ಕಾವೇರಿ ತಟದಲ್ಲಿ 6 ಪುರಾತನ ಶಿವಲಿಂಗ ಪತ್ತೆ
Team Udayavani, May 17, 2018, 1:46 PM IST
ಶ್ರೀರಂಗಪಟ್ಟಣ: ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ಬಳಿ ಕಾವೇರಿ ನದಿ ತೀರದಲ್ಲಿ ಪುರಾತನ ಕಾಲದ ಶಿವ ಲಿಂಗಗಳು ಪತ್ತೆಯಾಗಿವೆ. ಪುರಾತನ ಗುಂಜಾ ನರಸಿಂಹಸ್ವಾಮಿ ದೇವಾಲಯದ ಹಿಂಭಾಗಕ್ಕೆ ಇರುವ ಸರ್ವೆ
ನಂಬರ್ 185ರಲ್ಲಿ ಪಾಳು ಬಿದ್ದ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯ ಜಾಗವನ್ನು ಸ್ವತ್ಛ ಮಾಡಲಾಗುತ್ತಿತ್ತು.
ಪುನರ್ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ದೇವಾಲಯದ ಸುತ್ತಲೂ ಬೆಳೆದಿದ್ದ ಗಿಡ ಗಂಟಿಗಳನ್ನು ತೆಗೆದು ಸ್ವತ್ಛ ಮಾಡಿ ಕಾವೇರಿ ನದಿ ತೀರದಲ್ಲಿ ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ಸಮತಟ್ಟು ಮಾಡಲಾಗುತ್ತಿತ್ತು.
ಈ ವೇಳೆ ಪುರಾತನ ಕಾಲದ 6 ಬೃಹತ್ ಶಿವಲಿಂಗಗಳು ದೊರೆತಿವೆ. ಇವುಗಳನ್ನು ನೂರಾರು ವರ್ಷಗಳ
ಹಿಂದೆಯೇ ಕೆತ್ತನೆ ಮಾಡಿ ಅದನ್ನು ಪ್ರತಿಷ್ಟಾಪಿಸಲು ಮರಳಿನಲ್ಲಿ ಹೂತಿಟ್ಟಿರಬಹುದು ಎಂದು ಹಿರಿಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೊದಲು ಗಿಡಗಂಟಿಗಳನ್ನು ತೆಗೆದು ಮಣ್ಣನ್ನು ಸಮತಟ್ಟು ಮಾಡಿಕೊಳ್ಳಲು ಜೆಸಿಬಿ ಯಂತ್ರದಿಂದ ನದಿ ತೀರದಲ್ಲಿ ಬಗೆದಾಗ ಒಂದು ಶಿವಲಿಂಗದ ಮಧ್ಯ ಭಾಗದ ಪೀಠ ಕಂಡು ಬಂದಿತು.
ಅದರ ಜೊತೆಯಲ್ಲಿ ಲಿಂಗದ ಮೇಲೆ ಕೂರುವ ಉದ್ದನೆ ಗುಂಡು ಆಕಾರದಂತಿರುವ ಲಿಂಗದ ಕಂಬಮೇಲೆ ಬಂದಿದೆ. ಹೀಗೆ ಒಂದರ ಹಿಂದೆ ಒಂದೊಂದಾಗಿ ಸಾಲಾಗಿ 6 ಲಿಂಗಗಳು ಸಿಕ್ಕಿವೆ.
ನಂತರ ಗ್ರಾಮಸ್ಥರು ಲಿಂಗಗಳನ್ನು ಹೊರ ತೆಗೆದು ದೇವಾಲಯದ ಪಕ್ಕದಲ್ಲಿಟ್ಟಿದ್ದಾರೆ. ದೇವಾಲಯದ ಬಳಿ ನದಿ ತೀರದಲ್ಲಿ ಲಿಂಗಗಳು ಸಿಕ್ಕ ಸುದ್ದಿ ಹಬ್ಬುತ್ತಿದ್ದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಜಮಾಯಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
CT Ravi ಬಂಧನ ಪ್ರಕರಣ; ಗ್ರಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.