ವರ್ಷಕ್ಕೆ 2,800 ಕೋಟಿ ಲಂಚ!
Team Udayavani, May 19, 2018, 6:00 AM IST
ನವ ದೆಹಲಿ: ಕರ್ನಾಟಕ ಸೇರಿ 13 ರಾಜ್ಯಗಳ ಜನತೆ, ತಮ್ಮ ಮೂಲ ದಾಖಲೆಗಳನ್ನು ಸರ್ಕಾರದಿಂದ ಪಡೆಯಲು ಅಧಿಕಾರಿಗಳಿಗೆ ಕಳೆದೊಂದು ವರ್ಷದಲ್ಲಿ ಅಂದಾಜು 2,800 ಕೋಟಿ ರೂ.ಗಳನ್ನು ಲಂಚದ ರೂಪದಲ್ಲಿ ನೀಡಿದ್ದಾರೆಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಸಮೀಕ್ಷೆ ತಿಳಿಸಿದೆ. 13ರಾಜ್ಯಗಳ ಸುಮಾರು 2000ಕ್ಕೂ ಕುಟುಂಬಗಳು ನೀಡಿರುವ ಮಾಹಿತಿಯ ಆಧಾರವಾಗಿ ಈ ಸಮೀಕ್ಷಾ ವರದಿ ಸಿದ್ಧಪಡಿಸಿರುವುದಾಗಿ ಸಂಸ್ಥೆ ಹೇಳಿದೆ.
ಪಡಿತರ, ವಿದ್ಯುತ್, ಆರೋಗ್ಯ, ಶಾಲಾ ಶಿಕ್ಷಣ, ನೀರು ಸರಬರಾಜು, ಬ್ಯಾಂಕಿಂಗ್ ಸೇವೆ, ಪೊಲೀಸ್, ನ್ಯಾಯಾಂಗ ಸೇವೆಗಳು ಹಾಗೂ ನರೇಗಾ ಯೋಜನೆಯ ಲಾಭ ಪಡೆಯಲು ಜನರು ಕಳೆದೊಂದು ವರ್ಷದಲ್ಲಿ 2,500ರಿಂದ 2,800 ಕೋಟಿ ರೂ.ಗಳಷ್ಟು ಹಣವನ್ನು ಲಂಚ ರೂಪದಲ್ಲಿ ತೆತ್ತಿದ್ದಾರೆಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆಧಾರ್ ಕಾರ್ಡ್‌ಗಾಗಿ ಶೇ.7ರಷ್ಟು, ಮತದಾರರ ಚೀಟಿ ಪಡೆಯಲು ಶೇ. 3ರಷ್ಟು ಹಣ ನೀಡಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.