ಕೊಳೆತ ತರಕಾರಿ, ಧಾನ್ಯದ ಮೂಲಕವೂ ಎಥನಾಲ್
Team Udayavani, May 17, 2018, 6:20 AM IST
ಹೊಸದಿಲ್ಲಿ: ಕಬ್ಬಿನ ತ್ಯಾಜ್ಯದ ಜತೆಗೆ ಕೊಳೆತ ತರಕಾರಿ ಹಾಗೂ ಧಾನ್ಯದಿಂದಲೂ ಎಥನಾಲ್ ಉತ್ಪಾದನೆಗೆ ಅವಕಾಶ ಮಾಡಿ ಕೊಡುವ ಹೊಸ ರಾಷ್ಟ್ರೀಯ ಜೈವಿಕ ಇಂಧನ ನೀತಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ ಈ ವರ್ಷದಲ್ಲೇ 4 ಸಾವಿರ ಕೋಟಿ ರೂ. ಮೌಲ್ಯದ ಇಂಧನ ಆಮದು ಕಡಿಮೆ ಮಾಡಲು ಸರಕಾರ ಉದ್ದೇಶಿಸಿದೆ. ಸದ್ಯ ಕಬ್ಬಿನ ತ್ಯಾಜ್ಯದಿಂದ ಉತ್ಪಾದಿಸಿದ ಎಥನಾಲನ್ನು ಮಾತ್ರವೇ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡಲಾಗುತ್ತಿತ್ತು.
ಎಥನಾಲ್ ಉತ್ಪಾದನೆಯನ್ನು ವರ್ಗೀಕರಿಸಲಾಗಿದ್ದು, ಕಬ್ಬಿನ ತ್ಯಾಜ್ಯದಿಂದ ಉತ್ಪಾದಿಸುವ ಎಥನಾಲ್, ಖಾದ್ಯೆàತರ ಎಣ್ಣೆಬೀಜಗಳಿಂದ ಉತ್ಪಾದಿಸಲಾಗುವ ಬಯೋಡೀಸೆಲನ್ನು 1ಜಿ ಎಂದು ಗುರುತಿಸಲಾಗಿದೆ. ನಗರದ ಘನ ತ್ಯಾಜ್ಯದಿಂದ ಉತ್ಪಾದಿಸಲಾಗುವ ಎಥನಾಲನ್ನು 2ಜಿ, ಜೈವಿಕ ನೈಸರ್ಗಿಕ ಅನಿಲದಂಥ ಇಂಧನವನ್ನು 3ಜಿ ಎಂದು ಗುರುತಿಸಲಾಗಿದೆ.
ಸಕ್ಕರೆ ಹೊಂದಿರುವ ಪದಾರ್ಥಗಳಾದ ಕಬ್ಬು, ಸಿಹಿ ಜೋಳ ಹಾಗೂ ಜೋಳ, ಗೆಣಸು, ಹಾಳಾದ ಧಾನ್ಯಗಳು ಹಾಗೂ ತರಕಾರಿಗಳನ್ನು ಬಳಸಿ ಎಥನಾಲ್ ತಯಾರಿಸ ಬಹುದು. 2ಜಿ ಎಥನಾಲ್ ತಯಾರಿಕೆ ಮೂಲ ಸೌಕರ್ಯಕ್ಕಾಗಿ ಮುಂದಿನ 6 ವರ್ಷಗಳಲ್ಲಿ 5 ಸಾವಿರ ಕೋಟಿ ರೂ. ಒದಗಿಸಲು ಸರಕಾರ ನಿರ್ಧರಿಸಿದೆ.
ಒಂದು ಲೀಟರ್ ಎಥನಾಲ್ ಅನ್ನು ಪೆಟ್ರೋಲ್‌ಗೆ ಮಿಶ್ರಣ ಮಾಡಿದರೆ 28 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾ ಗುತ್ತದೆ. ಅಲ್ಲದೆ ತ್ಯಾಜ್ಯವನ್ನು ಎಥನಾಲ್ ತಯಾರಿಕೆಗೆ ಬಳಸುವುದರಿಂದ, ಇವುಗಳನ್ನು ಸುಡುವ ಕ್ರಮವೂ ತಪ್ಪುತ್ತದೆ. ಹೀಗಾಗಿ ಪರಿಸರ ಮಾಲಿನ್ಯ ಸಮಸ್ಯೆ ಕಡಿಮೆಯಾಗುತ್ತದೆ. ಜೊತೆಗೆ ರೈತರ ಆದಾಯ ಹೆಚ್ಚುತ್ತದೆ. ಟೊಮ್ಯಾಟೋದಂತಹ ಬೆಳೆಗಳಿಗೆ ಬೆಲೆ ಇಲ್ಲದಿದ್ದಾಗ ಇವುಗಳನ್ನು ಎಥನಾಲ್ ತಯಾರಿಕೆಗೆ ಬಳಸಿಕೊಳ್ಳಬಹುದಾಗಿದೆ.
