ನಾನು ಕಲ್ಕಿ ಭಗವಾನ್, ಕಚೇರಿಗೆ ಬರಲ್ಲ!
Team Udayavani, May 19, 2018, 6:00 AM IST
ಅಹ್ಮದಾಬಾದ್: “ನಾನು ವಿಷ್ಣುವಿನ 10ನೇ ಅವತಾರವಾದ ಕಲ್ಕಿ. ಜಗತ್ತಿನ ಕಲ್ಯಾಣಕ್ಕಾಗಿ ನಾನು ತಪಸ್ಸನ್ನು ಮಾಡುತ್ತಿದ್ದೀನಿ. ಹಾಗಾಗಿ ನನಗೆ ಕಚೇರಿಗೆ ಬರಲು ಸಾಧ್ಯವಿಲ್ಲ’. ಗುಜರಾತ್‌ನ ಸರ್ದಾರ್ ಸರೋವರ್ ಪುನರ್ವಸತಿ ಆಯೋಗದಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಆಗಿರುವ ರಮೇಶ್ ಚಂದ್ರ ಫೆಫರ್, ತಮ್ಮ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದಿರುವುದಕ್ಕೆ ನೀಡಿರುವ ಉತ್ತರವಿದು.
ಈ ಮಹಾಶಯರು 8 ತಿಂಗಳಲ್ಲಿ ಕಚೇರಿಗೆ ಬಂದಿರುವುದು ಕೇವಲ 16 ದಿನ ಮಾತ್ರ. ಹಾಗಾಗಿ, ಸರ್ಕಾರ ನೋಟಿಸ್ ಕಳುಹಿಸಿದೆ. ಇದಕ್ಕೆ ಉತ್ತರಿಸಿರುವ ಅವರು, “”2010ರ ಮಾರ್ಚ್‌ನಲ್ಲಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ನಾನು ಕಲ್ಕಿಯೆಂಬುದು ಮನದಟ್ಟಾಯಿತು. ಆಗಿನಿಂದಲೇ ನನ್ನಲ್ಲಿ ದೈವೀಶಕ್ತಿಗಳು ಮೈಗೂಡಿವೆ. ಲೋಕ ಕಲ್ಯಾಣಕ್ಕೆ ತಪಸ್ಸು ಮಾಡುತ್ತಿದ್ದೇನೆ. ನನ್ನ ತಪಸ್ಸಿನಿಂದಲೇ ದೇಶದಲ್ಲಿ ಈಗ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ, ಕಚೇರಿಗೆ ಬರುವುದಿಲ್ಲ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…