ನಿನ್‌ ಮಾತು ಕೇಳದಿದ್ರ ಮನಸ್ಸಿಗೆ ಖುಷಿ ಇರೂದಿಲ್ಲ…

Team Udayavani, May 15, 2018, 1:50 PM IST

n-5.jpg

ಸಿಟ್ಟ ತರಿಸಿದ ನಂತ್ರ ಸಮಾಧಾನ ಮಾಡೋ ಕಲಾ ಮಾತ್ರ ನಿನಗಷ್ಟ ಗೊತ್ತದ ನೋಡ. ಬಣ್ಣಬಣ್ಣದ್ದ ಮಾತ, ಮಾತಾಡಾಕತ್ತಿ ಅಂದ್ರ, 100 ಡಿಗ್ರಿ ಸೆಲ್ಸಿಯಸ್‌ ಕುದಿಯುವ ಸಿಟ್ಟ ಕೂಡ ತಣ್ಣಗ ಅಂದ್ರ ತಣ್ಣಗ ಆಗತೈತಿ. 

ಆತ್ಮೀಯ ಮಾತುಗಾರ,
 ಅಲ್ಲ, ಹೆಂಗ ಮಾತಾಡಬೇಕ ಅಂತ ನಿನ್ನಿಂದ ಕಲಿಬೇಕ ನೋಡ. ಅಷ್ಟ ಮೋಡಿ ಮಾಡತಿ, ಮಾತಿನ್ಯಾಗ ನೀ. ಆ ದೇವರ, ಮಾತಿನ ಭಂಡಾರ ಮಾತ್ರ ಬಾಳ ಕೊಟ್ಟಾನ ನಿನಗ. ಫೋನ್‌ ಮತ್ತ ಮೆಸೇಜ್‌ಗೆ ರಿಪ್ಲೆ„ ಮಾಡಲಿಲ್ಲಂದ್ರ ನನಗ ಸಿಟ್ಟ ಬರತೈತಿ ಅಂತ ಗೊತ್ತೈತಿ ನಿನಗ. ಅಂದ್ರೂ ನನ್ನ ಕಾಡೋದ ಬಿಡಲ್ಲ ನೀ. ಯಾಕ ರಿಪ್ಲೆ„ ಮಾಡಲ್ಲ? ಜಗತ್ತನ್ಯಾಗ ನೀ ಒಬ್ಬನ ಕೆಲಸಾ ಮಾಡತಿಯೇನ್‌? ಬೇಕಾದವರಿಗೆ ಸ್ವಲ್ಪಾದರೂ ವ್ಯಾಳಾ ತಗೊಂಡ, ಕಾಲ್‌, ಮೆಸೇಜ್‌ ಮಾಡಬೇಕ. ಯಾವಾಗರ ಒಮ್ಮೊಮ್ಮೆ ಆಗಿದ್ರ ಸುಮ್ಮನಿರತಿ¨ªೆ, ಆದ್ರ ಬಾಳ ಸತಿ ಉತ್ತರಾ ಕೊಡಲ್ಲ. ಆನಂದ ಆಗತದ ಏನ ನಿಂಗ ಕಾಡೊದ್ರಾಗ? ಸಿಟ್ಟ ತರಿಸಿದ ನಂತ್ರ ಸಮಾಧಾನ ಮಾಡೋ ಕಲಾ ಮಾತ್ರ ನಿನಗಷ್ಟ ಗೊತ್ತದ ನೋಡ. ಬಣ್ಣಬಣ್ಣದ್ದ ಮಾತ, ಮಾತಾಡಾಕತ್ತಿ ಅಂದ್ರ, 100 ಡಿಗ್ರಿ ಸೆಲ್ಸಿಯಸ್‌ ಕುದಿಯುವ ಸಿಟ್ಟ ಕೂಡ ತಣ್ಣಗ ಅಂದ್ರ ತಣ್ಣಗ ಆಗತೈತಿ. ಅಂಥಾ ಮಾತಿನ ಸರದಾರ ನೋಡ ನೀ.

