ಗುರುವಿಲ್ಲದ ಕಲಿಕೆ ಅಸಾಧ್ಯ: ಡಾ| ಮಹೇಶ್ ಭಟ್
Team Udayavani, May 18, 2018, 8:15 AM IST
ವೃತ್ತಿಯಲ್ಲಿ ಮಕ್ಕಳ ತಜ್ಞರಾಗಿರುವ ಬಿ.ಸಿ. ರೋಡ್‌ನ ಡಾ| ಎಂ.ಎಸ್. ಮಹೇಶ್ ಭಟ್ ಪ್ರವೃತ್ತಿಯಲ್ಲಿ ಹಾಡುಗಾರ. ಆರನೇ ತರಗತಿಯಲ್ಲಿರುವಾಗಲೇ ತಂದೆ ಡಾ| ಎಂ.ಎಸ್. ಭಟ್ ಅವರಿಂದಲೇ ಪ್ರೇರಣೆ ಪಡೆದು ಸಂಗೀತ ಕ್ಷೇತ್ರದ ರಸವುಂಡು ಶಾಸ್ತ್ರೀಯ ಸಂಗೀತ ಸಹಿತ ವಿವಿಧ ಪ್ರಾಕಾರಗಳ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡವರು. ಸಂಗೀತ ಕ್ಷೇತ್ರಕ್ಕೆ ಬರಲು ಮೊದಲು ತಂದೆಯೇ ಇವರಿಗೆ ಗುರು. ಬಳಿಕ ಗುರು ಕನ್ಯಾನ ಗಣಪತಿ ಭಟ್ ಅವರಲ್ಲಿ ಸಂಗೀತಾಭ್ಯಾಸ ನಡೆಸಿದ್ದರು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮುಂತಾದೆಡೆ ತಂದೆ ಜತೆ ಸೇರಿ ಅನೇಕ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಕೆಲಸದ ಒತ್ತಡದಿಂದಾಗಿ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಸಂಗೀತ ಕಲಿಸುವುದು ಅಸಾಧ್ಯವಾದರೂ ರಜಾ ದಿನಗಳಲ್ಲಿ ಮತ್ತು ಅವಧಿ ಸಿಕ್ಕಾಗ ಸಂಗೀತ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದೇ ಎನ್ನುತ್ತಾರೆ ಅವರು.
ಸಂಗೀತ ಕ್ಷೇತ್ರದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಆಸಕ್ತಿ ಹೇಗಿದೆ?
ಸಣ್ಣ ಪ್ರಾಯದ ಮಕ್ಕಳಿಗೆ ಸಂಗೀತದ ಬಗ್ಗೆ ಅಷ್ಟೊಂದು ಗೊತ್ತಿರುವುದಿಲ್ಲ. ಆದರೆ ಕಲಿಯುತ್ತಾ ಹೋದಂತೆ ಒತ್ತಾಯವೇ ಆಸಕ್ತಿಯಾಗಿ ಬದಲಾಗುತ್ತದೆ. ಆಸಕ್ತಿ ಇದ್ದವರು ಇಷ್ಟಪಟ್ಟು ಸಂಗೀತ ಕಲಿಯುತ್ತಾರೆ. ಮತ್ತೆ ಕೆಲವರು ಹೆತ್ತವರ ಒತ್ತಾಯದ ಮೇರೆಗೆ ಸಂಗೀತಾಭ್ಯಾಸ ಆರಂಭಿಸುತ್ತಾರೆ. ಸಂಗೀತವನ್ನು ಇಷ್ಟಪಡುವವರು ಬಹಳಷ್ಟು ಮಂದಿ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಗೀತ ಕಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಆಧುನಿಕ ಮ್ಯೂಸಿಕ್ ಹಾವಳಿ ಸಂಗೀತ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆಯೇ?
