಜ ನ್ಯದ ವೇಳೆ ಮಗು ಮುಂದಿನ ಸೀಟಿನಲ್ಲಿ, ಮಗುವಿನ ತಾಯಿ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
ಇಡೀ ವಿಡಿಯೋ ವೀಕ್ಷಿಸಿ ಮರುದಿನ ಪೊಲೀಸರಿಗೆ ದೂರು ನೀಡಲಾಯಿತು. ಪ್ರತಿ ದಿನ ಕರೆ ಮಾಡಿ ಪ್ರಕರಣದ ವರದಿ ಕೇಳುತ್ತಿ ದ್ದೆವು. ಆದರೆ ಟಿವಿ ಚಾನೆಲ್ ಈ ದೃಶ್ಯ ಪ್ರಸಾರ ಮಾಡುವವರೆಗೂ ಪೊಲೀಸರು ಯಾವ ಕ್ರಮ ವನ್ನೂ ಕೈಗೊಳ್ಳಲಿಲ್ಲ ಎಂದಿದ್ದಾರೆ ಸನೂಪ್.
ಸದ್ಯ ಮೊಯಿದೀನ್ ಕುಟ್ಟಿಯನ್ನು ಹಾಗೂ ದೌರ್ಜನ್ಯ ನಡೆಯುತ್ತಿದ್ದರೂ ತಡೆಯದ ಆಕೆಯ ತಾಯಿಯನ್ನೂ ಬಂಧಿಸಲಾಗಿದೆ. ಮೊಯಿದೀನ್ ಕುಟ್ಟಿ ಈ ಭಾಗದಲ್ಲಿ ಸ್ವರ್ಣ ಕುಟ್ಟಿ ಎಂದೇ ಹೆಸರಾಗಿದ್ದ. ಅಷ್ಟೇ ಅಲ್ಲ, ಕಥುವಾದ ಆಸಿಫಾ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯಲ್ಲೂ ಮುಂದೆನಿಂತು ಭಾಗವಹಿಸಿದ್ದ! ಆದರೆ ಆತನೇ ಇದೀಗ ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.