ಮತ್ತೆ ಬರುತ್ತಿದೆ ಪ್ರೊ ಕಬಡ್ಡಿ
Team Udayavani, May 19, 2018, 12:05 PM IST
ಭಾರತದಲ್ಲಿ ಕ್ರಿಕೆಟ್ ಮಂತ್ರ ತಾರಕಕ್ಕೇರಿದ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದೇ ಪ್ರೊ ಕಬಡ್ಡಿ. ಅಭಿಮಾನಿಗಳಿಗೆ ಕಚಗುಳಿ ನೀಡಿದ್ದು, ರೋಚಕತೆಯ ಮಳೆಯಲ್ಲಿ ಪುಳಕ ನೀಡಿದ್ದು ಇದೇ ಪ್ರೊ ಕಬಡ್ಡಿ.
ಪ್ರೊ ಕಬಡ್ಡಿಯ ಶುರುವಾತಿನಲ್ಲಿ ಈ ಆಟ, ನಡೆಯದು, ಈ ಟೂರ್ನಿ ಕ್ಲಿಕ್ ಆಗದು, ಪ್ರೊ ಕಬಡ್ಡಿಯಂಥ ಆಟ ತುಂಬಾ ದಿನ ಸಾಗದು ಎನ್ನುವ ವ್ಯಾಪಕ ಅಪಸ್ವರ, ಟೀಕೆಗಳು ಕ್ರೀಡಾ ವಲಯದಿಂದ ಕೇಳಿ ಬಂದಿದ್ದವು. ಇದೆಲ್ಲ ಟೀಕೆಗಳ ನಡುವೆ ಲೀಗ್ ಕೊನೆಗೂ ಆರಂಭವಾಯಿತು. ನೋಡ ನೋಡುತ್ತಾ ಹೋದಂತೆ ಕೆಲವೇ ದಿನಗಳಲ್ಲಿ ಕೂಟ ವ್ಯಾಪಕ ಜನಮನ್ನಣೆಗಳಿಸಿತು. ಟಿಆರ್‌ಪಿ ರೇಟ್ ಹೆಚ್ಚಿಸಿಕೊಂಡಿತು. ನಗರದಿಂದ ಹಿಡಿದು ಗ್ರಾಮೀಣ ಭಾಗದವರೆಗೆ ಪ್ರತಿ ಮನೆಯಲ್ಲೂ ಪ್ರೊ ಕಬಡ್ಡಿಯದ್ದೇ ಚರ್ಚೆ ಶುರುವಾಯಿತು. ಗಂಡಸರು, ಹೆಂಗಸರು, ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಸಂಜೆಯ ಹೊತ್ತಲ್ಲಿ ಟೀವಿ ಮುಂದೆ. ಮನೆಯಲ್ಲಿ ಟೀವಿ ಇಲ್ಲದವರು ಅಂಗಡಿಗಳ ಮುಂದೆ. ಹೀಗೆ ಗುಂಪಿನಲ್ಲಿ ನಿಂತು ಪ್ರೊ ಕಬಡ್ಡಿ ಆಟದ ಮಜಾ ಅನುಭವಿಸಿದವರು ಅದೆಷ್ಟೋ ಮಂದಿ. ಹೀಗೆ ಸಾಗಿದ ಪ್ರೊ ಕಬಡ್ಡಿ ಇದೀಗ 5 ಆವೃತ್ತಿಯನ್ನು ಯಶಸ್ವಿಯಾಗಿ ಪೂರೈಸಿದೆ. 6ನೇ ಆವೃತ್ತಿಯನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ಮುಂಬರುವ ಅಕ್ಟೋಬರ್‌ನಲ್ಲಿ ಲೀಗ್ ಆರಂಭವಾಗಲಿದ್ದು ಒಟ್ಟಾರೆ 12ಪ್ಲಸ್ ತಂಡಗಳು ಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಮೇ 30, 31ರಂದು ಎರಡು ದಿನ ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿನಲ್ಲಿ ವಿವಿಧ ಫ್ರಾಂಚೈಸಿಗಳು ಒಟ್ಟಾರೆ 46.99 ಕೋಟಿ ರೂ. ಖರ್ಚು ಮಾಡಲಿವೆ.
