ಇಲ್ಲಿ  ಫ‌ಲಿತಾಂಶಕ್ಕಿಂತ ಕುತೂಹಲವೇ ರೋಚಕ


Team Udayavani, May 17, 2018, 12:25 PM IST

kutuhala.jpg

ಉಡುಪಿ: ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೋದಿಯವರ ಹೈ ವೋಲ್ಟೆàಜ್‌ ಭಾಷಣ ಯಾವ ರೀತಿಯ ನಿರೀಕ್ಷೆಯನ್ನು ಮೂಡಿಸಿತ್ತೋ ಅದೇ ತೆರನಾದ ಫ‌ಲಿತಾಂಶ ಕುತೂಹಲ ಕಾದು ಕೊಂಡಿದ್ದು ಉಡುಪಿ ವಿಧಾನಸಭಾ ಕ್ಷೇತ್ರ.

ಕೊನೆ ಕ್ಷಣದವರೆಗೂ ಉಭಯ ಆಭ್ಯರ್ಥಿಗಳಲ್ಲೂ (ಕಾಂಗ್ರೆಸ್‌- ಪ್ರಮೋದ್‌ ಮಧ್ವರಾಜ್‌, ಬಿಜೆಪಿ- ರಘುಪತಿ ಭಟ್‌) ಆತಂಕ ಮಡು ಗಟ್ಟಿತ್ತು. ಇಬ್ಬರೂ ಕಾಲೇಜಿನಲ್ಲಿ ಸಹಪಾಠಿ ಗಳೇ. ಆದರೆ ಇಲ್ಲಿ ಪ್ರತಿಸ್ಫರ್ಧಿ ಗಳು. ಈ ಆತಂಕ ಮತ ಎಣಿಕೆಯ ಅಂತ್ಯದವರೆಗೂ ಮುಂದುವರಿಯಿತು. ಎಲ್ಲೂ ಇದೇ ಫ‌ಲಿತಾಂಶ ಎಂದು ಬೆನ್ನು ಹಾಕಿ ಹೋಗಲು ಅವಕಾಶ ಕೊಡಲೇ ಇಲ್ಲ. ವಿಚಿತ್ರವೆಂದರೆ ಕಾಂಗ್ರೆಸ್‌ಗೆ ಜಿಲ್ಲೆ ಯಲ್ಲಿ ಹೆಚ್ಚು ನಂಬಿಕೆ ಇದ್ದಿದ್ದ ಕ್ಷೇತ್ರವಿದಾಗಿತ್ತು. 

ಮೋದಿ ಅಲೆ, ಬಿಜೆಪಿಯ ಸಂಘ ಟನಾ ಶಕ್ತಿಯ ಎದುರೂ ಪ್ರಮೋದ್‌ ಮಧ್ವರಾಜ್‌ ಅವರನ್ನು ಸೋಲಿ ಸುವುದು ಸುಲಭವಲ್ಲ ಎಂಬ ಮಾತಿತ್ತು. ಜಿಲ್ಲೆಯ ಹಲವ ರಿಗೆ ಕಾಂಗ್ರೆಸ್‌ ಬೇಡ  ವಾಗಿರ  ಬಹುದು, ಪ್ರಮೋದ್‌ ಇರಲಿ ಎಂಬ ಅಭಿ ಪ್ರಾಯವೇ ಅವ ರನ್ನು ದೈತ್ಯ ಅಭ್ಯರ್ಥಿಯನ್ನಾಗಿ ರೂಪಿ ಸಿದ್ದವು. ಆದರೆ ಭಟ್‌ ಅವರು ಬಿಜೆಪಿ ಅಭ್ಯರ್ಥಿ ಆದ ಬಳಿಕ ಕಣ ರಂಗೇರಿತ್ತು. ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗಿತ್ತು. 

ಕ್ಷಣ ಕ್ಷಣದ ತಲ್ಲಣ 
ಮೊದಲ ಸುತ್ತಿನಲ್ಲಿ ಪ್ರಮೋದ್‌ ಮಧ್ವ ರಾಜ್‌ 4,898 ಹಾಗೂ ರಘುಪತಿ ಭಟ್‌ 5,172 ಮತಗಳನ್ನು ಗಳಿಸಿದರು. ಆಗ ದೊಡ್ಡದೆನಿಸಲಿಲ್ಲ. ಇನ್ನೂ ಮೊದ ಲನೇ ರೌಂಡ್‌ ಎಂದುಕೊಳ್ಳಲಾಯಿತು. 2ನೇ ಸುತ್ತಿನಲ್ಲೂ ಭಟ್ಟರಿಗೆ 190 ಮತಗಳ ಲೀಡ್‌ ಸಿಕ್ಕಿತು (4,982-5,172). ಆಗಲೂ ಸಿಕ್ಕಿದ್ದು 190 ಮತಗಳ ಲೀಡ್‌. ಮೂರನೇ ಸುತ್ತು ಮುಗಿದಾಗಲೂ ಭಟ್‌ ಅವರ ಮುನ್ನಡೆ‌ 940 ಮತ ಗಳಷ್ಟೇ. 4ನೇ ಸುತ್ತಿನಲ್ಲಿ ಪ್ರಮೋದ್‌ 4,234 ಹಾಗೂ ಭಟ್‌ 5,358 ಮತಗಳನ್ನು ಪಡೆದಾಗ ಲೀಡ್‌ ಅಂತರ 2,064ಕ್ಕೇರಿತು. ಆದರೆ 5ನೇ ಸುತ್ತಿನಲ್ಲಿ ಇದು 1,902ಕ್ಕೆ ಇಳಿಯಿತು. 6ನೇ ಸುತ್ತಿನಲ್ಲಿ ಪ್ರಮೋದ್‌ರಿಗೆ  5,171 ಮತ್ತು ಭಟ್‌ 3,509 ಮತ ಸಿಕ್ಕಿತು. ಇದು ಭಟ್‌ ಅವರನ್ನು ದಿಗಿಲುಗೊಳಿಸಿತು. ಯಾಕೆಂದರೆ, ಇದ್ದಕ್ಕಿದ್ದಂತೆ ಲೀಡ್‌ ಅಂತರ 240ಕ್ಕೆ ಕುಸಿಯಿತು. ಏಳನೇ ಸುತ್ತು ಇನ್ನೂ ಅಪಾಯ. 141ಕ್ಕೆ ಇಳಿಕೆ. ಅದುವರೆಗೆ ಬಿಜೆಪಿ ಪರ ಘೋಷಣೆ ಕೂಗುತ್ತಿದ್ದವರೆಲ್ಲಾ ಮೌನಕ್ಕೆ ಶರಣು ಹೋದರು. ಇನ್ನೇನು ಅತ್ಯಂತ ನಿಕಟ ಸ್ಪರ್ಧೆಯಾಗಿ ಮರು ಎಣಿಕೆಯೂ ನಡೆಯಬಹುದೆಂಬ ಲೆಕ್ಕಾಚಾರವೂ ಆರಂಭವಾಯಿತು.

