ಕ್ಷೇತ್ರ ಉಳಿಸಿಕೊಂಡ ಶಿವರಾಮ ಹೆಬ್ಬಾರ್
Team Udayavani, May 16, 2018, 12:41 PM IST
ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ 2018 ರ ಚುನಾವಣೆಯಲ್ಲಿ ಅರಬೈಲ್ ಶಿವರಾಮ ಹೆಬ್ಬಾರ್ ಎರಡನೇ ಬಾರಿಯೂ ಗೆಲ್ಲುವ ಮೂಲಕ ಬಿಜೆಪಿ ಗಂಡುಮೆಟ್ಟಿನ ನೆಲದಲ್ಲಿ ಪುನಃ ಝೇಂಡಾ ಊರಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ್ ಮತ್ತು ಹೆಬ್ಟಾರ್ ನಡುವಿನ ತೀವ್ರ ಪೈಪೋಟಿ ನಡುವೆಯೂ ಕೂದಳೆಲೆ ಅಂತರದಲ್ಲಿ ಹೆಬ್ಟಾರ್ ಗೆಲುವು ಸಾಧಿಸಿ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಸಮರ್ಪಿಸಿದ್ದಾರೆ. ಗೆಲ್ಲಲೇಬೇಕಾದ ಬಿಜೆಪಿ ಮುಖಂಡರೊಳಗಿನ ಭಿನ್ನಾಭಿಪ್ರಾಯ ಸೋಲಿಗೆ ತಳ್ಳಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮಂಗಳವಾರ ಬೆಳಗ್ಗೆಯಿಂದಲೇ ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ದೂರದರ್ಶನ ಜಾಲತಾಣಗಳ ವೀಕ್ಷಣೆ ಮೂಲಕ ಜನ ತಿಳಿದುಕೊಳ್ಳುತ್ತಿದ್ದರು. ಪಟ್ಟಣದ ವಿವಿಧ ಅಂಗಡಿ ಮುಗ್ಗಟ್ಟುಗಳ ಮುಂದೆ ದೂರದರ್ಶನ ವೀಕ್ಷಿಸಲು ಜನ ಜಮಾಯಿಸಿದ್ದರು. ಕುತೂಹಲದ ವಿದ್ಯಮಾನವನ್ನು ದೂರರ್ಶನ, ಮೊಬೈಲ್, ಸಾಮಾಜಿಕ ಜಾಲತಾಣಗಳ ಮಾಹಿತಿ ರವಾನಿಸಿಕೊಳ್ಳುತ್ತಿದ್ದರು. ಪ್ರತಿ ಕ್ಷಣವೂ ರೋಚಕವಾಗಿದ್ದು, ಎಣಿಕೆಯ ಅರ್ಧದವರೆಗೆ ಬಿಜೆಪಿ ಅಭ್ಯರ್ಥಿ ವಿ.ಎಸ್. ಪಾಟೀಲ್ ಭಾರೀ ಮುನ್ನಡೆ ಸಾಧಿಸಿದ್ದರು. ಇದರಿಂದ ಕಾರ್ಯಕರ್ತರಲ್ಲಿ ಅಮಿತ ಉತ್ಸಾಹ ಗೋಚರಿಸಿತ್ತು. ಮುಂಡಗೋಡ ಭಾಗದ ಮತ ಎಣಿಕೆ ಶುರುವಾಗುತ್ತಿದ್ದಂತೆ ಶಿವರಾಮ ಹೆಬ್ಟಾರ ಮುನ್ನಡೆ ಸಾ ಧಿಸುತ್ತಲೇ ನಡೆದರು. ಕೊನೆಗೆ ಬನವಾಸಿ ಭಾಗದಲ್ಲಿ ಬಿಜೆಪಿ ಗೆಲುವಾಗಬೇಕಿತ್ತಾದರೂ ಕೊನೇಘಳಿಗೆಯಲ್ಲಿ ಏರು-ಪೇರು ಕಂಡಿದ್ದು, ಕೊನೆಗೆ ಅಲ್ಪ ಮತದಿಂದ (1483 ಮತ ) ಗೆಲುವು ಸಾಧಿಸಿ ವಿಜಯದ ನಗೆ ಬೀರಿದ್ದಾರೆ. ಈ ಮೂಲಕ ಕ್ಷೇತ್ರವನ್ನು ಹೆಬ್ಟಾರ ಉಳಿಸಿಕೊಂಡಿದ್ದರೆ.
ಇತ್ತ ಕಾಂಗ್ರೆಸ್ ಬಿಜೆಪಿಯ ಕೆಲವರನ್ನು ತಣ್ಣಗೆ ಮಾಡಿದಂತೆ ಜೆಡಿಎಸ್‌ನ ಕೆಲವರನ್ನು ಮುಷ್ಠಿಗೆ ತೆಗೆದುಕೊಳ್ಳುವ ಮೂಲಕ ಅವರ ಮತವನ್ನು ತನ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಫಲ ದೊರೆತಿದೆ. ಹೆಬ್ಟಾರರು ಯಲ್ಲಾಪುರ ತಾಲೂಕನ್ನು ಕಡೆಗಣಿಸಿ ಮುಂಡಗೋಡ ಮತ್ತು ಬನವಾಸಿಯಲ್ಲೇ ಕೇಂದ್ರೀಕರಿಸಿ ಮಾಡಿದ ಪ್ರಯತ್ನಕ್ಕೆ ಲಾಭ ಸಿಕ್ಕಿದೆ.