ಹರಾಜಿನಲ್ಲಿ ಒಟ್ಟಾರೆ 422 ಆಟಗಾರರು
ಇದುವರೆಗೆ ವಿವಿಧ ಫ್ರಾಂಚೈಸಿಗಳು ಒಟ್ಟಾರೆ 21 ಆಟಗಾರರನ್ನು ಉಳಿಕೆ ಮಾಡಿಕೊಂಡಿವೆ. ಉಳಿದಂತೆ ಎಫ್ಕೆಎಚ್ (ಫ್ಯೂಚರ್ ಕಬಡ್ಡಿ ಹೀರೋಸ್) ಯೋಜನೆಯಡಿ 87 ಆಟಗಾರರು, 14 ರಾಷ್ಟ್ರಗಳ 58 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 422 ಆಟಗಾರರು ಈ ಸಲದ ಹರಾಜಿನಲ್ಲಿರಲಿದ್ದಾರೆ ಎನ್ನುವುದು ವಿಶೇಷ.
58 ವಿದೇಶಿ ಆಟಗಾರರು ಆಕರ್ಷಣೆ
ಇರಾನ್, ಬಾಂಗ್ಲಾದೇಶ, ಜಪಾನ್, ಕೀನ್ಯಾ, ರಿಪಬ್ಲಿಕ್ ಆಫ್ ಕೊರಿಯಾ, ಮಲೇಷ್ಯಾ ಹಾಗೂ ಶ್ರೀಲಂಕಾ ತಂಡಗಳ ಆಟಗಾರರು ಹರಾಜಿನಲ್ಲಿದ್ದಾರೆ. ಒಟ್ಟಾರೆ 14 ರಾಷ್ಟ್ರದಿಂದ 58 ವಿದೇಶಿ ಆಟಗಾರರು ಪ್ರೊ ಕಬಡ್ಡಿಗೆ ಆಗಮಿಸಲಿದ್ದಾರೆ.
ವಿವಿಧ ತಂಡಕ್ಕೆ ಉಳಿಕೆ ಆದವರು?
ಸುರ್ಜಿತ್ ಸಿಂಗ್, ಮಣೀಂದರ್ ಸಿಂಗ್ (ಬೆಂಗಾಲ್ ವಾರಿಯರ್), ರೋಹಿತ್ ಕುಮಾರ್ (ಬೆಂಗಳೂರು ಬುಲ್ಸ್), ಮಿರಾಜ್ ಶೇಖ್ (ದಬಾಂಗ್ ಡೆಲ್ಲಿ), ಸಚಿನ್, ಸುನಿಲ್ ಕುಮಾರ್,
ಮಹೇಂದ್ರ ಗಣೇಶ್ ರಜಪೂತ್ (ಗುಜರಾತ್ ಫಾರ್ಚೂನ್‌ಜೈಂಟ್ಸ್), ಕುಲದೀಪ್ ಸಿಂಗ್ (ಹರ್ಯಾಣ ಸ್ಟೀಲರ್), ಪರ್‌ದೀಪ್ ನರ್ವಲ್, ಜೈದೀಪ್, ಜವಾಹರ್ ದಾಗರ್, ಮನೀಶ್ ಕುಮಾರ್ (ಪಾಟ್ನಾ ಪೈರೇಟ್ಸ್), ಸಂದೀಪ್ ನರ್ವಲ್, ರಾಜೇಶ್ ಮೊಂದಲ್, ಮೋರೆ, ಗಿರೀಶ್ ಎರ್ನಾಕ್ (ಪುನೇರಿ ಪಲ್ಟಾನ್), ಅಜಯ್ ಠಾಕೂರ್, ಅಮಿತ್ ಹೂಡಾ, ಸಿ.ಅರುಣ್ (ತಮಿಳ್ ತಲೈವಾಸ್), ನಿಲೇಶ್ ಸಾಳುಂಕೆ, ಮೊಹ್ಸಿàನ್ (ತೆಲುಗು ಟೈಟಾನ್ಸ್)
ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.