ಗೆಲುವಿನತ್ತ ಓಟ
ಆದರೆ ಎಂಟನೇ ಸುತ್ತು ಭಟ್‌ ಅವರ ಆತಂಕ ವನ್ನು ಕೊಂಚ ನಿವಾ ರಿಸಿತು. ಪ್ರಮೋದ್‌ 4,478 ಮತ ಗಳನ್ನು ಪಡೆದರೆ ಭಟ್‌ 5,584 ಮತ ಗಳನ್ನು ಪಡೆದು 1, 247 ಕ್ಕೆ ಅಂತರ ಏರಿತು. 9ನೇ ಸುತ್ತಿನಲ್ಲಿ 2,694ಕ್ಕೆ, 10ನೇ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿಗೆ ಕೊಂಚ ಸಮಾ ಧಾನ. ಆ ಸುತ್ತಿನಲ್ಲಿ ಪ್ರಮೋದ್‌ ಕೇವಲ 3,549 ಮತಗಳನ್ನು ಪಡೆದರೆ, ಭಟ್‌ರಿಗೆ 6,144. ಮುನ್ನಡೆಯ ಅಂತರ 5,289. ಇದು ಭಟ್‌ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಗಳಿಗೆ. ಈ ಸುತ್ತುಗಳು ನಗರ ಭಾಗದ ಮತಗಟ್ಟೆಗಳದ್ದು. ಆಗಲೇ ಬಿಜೆಪಿಯ ಸಂಭ್ರಮಾಚರಣೆ ಶುರು ವಾಯಿತು. ನಿರೀಕ್ಷೆಯಂತೆಯೇ ಅನಂತರದ ಯಾವ ಸುತ್ತುಗಳೂ ಭಟ್‌ ಅವರನ್ನು ಕೈ ಬಿಡಲಿಲ್ಲ. 17ನೇ ಸುತ್ತು, ಅಂಚೆ ಮತಗಳು ಸೇರಿದಂತೆ ಒಟ್ಟು 12,044 ಮತಗಳ ಅಂತರದಿಂದ ರಘುಪತಿ ಭಟ್‌ ಜಯಶಾಲಿಯಾದರು.
2008ರಲ್ಲಿ ರಘುಪತಿ ಭಟ್‌ ಅವರು ಪ್ರಮೋದ್‌ ಮಧ್ವರಾಜ್‌ ವಿರುದ್ಧ 2,479 ಮತಗಳ ಅಂತರದಿಂದ ಜಯ ಸಾಧಿಸಿದ್ದರು. 2013ರಲ್ಲಿ ಸ್ಪರ್ಧಿಸಿರ ಲಿಲ್ಲ. ಆಗ ಬಿಜೆಪಿ ಅಭ್ಯರ್ಥಿ ಸುಧಾಕರ ಶೆಟ್ಟಿ ಅವರನ್ನು ಪ್ರಮೋದ್‌ 39,524 ಮತಗಳ ಅಂತರದಿಂದ ಸೋಲಿಸಿ ಸಚಿವ ಸ್ಥಾನವನ್ನೂ ಪಡೆದಿದ್ದರು.

ಬಿಜೆಪಿಗೆ ಪಕ್ಕಾ ಸುಳಿವು ಸಿಕ್ಕಿತ್ತೇ?
ಜಿಲ್ಲೆಯ ಎಲ್ಲಾ 5 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ಮಾತನ್ನು ಬಿಜೆಪಿ ಮುಖಂಡರು ಮತ ಎಣಿಕೆಯ ಮುನ್ನಾದಿನ ಹೇಳಿದ್ದರು. ಮಾಧ್ಯಮದ ಜತೆಗೆ ಭಟ್‌ ಮಾತನಾಡುತ್ತಾ “ಉಳ್ಳಾಲ ಒಂದು ಕ್ಷೇತ್ರ ಹೊರತುಪಡಿಸಿ ಕರಾವಳಿಯ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ’ ಎಂದಿದ್ದರು. ಆ ಹೇಳಿಕೆ ನೂರಕ್ಕೆ ನೂರರಷ್ಟು  ನಿಜವಾಗಿದೆ.

- ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.