ರಾಜರಾಜೇಶ್ವರಿನಗರ ಕ್ಷೇತ್ರ: 9,564 ಮತದಾರರಿಗೆ ಹೊಸ ಗುರುತಿನ ಚೀಟಿ
Team Udayavani, May 15, 2018, 6:50 AM IST
ಬೆಂಗಳೂರು: “ಅಸಲಿ ಓಟರ್ ಐಡಿ ಪತ್ತೆ ಪ್ರಕರಣದ’ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ 9,564 ಮತದಾರರಿಗೆ ಹೊಸದಾಗಿ ಚುನಾವಣಾ ಗುರುತಿನ ಚೀಟಿ (ಎಪಿಕ್ ಕಾರ್ಡ್) ವಿತರಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೇ 21ರೊಳಗೆ ಎಲ್ಲ 9,564 ಮತದಾರರಿಗೆ ಎಪಿಕ್ ಕಾರ್ಡ್ಗಳನ್ನು ವಿತರಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಅದರಂತೆ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್ ನೇತೃತ್ವದ ತಂಡ ಕಾರ್ಯಪ್ರವೃತ್ತವಾಗಿದೆ. ಎಪಿಕ್ ಕಾರ್ಡ್
ಹಂಚಲು 1,000 ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಚುನಾವಣಾ ಆಯೋಗದ ಪರಿಷ್ಕೃತ ದಿನಾಂಕದಂತೆ ಮೇ 28ಕ್ಕೆ ರಾಜರಾಜೇಶ್ವರಿ ನಗರದಲ್ಲಿ ಮತದಾನ ನಡೆಸಬೇಕಿದೆ. ಆದರೆ, ಜಾಲಹಳ್ಳಿಯ ಆಪಾರ್ಟ್ಮೆಂಟ್
ವೊಂದರಲ್ಲಿ ವಶಪಡಿಸಿಕೊಳ್ಳಲಾದ ಎಲ್ಲ 9,564 ಎಪಿಕ್ ಕಾರ್ಡ್ಗಳು ಪೊಲೀಸರ ವಶದಲ್ಲಿವೆ. ಕ್ರಿಮಿನಲ್ ಪ್ರಕರಣ ಆಗಿರುವುದರಿಂದ ಎಪಿಕ್ ಕಾರ್ಡ್ಗಳನ್ನು ಪೊಲೀಸರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಅವುಗಳು ನಮಗೆ ಸಿಗುವುದಿಲ್ಲ. ಹಾಗಾಗಿ, ಮತದಾನಕ್ಕೆ ಅವಕಾಶ ನೀಡುವ ಉದ್ದೇಶದಿಂದ ಹೊಸ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ.ಕ.ದ ವೈಭವಿ, ಉಡುಪಿಯ ಧೀರಜ್ ಐತಾಳ್ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ
D.K. Shivakumar: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬಗ್ಗೆ ಚರ್ಚೆ
KEA: ಎಂಎಸ್ಸಿ ನರ್ಸಿಂಗ್: ಅರ್ಜಿ ಸಲ್ಲಿಕೆಗೆ ಡಿ. 2 ಕೊನೆ ದಿನ
Karnataka: ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲು ಡಿ. 9 ಕಡೇ ದಿನ
ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.