ಹೋಮಿಯೋಪತಿ ಮಂಡಳಿಗೆ ಪುನಶ್ಚೇತನ: ಹೋಮಿಯೋಪತಿ ಮಂಡಳಿಯಲ್ಲಿ ಭ್ರಷ್ಟಾ ಚಾರದ ಆರೋಪ ಕೇಳಿಬಂದಿರುವ ಹಿನ್ನೆಲೆ ಯಲ್ಲಿ ಸಂಪೂರ್ಣ ಮಂಡಳಿಗೆ ಪುನಶ್ಚೇತನ ನೀಡಲು ಕೇಂದ್ರ ಸರಕಾರ ಅಧ್ಯಾದೇಶವನ್ನು ಹೊರಡಿಸಲು ಸಂಪುಟ ನಿರ್ಧರಿಸಿದೆ.
ಹಲವು ಒಪ್ಪಂದಗಳಿಗೆ ಸಮ್ಮತಿ: ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ರೈಲ್ವೇ, ವೈದ್ಯಕೀಯ ಹಾಗೂ ಕಾನೂನು ಸೇರಿದಂತೆ ಹಲವು ವಲಯ ಗಳಲ್ಲಿ ವಿವಿಧ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದಗಳಿಗೆ ಸಂಪುಟ ಅನುಮೋದನೆ ನೀಡಿದೆ. ಈ ಪೈಕಿ ಕೆಲವು ಒಪ್ಪಂದಗಳಿಗೆ ಈಗಾಗಲೇ ಸಹಿ ಹಾಕಲಾಗಿದ್ದು, ಇನ್ನೂ ಕೆಲವು ಒಪ್ಪಂದ ಗಳಿಗೆ ಇನ್ನಷ್ಟೇ ಸರಕಾರ ಸಹಿ ಹಾಕಬೇಕಿದೆ.
ಸೇನೆ ಸಂವಹನಕ್ಕೆ 11 ಸಾವಿರ ಕೋ. ರೂ.
ರಕ್ಷಣಾ ವಲಯದಲ್ಲಿ ಸಂವಹನಕ್ಕಾಗಿ ಕೇಂದ್ರ ಸರಕಾರ ಹೆಚ್ಚುವರಿ 11,330 ಕೋಟಿ ರೂ. ನೀಡಿದ್ದು, ಇದರಿಂದಾಗಿ ಸೇನೆಗೆ ಈ ಉದ್ದೇಶಕ್ಕೆ ಒಟ್ಟು 24,664 ಕೋಟಿ ರೂ. ನೀಡಿದಂತಾಗಿದೆ. ಪರ್ಯಾಯ ಸಂವಹನ ಜಾಲವನ್ನು ಬಿಎಸ್‌ಎನ್‌ಎಲ್ ಸ್ಥಾಪಿಸಲಿದ್ದು, 24 ತಿಂಗಳುಗಳೊಳಗೆ ಮುಕ್ತಾಯವಾ ಗಲಿದೆ. ಇದು ಸೇನೆಗಳ ಸಂವ ಹನ ಸಾಮರ್ಥ್ಯ ಹೆಚ್ಚಿಸಲಿದೆ. ಜೊತೆಗೇ ಇತರ ಸಂಬಂಧಿತ ಕ್ಷೇತ್ರಗಳಾದ ಟೆಲಿಕಾಂ ಸೇವೆಗಳು ಮತ್ತು ಟೆಲಿಕಾಂ ಸಲಕರಣೆ ಉತ್ಪಾದನೆ ಕ್ಷೇತ್ರಕ್ಕೂ ಉತ್ತೇಜನ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.