ಟೆಸ್ಟ್ ಕ್ರಿಕೆಟ್ನಲ್ಲಿ ಟಾಸ್ಗೇ ಕೊಕ್!
Team Udayavani, May 18, 2018, 7:35 AM IST
ಮುಂಬೈ: ಕ್ರಿಕೆಟ್ನಲ್ಲಿ ಟಾಸ್ ಹಾರಿಸಿ ಪಂದ್ಯ ಆರಂಭ ಮಾಡುವುದು ಮೊದಲಿನಿಂದ ನಡೆದುಬಂದಿದೆ. 1877ರ
ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಿಂದಲೂ ಈ ಪರಂಪರೆ ಚಾಲ್ತಿಯಲ್ಲಿದೆ. ಇಂತಹ ಅವಿಭಾಜ್ಯ ಪದ್ಧತಿ ಮುಂದುವರಿಯಬೇಕೇ? ಬೇಡವೇ? ಎಂಬ ಚರ್ಚೆ ಐಸಿಸಿಯಲ್ಲಿ ಈಗ ಪ್ರಾರಂಭವಾಗಿದೆ.
ಈ ಬಗ್ಗೆ ಮೇ 28, 29ರಂದು ಮುಂಬೈನಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಚರ್ಚೆ ನಡೆಸಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ತಂಡ, ಬೌಲ್ ಮಾಡುವ ತಂಡ ಯಾವುದು ಎನ್ನುವುದನ್ನು ನಿರ್ಧರಿಸಲು ಟಾಸ್ ಹಾರಿಸಿಯೇ ನಿರ್ಧರಿಸಲಾಗುತ್ತದೆ. ಆದರೆ ಈ ಪರಂಪರೆಯ ಔಚಿತ್ಯವಾದರೂ ಏನು ಎಂದು ಹಲವರು ಪ್ರಶ್ನಿಸಿದ್ದಾರೆ. ಪ್ರತಿಬಾರಿ ಆತಿಥೇಯ ತಂಡದ ನಾಯಕ ಟಾಸ್ ಹಾರಿಸುತ್ತಾರೆ. ಪ್ರವಾಸಿ ತಂಡದ ನಾಯಕ
ತಮ್ಮ ಆಯ್ಕೆ ಹೇಳುತ್ತಾರೆ. ಇದರ ಮೇಲೆ ಉಳಿದಿದ್ದು ನಿರ್ಧಾರವಾಗುತ್ತದೆ.
ಇದರಿಂದ ಆತಿಥೇಯ ತಂಡದ ನಾಯಕನಿಗೇ ಹೆಚ್ಚು ಲಾಭ. ಪಿಚ್ನ ಸ್ಥಿತಿಗತಿಗಳು ಚೆನ್ನಾಗಿ ಗೊತ್ತಿರುವುದರಿಂದ
ಅವರು ಗರಿಷ್ಠ ಲಾಭ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.
ಟಾಸ್ ಹಾರಿಸುವ ಬದಲು ಪ್ರವಾಸಿ ತಂಡದ ನಾಯಕನಿಗೆ ಬೌಲಿಂಗ್ ಅಥವಾ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲು
ಅವಕಾಶ ಕೊಡಬೇಕು ಎಂದು ವಾದ ಶುರುವಾಗಿದೆ. ಇದನ್ನು ಕೌಂಟಿಯಲ್ಲಿ ಜಾರಿ ಮಾಡಲಾಗಿದೆ. ಪರಿಣಾಮ
ಸ್ಪರ್ಧಾತ್ಮಕತೆ ಜಾಸ್ತಿಯಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿಕೊಂಡಿದೆ.
ಈ ಬಗ್ಗೆ ಸುದೀರ್ಘ ಚರ್ಚೆ ಮೇ 28, 29ರಂದು ನಡೆಯಲಿದೆ. ಐಸಿಸಿ ಕ್ರಿಕೆಟ್ ಸಮಿತಿ ಮುಖ್ಯಸ್ಥ ಅನಿಲ್ ಕುಂಬ್ಳೆ, ಇತರೆ ಸದಸ್ಯರಾದ ರಾಹುಲ್ ದ್ರಾವಿಡ್, ಮಹೇಲಾ ಜಯವರ್ಧನೆ, ಆ್ಯಂಡ್ರೂé ಸ್ಟ್ರಾಸ್, ಟಿಮ್ ಮೇ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.