ಶ್ರೀಕೃಷ್ಣ  ಮಠಕ್ಕೆ  ಬಂತು ಕಟ್ಟಿಗೆ ಒಡೆಯುವ ಯಂತ್ರ ​​​​​​​


Team Udayavani, May 18, 2018, 6:25 AM IST

1705udsb3.jpg

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಅನ್ನಪ್ರಸಾದ ಸಿದ್ಧಗೊಳಿಸಲು ಬೇಕಾದ ಕಟ್ಟಿಗೆಗಳನ್ನು ಒಡೆಯುವುದಕ್ಕೆ ಈಗ ಹೆಚ್ಚು ಶ್ರಮಪಡಬೇಕಾಗಿಲ್ಲ. ನಾಲ್ಕು ಮಂದಿ ಕಟ್ಟಿಗೆ ಒಡೆಯುವವರ ಕೆಲಸವನ್ನು ಒಂದೇ ಯಂತ್ರ ಮಾಡುತ್ತಿದೆ. 

2 ಗಂಟೆಗೆ 250 ಕೆ.ಜಿ
ಒಬ್ಬರು ಯಂತ್ರಕ್ಕೆ ಮರದ ತುಂಡುಗಳನ್ನು ಇಡುವುದಕ್ಕೆ, ಇನ್ನೋರ್ವರು ಯಂತ್ರವನ್ನು ಆಪರೇಟ್‌ ಮಾಡುವುದಕ್ಕೆ ಬೇಕು. 2 ಗಂಟೆ ಅವಧಿಯಲ್ಲಿ 250 ಕೆ.ಜಿ ಕಟ್ಟಿಗೆ ಒಡೆಯುವ ಸಾಮರ್ಥ್ಯ ಈ ಯಂತ್ರಕ್ಕಿದೆ. ಇದರ ನಿರ್ವಹಣೆ ಕೂಡ ಸುಲಭ. ವಿದ್ಯುತ್‌ ಚಾಲಿತ ಯಂತ್ರವಾಗಿದ್ದು, ಹೆಚ್ಚು ನಿರ್ವಹಣೆ ಕಷ್ಟವೂ ಇಲ್ಲ. ಇದರ ಬೆಲೆ 1.62 ಲಕ್ಷ ರೂ. ಆಗಿದ್ದು ಮಠಕ್ಕೆ ದಾನಿಯೋರ್ವರು ನೀಡಿದ್ದಾರೆ. 
 
ಮಠದಲ್ಲಿ ಸಾಮಾನ್ಯ ದಿನಗಳಲ್ಲಿ ದಿನವೊಂದಕ್ಕೆ ಕನಿಷ್ಠವೆಂದರೆ 7,000ದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ರಜಾ ದಿನಗಳಲ್ಲಿ ಇವರ ಸಂಖ್ಯೆ ಎರಡು-ಮೂರು ಪಟ್ಟಾಗುತ್ತದೆ. ಇಲ್ಲಿ ಗೋಬರ್‌ ಗ್ಯಾಸ್‌ ವ್ಯವಸ್ಥೆಯೂ ಇದ್ದು ಇದರಿಂದ 5 ಸಾವಿರ ಮಂದಿಗೆ ಬೇಕಾದಷ್ಟು ಅಡುಗೆ ಮಾಡಲು ಸಾಧ್ಯವಿದೆ. ಉಳಿದಂತೆ ಕಟ್ಟಿಗೆಯನ್ನೇ ಬಳಸ ಬೇಕಾಗುತ್ತದೆ.
  
ಈ ಯಂತ್ರವನ್ನು ಉತ್ಪಾದಿಸಿರುವುದು ಮಂಗಳೂರು ಬೈಂಕಂಪಾಡಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಶ್ರೀ ಕಾಳಿಕಾಂಬಾ ಇಂಡಸ್ಟ್ರೀಸ್‌ನವರು. ಬಳಿಕ ಕಂಪನಿ ತಂತ್ರ ಜ್ಞಾನದಲ್ಲಿ ಸುಧಾರಣೆ ಮಾಡಿ ಹೊಸ ಮಾದರಿ ಯಂತ್ರಗಳನ್ನು ಹೊರತಂದಿದೆ. ಕಟ್ಟಿಗೆ ಒಡೆಯುವವರೇ ವಿರಳವಾಗುತ್ತಿರುವ ಈ ದಿನಗಳಲ್ಲಿ ಇಂಥ ಯಂತ್ರ ಉಪಯುಕ್ತ. 

ಶ್ರಮ ಉಳಿತಾಯ
ಶ್ರೀಕೃಷ್ಣಮಠದ ಅನ್ನಪ್ರಸಾದಕ್ಕೆ ದಿನಕ್ಕೆ ಸುಮಾರು 3 ಟನ್‌ಗಿಂತಲೂ ಹೆಚ್ಚು ಕಟ್ಟಿಗೆ ಬೇಕು. ಮಠಕ್ಕೆ ಬರುವ ಕಟ್ಟಿಗೆಯನ್ನು ಒಡೆಯುವುದು ಕೂಡ ಕಷ್ಟದ ಕೆಲಸವೇ ಆಗಿತ್ತು. ಈಗ ದಾನಿಯೋರ್ವರು ಯಂತ್ರ ನೀಡಿದ್ದಾರೆ. ಇದರಲ್ಲಿ ನಮಗೆ ಬೇಕಾದಷ್ಟು ಕಟ್ಟಿಗೆ ಸಿದ್ಧಮಾಡಿಕೊಳ್ಳುತ್ತೇವೆ. ಕಟ್ಟಿಗೆ ಯಂತ್ರದಿಂದ ಕಾರ್ಮಿಕರ ಶ್ರಮ ಉಳಿತಾಯವಾಗಿದೆ.  

– ಅಧಿಕಾರಿಗಳು,ಶ್ರೀಕೃಷ್ಣ ಮಠ

ಮಠದ ಕೆಲಸಗಾರರಿಗೆ ತರಬೇತಿ
ಕಟ್ಟಿಗೆ ಯಂತ್ರ ನಿರ್ವಹಣೆಗೆ ಮಠದಲ್ಲಿ ಇತರ ಕೆಲಸ ಮಾಡುವವರನ್ನೇ ತರಬೇತಿ ನೀಡಿ ನಿಯೋಜಿಸಲಾಗಿದೆ. ಇಬ್ಬರಿದ್ದರೆ ಈ ಯಂತ್ರ ನಿರ್ವಹಣೆ ಸಲೀಸು ಎನ್ನುತ್ತಾರೆ ಮಠದಲ್ಲಿ ಕಟ್ಟಿಗೆ ಒಡೆಯುವ ಯಂತ್ರ ನಿರ್ವಹಿಸುತ್ತಿರುವ ಸುಂದರ ಮತ್ತು ಕೃಷ್ಣ ಅವರು.

– ವಿಶೇಷ ವರದಿ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.