ಹಾರೋಬೆಳವಡಿ ಗ್ರಾಮಸ್ಥರ ಪಾದಯಾತ್ರೆ
Team Udayavani, May 19, 2018, 5:17 PM IST
ಉಪ್ಪಿನಬೆಟಗೇರಿ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಗೆಲುವು ಕಂಡ ಹಿನ್ನೆಲೆಯಲ್ಲಿ ಸಮೀಪದ ಹಾರೋಬೆಳವಡಿ ಗ್ರಾಮಸ್ಥರ ತಂಡವು ಪಾದಯಾತ್ರೆಯಲ್ಲಿ ಗರಗದ ಶ್ರೀ ಮಡಿವಾಳೇಶ್ವರ ಗದ್ದುಗೆ ದರ್ಶನಕ್ಕೆ ಲೋಕೂರ ಮಾರ್ಗವಾಗಿ ತೆರಳಿತು. ಹಾರೋಬೆಳವಡಿಯಲ್ಲಿ ವೀರಭದ್ರೇಶ್ವರ ದೇವರಿಗೆ 101 ಕಾಯಿ ಒಡೆದು ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು. ಮಾರ್ಗ ಮಧ್ಯದ ಲೋಕೂರು ಗ್ರಾಮದಲ್ಲಿ ಶ್ರೀ ದ್ಯಾಮವ್ವ-ದುರ್ಗವ್ವ ದೇವಿಯರ ದರ್ಶನ ಪಡೆದು ಮಾತನಾಡಿದ ಯಲ್ಲಪ್ಪ ಉದಮೇಶಿ, ಸರಳ ಸಜ್ಜನಿಕೆಯ ರಾಜಕಾರಣಿ ಅಮೃತ ದೇಸಾಯಿ ಕಳೆದ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಈ ಬಾರಿ ಜಯ ಸಾಧಿಸಿದ್ದಾರೆ. ಹೀಗಾಗಿ ಮೊದಲೇ ಬೇಡಿಕೊಂಡಂತೆ ಪಾದಯಾತ್ರೆ ಮೂಲಕ ಗರಗ ಗ್ರಾಮಕ್ಕೆ ತೆರಳಿ ಶ್ರೀ ಮಡಿವಾಳೇಶ್ವರ ದೇವಸ್ಥಾನದ ಗದ್ದುಗೆಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸಿ ತಮ್ಮ ಹರಕೆ ಸಲ್ಲಿಸುವುದಾಗಿ ಹೇಳಿದರು. ಈರಣ್ಣ ಗಾಣಿಗೇರ, ರುದ್ರಗೌಡ ಹಳೆಮನಿ, ಶಿವಯ್ಯ ಹವಾಲ್ದಾರಮಠ, ಹನುಮಂತಪ್ಪ ಬೆಣ್ಣಿ, ಮಂಜುನಾಥ ಬೆಟಸೂರ, ರವಿ ಬೆಟಗೇರಿ, ಶೇಖಪ್ಪ ಕಡ್ಲಿ, ಮಲ್ಲಿಕಾರ್ಜುನ ಅಮಟೂರ, ವಾಸುದೇವ ಗಾಣಿಗೇರ, ಶಿವಾನಂದ ಗೊಬ್ಬರಗುಂಪಿ, ರಾಯಪ್ಪ ಉದಮೇಶಿ, ಬಸನಗೌಡ ಹಳಮನಿ, ವೀರೇಶ ಶಿರೂರ, ಸೋಮನಗೌಡ ಹಳಮನಿ, ಕಲ್ಲಪ್ಪ ರೋಣದ, ಮಹಾದೇವಪ್ಪ ಪಟದಾರಿ, ಮಂಜುಳಾ ಕಂಬಾರ, ಭಾರತಿ ಸಿದ್ದಗಿರಿಮಠ, ಸುನಂದಾ ಹಳಮನಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.