ರಿಕ್ಷಾದಲ್ಲಿ ಬಾಕಿಯಾಗಿದ್ದ ಐಫೋನ್ ಹಿಂದಿರುಗಿಸಿದ ಚಾಲಕ
Team Udayavani, May 15, 2018, 11:15 AM IST
ಮಹಾನಗರ: ರಿಕ್ಷಾದಲ್ಲಿ ಬಾಕಿಯಾಗಿದ್ದ ಐಫೋನ್ 7 ಮೊಬೈಲ್ನ್ನು ವಾರಸುದಾರರಿಗೆ ಹಿಂದಿರುಗಿಸಿ ರಿಕ್ಷಾ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಗೆ ತೆರಳಬೇಕಾಗಿದ್ದ ಕೇರಳ ಮೂಲದ ಪ್ರಯಾಣಿಕರೊಬ್ಬರು ಸುಮಾರು 45,000 ರೂ. ವೆಚ್ಚದ ಐಫೋನ್ 7 ಮೊಬೈ ಲ್ನ್ನು ರೈಲು ನಿಲ್ದಾಣದ ಪ್ರಿಪೇಯ್ಡ ಕೌಂಟರ್ ನಿಂದ ಹತ್ತಿದ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ಆಸ್ಪತ್ರೆಯಲ್ಲಿ ಇಳಿದ ಬಳಿಕ ಮೊಬೈಲ್ ಕಾಣದಿರುವುದು ಪ್ರಯಾಣಿಕನ ಗಮನಕ್ಕೆ ಬಂದಿದೆ. ಆಸ್ಪತ್ರೆಯಿಂದ ಮರಳಿ ರೈಲು ನಿಲ್ದಾಣಕ್ಕೆ ಬಂದ ಪ್ರಯಾಣಿಕ ಅಲ್ಲಿದ್ದ ಕದ್ರಿ ಠಾಣೆಯ ಟ್ರಾಫಿಕ್ ಪೊಲೀಸ್ ಬಸವ ರಾಜು ಅವರ ಗಮನಕ್ಕೆ ತಂದಿದ್ದಾರೆ. ಬಸವ ರಾಜು ಅವರು ಪ್ರಿಪೇಯ್ಡ ಕೌಂಟರ್ನಲ್ಲಿ ನೀಡಿದ್ದ ಟಿಕೆಟ್ ಮೂಲಕ ರಿಕ್ಷಾ ಸಂಖ್ಯೆ, ಮೊಬೈಲ್ ಸಂಖ್ಯೆ ಪಡೆದು ಕರೆ ಮಾಡಿ ದ್ದಾರೆ. ವಿಷಯ ತಿಳಿದ ರಿಕ್ಷಾ ಚಾಲಕ ಅಭಿಷೇಕ್ ಮೊಬೈಲ್ ತಂದು ಪ್ರಯಾಣಿಕನಿಗೆ ಹಿಂದಿರುಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.