ರಾಯಭಾರಿ ಕಚೇರಿ ಸ್ಥಳಾಂತರಕ್ಕೆ ಸಾವಿನ ರಿಂಗಣ
Team Udayavani, May 15, 2018, 6:00 AM IST
ಜೆರುಸಲೇಂ/ಗಾಜಾ ಸಿಟಿ: ಬರೋಬ್ಬರಿ 41 ಮಂದಿ ಪ್ಯಾಲೆಸ್ತೀನ್ ನಾಗರಿಕರು ಅಸುನೀಗುವುದರ ಜತೆಗೇ ಜೆರುಸಲೇಂನಲ್ಲಿ ಅಮೆರಿಕದ ರಾಯಭಾರ ಕಚೇರಿ ಆರಂಭವಾಗಿದೆ. 2017ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಂ ಇಸ್ರೇಲ್ ರಾಜಧಾನಿ ಎಂದು ಘೋಷಿಸಿ, ಅಲ್ಲಿಗೆ ಅಮೆರಿಕದ ರಾಯಭಾರ ಕಚೇರಿ ಸ್ಥಳಾಂತರಿಸುವುದಾಗಿ ಹೇಳಿದ್ದರು. ಭಾರತ ಸೇರಿ ಹಲವು ರಾಷ್ಟ್ರಗಳು ಟ್ರಂಪ್ ನಿರ್ಧಾರವನ್ನು ಆಕ್ಷೇಪಿಸಿದ್ದವು.
ಆದರೆ ಈ ಪ್ರತಿರೋಧಗಳನ್ನು ತಳ್ಳಿ ಹಾಕಿದ್ದ ಅಮೆರಿಕ ಸೋಮವಾರ ಜೆರುಸಲೇಂನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಿ ರಾಯಭಾರ ಕಚೇರಿ ಆರಂಭಿಸಿದೆ. ಇಸ್ರೇಲ್‌ನಲ್ಲಿರುವ ಅಮೆರಿಕದ ರಾಯಭಾರಿ ಡೇವಿಡ್ ಫ್ರಿಡ್‌ಮನ್ ಮಾತನಾಡಿ, ಅಮೆರಿಕವೇ ವಿಶ್ವದಲ್ಲಿ ಮೊದಲ ಬಾರಿಗೆ ಇಸ್ರೇಲನ್ನು ದೇಶ ಎಂದು ಗುರುತಿಸಿತ್ತು. ಇದೀಗ ರಾಯಭಾರ ಕಚೇರಿಯನ್ನೂ ಸ್ಥಳಾಂತರಿಸುವ ಮೂಲಕ ಇದರಲ್ಲೂ ನಾವೇ ಮುನ್ನುಡಿ ಬರೆದಿದ್ದೇವೆ ಎಂದು ಘೋಷಿಸಿ ಕೊಂಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಇದೊಂದು ಐತಿಹಾಸಿಕ ಕ್ಷಣ. ಟ್ರಂಪ್ ಅವರಿಗೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಕಾರ್ಯಕ್ರಮದ ನಡುವೆಯೇ ಸಾವಿರಾರು ಮಂದಿ ಪ್ಯಾಲೆಸ್ತೀನಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ 2014ರ ಬಳಿಕ ಭೀಕರ ಗುಂಪು ಘರ್ಷಣೆ, ಹಿಂಸಾಚಾರಗಳು ನಡೆದಿವೆ. ಇಸ್ರೇಲ್ ಸೇನಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸುವ ನಿಟ್ಟಿನಲ್ಲಿ ಗುಂಡು ಹಾರಿಸಿದ ಪರಿಣಾಮವಾಗಿ 41 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 1 ಸಾವಿರಕ್ಕೂ ಅಧಿಕ ಮಂದಿ ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.