ಮಾವಿನ ಹಣ್ಣಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
Team Udayavani, May 19, 2018, 12:09 PM IST
ನಾಲತವಾಡ: ಮುದ್ದೇಬಿಹಾಳ ತಾಲೂಕು ಸೇರಿದಂತೆ ಪಟ್ಟಣದಲ್ಲೂ ಸಹ ಹಣ್ಣುಗಳ ರಾಜ ಮಾವಿನ ಹಣ್ಣುಗಳ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡು ಬಂದಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ.
ಈ ಬಾರಿ ಹವಾಮಾನ ವೈಪರಿತ್ಯದ ಪರಿಣಾಮ ರಾಜ್ಯಾದ್ಯಂತ ಹಣ್ಣುಗಳ ರಾಜಾ ಎಂದೇ ಕರೆಯಲಾದ ಮಾವು ಇಳುವರಿ ಕುಸಿದಿದ್ದು ಪಟ್ಟಣ ಸೇರಿದಂತೆ ನಾಲತವಾಡ ವ್ಯಾಪ್ತಿಯ ಮಾವು ತೋಪಿನ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದ್ದು ಹಣ್ಣು ಕೊರತೆಯಿಂದ ಮಾರುಕಟ್ಟೆ ಬಿಕೋ ಎನ್ನುತ್ತಿದೆ.
ನಾಲತವಾಡ ವ್ಯಾಪ್ತಿಯಲ್ಲಿ ಮಾವು ಬೆಳೆಗಾರರು ಕಳೆದ ವರ್ಷಕ್ಕಿಂತಲೂ ಈ ವರ್ಷದ ಬೇಸಿಗೆ ಬರದಲ್ಲಿ ಶೆ. 50ರಷ್ಟು ಹಾನಿ ಅನುಭವಿಸಿದ್ದಾರೆ. ಇಳುವರಿಯ ಮಧ್ಯ ಮಾವಿನ ಬೆಲೆಯೂ ಸಹ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಪಟ್ಟಣದ ಮಾರುಕಟ್ಟೆಯಲ್ಲಿ ಕಳೆದ ವರ್ಷ 40 ರೂ.ಗೆ ಮಾರಾಟವಾಗುತ್ತಿದ್ದ ನಾನಾ ಬಗೆಯ ಮಾವು ಈ ಭಾರಿ 80ರಿಂದ 90 ರೂ.ಗೆ ಏರಿಕೆಯಾಗಿದ್ದು ಮಾವು ಪ್ರೀಯರಿಗೆ ಬೆಲೆ ಏರಿಕೆ ಶಾಕ್ ತಗಲಿದ್ದರೆ, ಕೊಂಡು ತಂದು ಮಾರಾಟ
ಮಾಡುವವರಿಗೆ ಈ ಬೆಲೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತತ್ತರಿಸಿದ ಮಾವಿನ ತೋಪುಗಳು: ಸತತ ಮೂರು ವರ್ಷಗಳ ಬರಗಾಲದಿಂದ ಜಮೀನುಗಳ ಬೊರ್ ವೆಲ್‌ಗಳಲ್ಲೂ ಸಹ ಅಂತರ್ಜಲ ಮಟ್ಟ ಕುಸಿತ ಕಂಡ ಪರಿಣಾಮ ಪ್ರಸಕ್ತ ಸಾಲಿನಲ್ಲೂ ಸಹ ಮಾವಿನ ತೋಪಿನ ಮರಗಳಿಗೆ ಸಮರ್ಪಕ ನೀರು ಹರಿಸಲು ಸಹ ನೀರಿನ ಬವಣೆ ಉಂಟಾದ ಪರಿಣಾಮ ಬೆಳೆಯುವ ಮಾವಿನ ಕಾಯಿಗಳು ತತ್ತರಿಸಿವೆ.
ಧರೆಗೆ ಉರುಳುತ್ತಿವೆ ಮಾವು: ಬೆಲೆ ಏರಿಕೆ ಹಾಗೂ ಇಳುವರಿ ಕುಸಿತದ ಪರಿಣಾಮ ಮಾವಿನ ತೋಪುಗುತ್ತಿಗೆ ಪಡೆದ ವ್ಯಾಪಾರಿಗಳಿಗೆ ಈಚೆಗೆ ಬೀಸುತ್ತಿರುವ ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ಮಾವು ಧರೆಗುರುಳಿತ್ತಿದ್ದು ವ್ಯಾಪಾರಿಗಳಿಗೆ ಬಿಗ್ ಶ್ಯಾಕ್ ಕೊಟ್ಟಿದ್ದು ಕಳೆದ ಎರಡು ಮೂರು ದಿನಗಳಿಂದ ಮಾವು ನೆಲಕ್ಕುರುಳುತ್ತಿದೆ. ಬಿರುಗಾಳಿಗೆ ಇದ್ದ ಅಲ್ಪ ಸ್ವಲ್ಪ ಮಾವು ನೆಲಕ್ಕುರುಳಿ ಹಾಳಾಗುತ್ತಿದ್ದು ಮತ್ತಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ
ಈ ಬಾರಿ ಆಕಾಲಿಕ ಮಳೆ ಪರಿಣಾಮ ಮಾವು ಇಳುವರಿ ಹಾಗೂ ಉತ್ಪಾದನೆಯಲ್ಲಿ ಕುಸಿದ ಕಂಡು ಬಂದಿದೆ. ಮರದಲ್ಲೂ ಸಹ ಮಾವಿನ ಬೆಳವಣಿಗೆ ಶೇ. 20ರಷ್ಟು ಕುಸಿದಿದೆ. ಜೊತೆಗೆ ವಿಪರಿಸ ಬಿಸಿಲಿಗೆ ಬೆಳೆಯುವ ಮಾವಿನ
ಕಾಯಿಯಲ್ಲಿ ಜಿಡ್ಡು ರೋಗ ಕಂಡು ಬಂದಿದೆ. ಕಳೆದ ವರ್ಷಕ್ಕಿಂಲೂ ಈ ವರ್ಷ ಮಾವು ಕಡಿಮೆ ಬೆಳೆಯಲಾಗಿದೆ. ದರದಲ್ಲೂ ಸಹ ಶೇ. 50ರಷ್ಟು ಹೆಚ್ಚಾಗಿದೆ.
ವೀರೇಶ ದಲಾಲಿ, ಮಾವು ಬೆಳೆಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.