ಸಂಭ್ರಮ:ಯಲ್ಲಾಪುರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಟಾರ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಪಟ್ಟಣದ ವಿವಿಧೆಡೆ ಮೆರವಣಿಗೆ ನಡೆಸಿ ಹೆಬ್ಟಾರ್ ಗೆಲುವಿಗೆ ಸಂಭ್ರಮಿಸಿದರು.
ಹೆಬ್ಟಾರ ಯಾರು:ಶೇವಾRರಿನ ಮಹಾಬಲೇಶ್ವರ ಹೆಬ್ಟಾರ್ ಅವರ ಅಷ್ಟಮ ಪುತ್ರರಾಗಿ ಜನಿಸಿದ ಇವರು ಹೊನ್ನಾವರದ ಧರ್ಮಶಾಲಾದಲ್ಲಿಯೇ ಪ್ರಾಥಮಿಕ ಶಾಲೆ ಮುಗಿಸಿದರು. ಶಿಕ್ಷಣ ಮುಗಿಸಿದ ನಂತರ ಶಿವರಾಮ ಹೆಬ್ಟಾರ್ 1979 ರಲ್ಲಿ ಸ್ವಂತ ಲಾರಿ ಖರೀದಿಸಿ, ಚಾಲಕರಾಗಿಯೂ ಶ್ರಮಪಡುತ್ತಿದ್ದರು. ಚಿಕ್ಕ ವಯಸ್ಸಿನಿಂದಲೇ ಸಂಘಟನೆಯಲ್ಲಿಯೂ ತೊಡಗಿದ್ದರು.
ಇವರ ನಾಯಕತ್ವ ಗುಣವನ್ನು ಕಂಡವರು ಇವರನ್ನು ಪ್ರಥಮವಾಗಿ ಎಪಿಎಂಸಿ ಚುನಾವಣೆಯಲ್ಲಿ ಇಡಗುಂದಿ ಭಾಗದ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿಸುವ ಮೂಲಕ ರಾಜಕೀಯಕ್ಕೆ ಕರೆ ತಂದರು. ರಾಜಕೀಯ ಜೀವನದಲ್ಲಿ ಅನೇಕ ಏರುಪೇರುಗಳನ್ನು ಕಂಡಿರುವ ಶಿವರಾಮ ಹೆಬ್ಟಾರ್, ಜನತಾ ಪಕ್ಷದಿಂದ ಬಿಜೆಪಿ ಸೇರಿ, ಬಿಜೆಪಿಯಲ್ಲಿ ಆರು ಜಿಲ್ಲಾಧ್ಯಕ್ಷರಾಗಿ ರಾಜಕೀಯ ಅನುಭವ ಪಡೆದರು. ಜಿಲ್ಲೆಯ ಉದ್ದಗಲಕ್ಕೂ ಓಡಾಡಿ, ಘಟಾನುಘಟಿಗಳ ಒಡನಾಟದ ಮೂಲಕ ಸಂಘಟನೆ ಮೂಲ ತಿಳಿದುಕೊಂಡರು. ನಂತರ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ,ಎಪಿಎಂಸಿ ಅಧ್ಯಕ್ಷರಾಗಿ, ವಿವಿಧ ಸಹಕಾರಿ ಸಂಘಗಳ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್ ಸೇರಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾರ್ಗರೇಟ್ ಆಳ್ವಾ ಮುಂತಾದ ನಾಯಕರಿಗೆ ನಿಕಟರಾಗಿ, ಅವರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಮುಳುಗುತ್ತಿರುವ ಹಡಗಿನಂತಿದ್ದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದರು.
ನೂತನವಾಗಿ ಹುಟ್ಟಿದ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ 2008ರ ಚುನಾವಣೆಯಲ್ಲಿ ಕೇವಲ 2500 ಮತಗಳ ಅಂತರದಿಂದ ಸೋಲು ಕಂಡರು. ಸೋಲಿನಿಂದ ಧೃತಿಗೆಡದೇ 2013 ರಲ್ಲಿ ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದರು.
ಸೋಲು ನಮಗೆ ನಿರೀಕ್ಷೆಯೇ ಇರಲಿಲ್ಲ. ಆದರೆ ಕೂದಲೆಳೆ ಅಂತರದಲ್ಲಿ ಸೋಲಾಗಿದೆ. ಸೋಲಿನ ಬಗ್ಗೆ ಜಿಜಾ`ಸೆ ಉಂಟಾಗಿದ್ದು ಇದರ ಒಳಗುಟ್ಟು ಬಹಿರಂಗಗೊಳ್ಳದೇ ಇರದು. ಏನಿದ್ದರೂ ಕ್ಷೇತ್ರದ ಜನ ನನಗೇ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ. ಅವರನ್ನು ನಾನೆಂದೂ ಮರೆಯುವುದಿಲ್ಲ ಅಭಿನಂದಿಸುತ್ತೇನೆ.