ಜಗಳ ಅತಿರೇಕಕ್ಕ ಹೋಗಿ, ನಾ ಮಾತಾಡೋದ ಬಿಟ್ಟಿನೀ ಅಂದ್ರ, “ದೇವ್ರ, ಸಿಟ್ಟಾಗತಿ ಸಿಟ್ಟಾಗ, ಬೈಯತಿ ಬೈ. ಆದ್ರ ನನ್ನ ಜೊತಿ ಮಾತ ಮಾತ್ರ ಬಿಡಬ್ಯಾಡ. ನಿನ್ನ ಮಾತ ಕೇಳದಿದ್ರ ಮನಸ್ಸಿಗೆ ಖುಷಿ ಇರುದಿಲ್ಲಲೇ… ಜಗಳಾ ತಗದ್ರೂ ನನ್ನ ಜೊತಿ ತಗಿ, ಆದ್ರ ಮಾತ ಬಿಡಬ್ಯಾಡ. ಮಾತ ಬಂದ್‌ ಅಂದ್ರ, ನನ್ನ ಉಸರ ನಿತಂಗ ಆಗತೈತಿ. ಹಂಗ ಮಾಡಬ್ಯಾಡ. ಕೆಲಸ ಅಂದ್ರ ಸ್ವಲ್ಪ ಬಿಜಿ ಇರತೇನಿ, ಅನುಸರಿಸಿಕೊ. ಸಂತೋಷದಿಂದ ಮಾತಾಡಲೇ ನನ್ನ ಜೊತಿ’ ಅಂದ ಅಗದೀ ಕರುಣಾ ಬರೋವಂಗ ಮಾತಾಡತಿ. ಬಾಳ ಕಾಡಬ್ಯಾಡ, ನನ್ನ ಭಾವನೆಗಳಿಗೆ ಕಿಮ್ಮತ್ತ ಕೊಡುತ ಬಾ ಅಂದ್ರ, “ಅಯ್ಯೋ ಹುಚ್ಚಿ, ನಿನ್ನಲ್ಲಿ ನನಗ ಬಾಳ ಸೇರಿದ್ದ, ನಿನ್ನ ಭಾವನೆಗೊಳ. ನಾ ಯಾಕ ನಿನ್ನ ಭಾವನೆಗೊಳ ಜೊತಿ ಆಟಾ ಆಡ್ಲಿ? ನನ್ನ ನಿನ್ನ ಪ್ರೀತಿ ತಳಪಾಯ ಈ ಭಾವನೆಗೊಳನ, ಇವಿಲ್ಲದ ಜೀವನ ನಡೆಯೊಲ್ಲ. ಮ್ಯಾಲ ನನ್ನ ಬಿಟ್ಟ ಯಾರ ಜೊತಿ ಜಗಳಾ ತಗಿತಿ ನೀ? ತಗಿ ಎಷ್ಟ ಜಗಳ ಬೇಕೊ ಅಷ್ಟ. ನಾ ಏನೂ ಅನ್ನಲ್ಲ. ನೀನ ಕರೆಕ್ಟ್. ಆತಿಲೋ? ಸಾಯೋವರೆಗೂ ನಾ ನಿನ್ನ ಜೊತಿ ಮಾತಾಡಬೇಕ ಅಷ್ಟ’ ಅಂದ ನಾ ಅಳುವಂಗ ಮಾಡತಿ.

ಹೌದ, ನೀ ಹೇಳಿದಂಗ ನನಗ ಸಿಟ್ಟ ಬಾಳ. ತಡಕೊಳ್ಳಾಕ ಆಗಲ್ಲ. ಆದ್ರ ನಿನ್ನ ಮಾತು ಏನ್‌ ಅದಾವಲಾ ಅವ, ಏಕದಮ್‌ ನನ್ನ ಸಿಟ್ಟ ಕರಗಿಸಿ ಬಿಡತಾವ ನೋಡ. ಅದಕ್ಕ ಅನ್ನಾತೇನಿ, ಮಾತಿನ ಭಂಡಾರ ನಿನಗ ಒಲದೈತಿ, ಹಂಗಾಗಿ ನನ್ನ ಸಮಾಧಾನ ಮಾಡೊದ್ರಾಗ ನಿಂದ ಎತ್ತಿದ ಕೈ.
ನಿನ್ನ ಮಾತಗಳಿಗೆ ಮರುಳಾದಕಿ
ಪೂವು

ಮಾಲಾ ಮ. ಅಕ್ಕಿಶೆಟ್ಟಿ

ಟಾಪ್ ನ್ಯೂಸ್

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Gambir-family

Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್‌ ಗಂಭೀರ್‌ ಭಾರತಕ್ಕೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Gambir-family

Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್‌ ಗಂಭೀರ್‌ ಭಾರತಕ್ಕೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.