ಏಶ್ಯನ್ ಮಹಿಳಾ ಹಾಕಿ: ಫೈನಲ್ ಪ್ರವೇಶಿಸಿದ ಭಾರತ
Team Udayavani, May 18, 2018, 6:00 AM IST
ಡಾಂಗೆ ಸಿಟಿ (ದಕ್ಷಿಣ ಕೊರಿಯಾ): ಹಾಲಿ ಚಾಂಪಿಯನ್ ಭಾರತ ತಂಡ ಇನ್ನೊಂದು ಲೀಗ್ ಪಂದ್ಯ ಬಾಕಿ ಇರುವಂತೆಯೇ ಮಹಿಳಾ ಏಶ್ಯನ್ ಹಾಕಿ ಕೂಟದ ಫೈನಲ್ ಪ್ರವೇಶಿಸಿದೆ. ಗುರುವಾರದ ರೋಚಕ ಸೆಮಿಫೈನಲ್ ಕಾಳಗದಲ್ಲಿ ಭಾರತ 3-2 ಗೋಲುಗಳ ಅಂತರದಿಂದ ಮಲೇಶ್ಯವನ್ನು ಮಣಿಸಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು.
ಭಾರತದ ಪರ ಗುರ್ಜಿತ್ ಕೌರ್ 17ನೇ ನಿಮಿಷದಲ್ಲಿ ಹಾಗೂ ವಂದನಾ ಕಠಾರಿಯಾ 33ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಭಾರತ 2-0 ಅಂತರದಿಂದ ದಾಪುಗಾಲಿಕ್ಕಿತು. ದ್ವಿತೀಯ ಗೋಲು ಸಿಡಿದ ಕೇವಲ 3 ನಿಮಿಷದ ಬಳಿಕ ಮಲೇಶ್ಯ ತಿರುಗಿ ಬಿತ್ತು. ನೌರೈನಿ ರಶೀದ್ ಮಲೇಶ್ಯ ಪರ ಗೋಲು ಸಿಡಿಸಿದರು. ಹಿನ್ನಡೆ ಅಂತರವನ್ನು 1-2ಕ್ಕೆ ತಗ್ಗಿಸಿದರು.
40ನೇ ನಿಮಿಷದಲ್ಲಿ ಲಾಲ್ರೆನ್ಸಿಯಾಮಿ ಭಾರತದ 3ನೇ ಗೋಲಿಗೆ ಸಾಕ್ಷಿಯಾದರು. ಆದರೆ 48ನೇ ನಿಮಿಷದಲ್ಲಿ ಮುನ್ನುಗ್ಗಿ ಬಂದ ಮಲೇಶ್ಯ ಪರ ಹಾನಿಸ್ ಓನ್ ಗೋಲು ಸಿಡಿಸಿ ಅಂತರವನ್ನು 2-3ಕ್ಕೆ ಇಳಿಸಿದರು. ಅನಂತರದ ಹಂತದಲ್ಲಿ ಭಾರತ ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಮಲೇಶ್ಯದ ಎಲ್ಲ ಪ್ರಯತ್ನವನ್ನು ವಿಫಲಗೊಳಿಸಿತು. ಅಂತಿಮವಾಗಿ ಭಾರತ ವಿಜಯದ ನಗೆ ಬೀರಿತು.
ಮುಂದಿನ ಎದುರಾಳಿ ಕೊರಿಯಾ
ಭಾರತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಜಪಾನ್ ತಂಡವನ್ನು 4-1 ಗೋಲುಗಳಿಂದ, ಎರಡನೇ ಪಂದ್ಯದಲ್ಲಿ ಚೀನವನ್ನು 3-1 ಗೋಲುಗಳಿಂದ ಸೋಲಿಸಿತ್ತು. ಮುಂದಿನ ಲೀಗ್ ಪಂದ್ಯವನ್ನು ಆತಿಥೇಯ ಕೊರಿಯಾ ವಿರುದ್ಧ ಶನಿವಾರ ಆಡಲಿದೆ. ರವಿವಾರ ಪ್ರಶಸ್ತಿ ಸಮರ ಏರ್ಪಡಲಿದೆ.
“ಇಂದಿನ ಪಂದ್ಯದಲ್ಲಿ ಲಭಿಸಿದ ಹೆಚ್ಚಿನ ಅವಕಾಶವನ್ನು ನಾವು ಉತ್ತಮ ರೀತಿಯಲ್ಲಿ ಬಳಸಿಕೊಂಡೆವು. ಭಾರೀ ಸಂತೋಷವೇನೂ ಆಗಿಲ್ಲ. ಇನ್ನೂ ಉತ್ತಮ ಮಟ್ಟದ ಪ್ರದರ್ಶನ ಹೊರಹೊಮ್ಮಬೇಕಿದೆ. ಹೊಟೇಲ್ ಕೊಠಡಿಗೆ ತೆರಳಿ ತಪ್ಪುಗಳ ಬಗ್ಗೆ ಚರ್ಚಿಸಿ ಮುಂದಿನ ಕೊರಿಯಾ ವಿರುದ್ಧದ ಸೆಣಸಾಟಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಲಿದ್ದೇವೆ’ ಎಂಬುದಾಗಿ ನಾಯಕಿ ಸುನೀತಾ ಲಾಕ್ರಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.