ಶಾಸ್ತ್ರೀಯ ಸಂಗೀತದ ಮೇಲೆ ಖಂಡಿತವಾಗಿಯೂ ಆಧುನಿಕ ಸಂಗೀತಗಳು ಪರಿಣಾಮ ಬೀರಿವೆ. ಪಾಶ್ಚಾತ್ಯ ಸಂಗೀತಗಳು ಬಂದು ನಮ್ಮ ಸಂಗೀತದ ಸಾಂಪ್ರದಾಯಿಕತೆಯೇ ಮರೆಯಾಗುತ್ತಿದೆ. ಜನಗಳಿಗೆ ಹೊಸ ಸಂಗೀತ ಕೇಳುವ ಉತ್ಸಾಹ; ಅವರ ಆಸಕ್ತಿಗೆ ಪೂರಕವಾಗಿ ಹಾಡುಗಾರರು ಆಧುನಿಕತೆಯನ್ನು ತರುವುದರಿಂದ ಮೂಲ ಸೊಗಡು ಹೊರಟು ಹೋಗುತ್ತದೆ.
ಶಾಸ್ತ್ರೀಯ ಕಲೆಯಲ್ಲಿ ಇತ್ತೀಚಿನ ಬದಲಾವಣೆಗಳೇನು?
ಆಧುನಿಕ ಸಂಗೀತ ಭರಾಟೆಗಳಿಂದಾಗಿ ಮಕ್ಕಳಿಗೆ ಅದರತ್ತ ಒಲವು ಹೆಚ್ಚುತ್ತಿದೆ. ಶಾಸ್ತ್ರೀಯ ಸಂಗೀತದ ಕಡೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಆಧುನಿಕ ಸಂಗೀತ ಕೇಳಲು ಒಳ್ಳೆಯದಿರುತ್ತದೆ. ಆದರೆ ಮನಸ್ಸಿನ ಏಕಾಗ್ರತೆ, ಒತ್ತಡ ನಿವಾರಣೆಗೆಲ್ಲ ಶಾಸ್ತ್ರೀಯ ಸಂಗೀತವೇ ಸಹಕಾರಿ.
ಗುರು ಇಲ್ಲದೆ ಶಾಸ್ತ್ರೀಯ ಸಂಗೀತ ಕಲಿಕೆ ಸಾಧ್ಯವೇ?
ಇತಿಹಾಸದಲ್ಲಿ ಗುರು ಇಲ್ಲದೆ ಕಲಿತು ಜನಮನ್ನಣೆ ಗಳಿಸಿದವರು ಇದ್ದಾರೆ. ಆದರೆ ಭಾರತೀಯ ಪದ್ಧತಿಯ ಪ್ರಕಾರ ಯಾವುದೇ ಶಾಸ್ತ್ರೀಯ ಕಲೆಗಳನ್ನು ಗುರುಗಳ ಮುಖಾಂತರ ಕಲಿತರೆ ಹೆಚ್ಚು ಅರ್ಥಪೂರ್ಣ. ಒಂದು ಕಲೆಯಲ್ಲಿ ಉನ್ನತಿ ಪಡೆಯಬೇಕಾದರೆ ಗುರು ಅಗತ್ಯ. ಎಷ್ಟೇ ಆಧುನಿಕತೆ ಬೆಳೆದರೂ ಗುರುವಿನ ಮುಖೇನ ಕಲಿತರೆ ಅದರಿಂದಾಗುವ ಲಾಭವೇ ಬೇರೆ.
ಹಾಡುಗಾರಿಕೆಗೆ ಕೊಡುವ ಆಸಕ್ತಿ ಪಕ್ಕವಾದ್ಯಕ್ಕೆ ಕೊಡುತ್ತಿದ್ದಾರೆಯೇ?
ಹಾಡುಗಾರಿಕೆ ಕಲಿಯುವ ಮಕ್ಕಳ ಸಂಖ್ಯೆ ಜಾಸ್ತಿ ಮತ್ತು ಪಕ್ಕವಾದ್ಯ ಕಲಿಯುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಯಾಕೆ ಹೀಗೆ ಎಂದು ಗೊತ್ತಿಲ್ಲ. ಪರೀಕ್ಷೆಗಳಲ್ಲಿಯೂ ಹಾಡುಗಾರಿಕೆಗೆ ಅರ್ಜಿ ಸಲ್ಲಿಸುವವರು ಹೆಚ್ಚು. ಪಕ್ಕವಾದ್ಯ ಪರೀಕ್ಷೆ ತೆಗೆದುಕೊಳ್ಳುವವರು ಕಡಿಮೆ ಸಂಖ್ಯೆಯಲ್ಲಿರುತ್ತಾರೆ.
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.