ಸುಕುಮಾರ ಶೆಟ್ಟರ ಮನೆಯಲ್ಲಿ ಸಂಭ್ರಮಾಚರಣೆ, ವಿಜಯೋತ್ಸವ
Team Udayavani, May 16, 2018, 6:50 AM IST
ಉಪ್ಪುಂದ: ಎಲ್ಲ ತಲೆಯಲ್ಲಿ ಚುನಾವಣೆಯ ಲೆಕ್ಕಾಚಾರದ ಕಾವು ಏರುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ಸುಕುಮಾರ ಶೆಟ್ಟಿ ಅವರು ತಮ್ಮ ದಿನ ನಿತ್ಯದ ದಿನಚರಿಯಲ್ಲಿಯಲ್ಲಿ ತೊಡಗಿಕೊಂಡಿದ್ದರು.
ಬೆಳಗ್ಗೆ 4 ಗಂಟೆಗೆ ಎದ್ದು ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಕುಂಭಾಸಿ ಆನೆಗುಡ್ಡೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಬೆಳಗ್ಗೆ ಗಂಟೆ 6.30ಕ್ಕೆ ಮನೆಗೆ ಬಂದ ಅವರು, ಮತ್ತೆ ಮನೆಯಲ್ಲಿ ಒಂದು ಗಂಟೆಗಳ ಕಾಲ ಪೂಜೆಯಲ್ಲಿ ತೊಡಗಿಸಿಕೊಂಡರು.ಗೋವುಗಳಿಗೆ ಆಹಾರವನ್ನು ನೀಡಿದ ಬಳಿಕ ಉಪಾಹಾರ ಸೇವಿಸಿ, ಪತ್ರಿಕೆ ಓದಿದ ಅನಂತರ ಪಕ್ಷದ ಪ್ರಮುಖರ ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
ಸಾಧು ಸಂತರೊಂದಿಗೆ ಮಾತುಕತೆ
ಮೈಸೂರಿನಿಂದ ಕೊಲ್ಲೂರಿಗೆ ಆಗಮಿಸಿದ ಸಾಧುಸಂತರು ಬಿ.ಎಂ.ಸುಕುಮಾರ ಶೆಟ್ಟಿ ಅವರನ್ನು ಭೇಟಿ ಮಾಡಿದರು. ಕುಶಲೋಪರಿ ವಿಚಾರಿಸಿದ ಬಳಿಕ ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು. ಕಾರ್ಯಕರ್ತರು ಹಾಗೂ ಪಕ್ಷದ ಪ್ರಮುಖರು ಓಟಿನ ಲೆಕ್ಕಾಚಾರದ ತಲೆಬಿಸಿಯಲ್ಲಿ ಇದ್ದರೆ ಅವರು ಮಾತ್ರ ನಿರಾಳತೆಯಿಂದ ಮನೆಯ ಹೊರಗಡೆ ಸಮಯ ಕಳೆಯುತ್ತಿರುವುದು ಕಂಡುಬಂತು.
ಸಂಭ್ರಮಾಚರಣೆ
ಹೆಚ್ಚು ಅಂತರದ ಮುನ್ನಡೆ ಪಡೆಯುತ್ತಿದ್ದಂತೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ನೂರಾರು ಬೆಂಬಲಿಗರು, ಪಕ್ಷದ ಪ್ರಮುಖರು ಮನೆಗೆ ಆಗಮಿಸುತ್ತಿರುವುದು ಈ ಸಂದರ್ಭ ಕಂಡುಬಂತು. ಬೆಂಬಲಿಗರ ಖಷಿಯ ಕೂಗ್ಗು ಜೋರಾಗಿಯೇ ಕೇಳಿಬಂತು. ಈ ನಡುವೆ ಅವರು ಪಕ್ಷದ ಪ್ರಮುಖರೊಂದಿಗೆ ಉಡುಪಿಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.