ವಿ.ಎಸ್. ಪಾಟೀಲ್, ಬಿಜೆಪಿ ಅಭ್ಯರ್ಥಿ
ಗೆಲುವು ನನ್ನದೇ ಎಂದು ಹೇಳಿಕೊಳ್ಳುತ್ತಲೇ ಬಂದಿದ್ದೆ. ಅಭಿವೃದ್ಧಿ ಮಾಡಿದ ನನ್ನನ್ನು ಜನಾಶೀರ್ವಾದ ಮಾಡಿ ನನ್ನನ್ನೇ ಗೆಲ್ಲಿಸಿ ಪುನಃ ಕ್ಷೇತ್ರದ ಅಭಿವೃದ್ಧಿ ಬಯಸಿದ್ದಾರೆ. ಕ್ಷೇತ್ರದ ಜನತೆಗೆ ಋಣಿಯಾಗಿದ್ದೇನೆ.
ಶಿವರಾಮ ಹೆಬ್ಟಾರ್ ಅರಬೈಲ್ ಯಲ್ಲಾಪುರ ಶಾಸಕ
ಗೆಲುವಿಗೆ ಕಾರಣವೇನು?
ಹಿಂದಿನ ಬಾರಿ 13 ಅಭ್ಯರ್ಥಿಗಳು ಕಣದಲ್ಲಿದ್ದು ಶಿವರಾಮ ಹೆಬ್ಟಾರ್ ಕಳೆದ ಬಾರಿ 58025 ಮತ ಪಡೆದು 24,452 ಭಾರೀ ಮತಗಳ ಅಂತರದಲ್ಲಿ ಗೆಲು ಸಾಧಿಸಿದ್ದರು. ವಿ.ಎಸ್. ಪಾಟೀಲ್ (ಬಿಜೆಪಿ) 33533. ಮತ ಪಡೆದಿದ್ದರು. ಈ ಸಲ ಜೆಡಿಎಸ್ ಅಭ್ಯರ್ಥಿ ಎ. ರವೀಂದ್ರ 6263 ಮತ ಪಡೆದರೂ ವಿ.ಎಸ್. ಪಾಟೀಲ್ ತನ್ನ ಮತದ ಪ್ರಮಾಣವನ್ನು ಬಲವಾಗಿ ಹೆಚ್ಚಿಸಿಕೊಳ್ಳುವ ಮೂಲಕ ಮುನ್ನೆಡೆದರೂ ಸೋಲು ಕಂಡಿದ್ದಾರೆ. ಈ ಸಲ ಕ್ಷೇತ್ರದಲ್ಲಿ 1421 ಮತಗಳು ನೋಟಾಗಳೇ ಬಿದ್ದಿವೆ.
ಸೋಲಿಗೆ ಕಾರಣವೇನು?
ಪ್ರಾರಂಭದ ದಿನದಲ್ಲಿ ಹೆಬ್ಟಾರ್ ಗೆಲುವು ನಿಶ್ಚಿತವೆಂದುಕೊಳ್ಳಲಾಗಿತ್ತು. ಆದರೆ ಪಾಟೀಲ್‌ಗೆ ಟಿಕೇಟ್ ಸಿಗುತ್ತಿದ್ದಂತೆ ಕ್ಷೇತ್ರದಲ್ಲಿ ಚುನವಣೆಯೂ ಸಮೀಪಿಸುತ್ತಿದ್ದಂತೆ ಪಾಟೀಲರೇ ಗೆಲ್ಲುವ ಲಕ್ಷಣ ಕಂಡುಬಂತು.ಇದಕ್ಕೆ ಕಾಂಗ್ರೆಸ್ ಗಟ್ಟಿಯಾಗಿ ಪ್ರತಿತಂತ್ರವನ್ನು ಹೂಡಿತು. ಕಾಂಗ್ರೆಸ್ ಕೆಲ ಬಿಜೆಪಿ ನಾಯಕರ ಕೈ ಕಟ್ಟಿಸಿತು. ಅಷ್ಟೇ ಅಲ್ಲ ಟಿಕೇಟ್ ಹಂಚಿಕೆಯ ಗೊಂದಲವೂ ಕಾರಣವಾಗಿದ್ದು ಹಿಂದೆಂದೂ ಇಲ್ಲದ ಗೊಂದಲ ಬಿಜೆಪಿಯಲ್ಲಿ ಸೃಷ್ಟಿಯಾಯಿತು. ಬಿಜೆಪಿಗೆ ಬಿಜೆಪಿಯವರೇ ಕೆಲವರು ಮುಳುವಾಗಿದ್ದಂತೂ ಎಲ್ಲರ ಬಾಯಿಯಲ್ಲಿ ಬರುವ ಸತ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.