ಮರಳು ಬಗೆದು ನೀರು ತೆಗೆವ ಕಾಡಿನ ಭೂಪಟ


Team Udayavani, May 20, 2018, 6:00 AM IST

o-3.jpg

ಆನೆಗಳ ದೆಸೆಯಿಂದ ಇನ್ನೂ ಹಲವಾರು ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರು ಸಿಗುತ್ತದೆ. ಆದರೆ ಎಲ್ಲಾ ಒಣಗಿದ ಹಳ್ಳಗಳಲ್ಲಿ ನೀರು ಸಿಗುವುದಿಲ್ಲ, ಕೆಲವು ವಿಶಿಷ್ಟ ಸ್ಥಳಗಳಲ್ಲಿ ಮಾತ್ರ. ಈ ಸ್ಥಳಗಳು ಆನೆಗಳಿಗೆ ಹೇಗೆ ತಿಳಿಯುತ್ತದೆ ಎಂಬುದು ಅದ್ಭುತವಾದ ವಿಚಾರ. ಆನೆಗಳ ಗುಂಪಿನ ನಾಯಕಿಗೆ ಯಾವ ಯಾವ ಋತುಗಳಲ್ಲಿ ಎಲ್ಲೆಲ್ಲಿ ನೀರು ಸಿಗುತ್ತದೆಂಬ ಸೂಕ್ಷ್ಮ ವಿವರಣೆಗಳುಳ್ಳ, ನಿಖರವಾದ, ಸುಲಭವಾಗಿ ಹಾಗೂ ತಕ್ಷಣ ಮರುಕಳಿಸಿಕೊಳ್ಳಬಲ್ಲ “ಕಾಡಿನ ಭೂಪಟ’ ಮಿದುಳಿನಲ್ಲಿ ಅಚ್ಚಾಗಿರುತ್ತದೆ. 

ವನ್ಯಜೀವಿಗಳು ತಮಗೆ ಬೇಕಾದ ಮುಖ್ಯ ಸಂಪನ್ಮೂಲಗಳಾದ ಆಹಾರ ಮತ್ತು ನೀರನ್ನು ಕಂಡುಕೊಳ್ಳುವುದರಲ್ಲಿ ಸಾಕಷ್ಟು ನೈಪುಣ್ಯ ಹೊಂದಿವೆ. ಇವುಗಳನ್ನು ವನ್ಯಜೀವಿಗಳು ಹೇಗೆ ಪಡೆದುಕೊಳ್ಳುತ್ತವೆಂಬುದೇ ವಿಸ್ಮಯಕಾರಿ ವಿಚಾರ. ವಿವಿಧ ಪ್ರಾಣಿಗಳು ತಮಗೆ ಬೇಕಾಗಿರುವ ದ್ರವ ಮತ್ತು ತೇವಾಂಶವನ್ನು ನೀರು ಕುಡಿಯುವುದರಿಂದಲ್ಲದೆ ಇತರ ಮೂಲ ಗಳಿಂದಲೂ ಕೂಡ ಪಡೆಯುತ್ತವೆ. ಜಿಂಕೆ, ಕಡವೆ, ಕೊಂಡುಕುರಿ, ಕಾಡುಕುರಿಯಂತಹ ಪ್ರಾಣಿಗಳು ಹಣ್ಣು, ಎಲೆ, ಹೂವು ಹಾಗೂ ಇತರ ನೈಸರ್ಗಿಕ ಮೂಲಗಳಿಂದ ತಮಗೆ ಬೇಕಾದ ನೀರಿನ ಅಂಶವನ್ನು ಪಡೆದುಕೊಳ್ಳುತ್ತವೆ. ಬೆಳಗಿನ ಇಬ್ಬನಿಯೇ ಕೆಲವು ಪ್ರಾಣಿಗಳಿಗೆ ಬೇಕಾದ ಆದ್ರìತೆಯನ್ನು ನೀಡುತ್ತದೆ. ತಮ್ಮ ಈ ನೈಸರ್ಗಿಕ ಹೊಂದಾಣಿಕೆಯಿಂದ ನಿರ್ದಯ ಬೇಸಿಗೆಯನ್ನು ವನ್ಯಜೀವಿಗಳು ನಿಭಾಯಿಸಬಲ್ಲವು. ಆದರೆ ಆನೆಯಂತಹ ವನ್ಯಜೀವಿಗಳು ಬೇಸಿಗೆಯ ಸನ್ನಿವೇಶಗಳನ್ನು ಹೇಗೆ ನಿಭಾಯಿ ಸುತ್ತವೆಂಬುದು ಆಶ್ಚರ್ಯಕರ.  

ನಾವು ಕೆಲಸ ಮಾಡುವ ಕಾವೇರಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮಗಳಲ್ಲಿ ಆನೆಗಳು ಬೇಸಿಗೆಯಲ್ಲಿ ನೀರು ಪಡೆ ಯುವ ವಿಧಾನ ಬಹು ಕೌತುಕವಾದುದು. ಈ ಭೂಹರುವಿನಲ್ಲಿ ಮಳೆ ಬರುವುದು ಕಡಿಮೆ, ಹಾಗೂ ಬೇಸಿಗೆಯು ಕೂಡ ಬಹು ವಿಸ್ತಾರವಾಗಿರುತ್ತದೆ. ಜನವರಿಯಿಂದಲೇ ಕಾಡು 
ಒಣಗಲು ಪ್ರಾರಂಭವಾಗುತ್ತದೆ. ಮಾರ್ಚ್‌ನಷ್ಟರಲ್ಲಿ ಕಾಡಿನಲ್ಲಿ ನಡೆಯುವುದೆಂದರೆ “ಹೇರ್‌ ಡ್ರಯರ್‌’ನೊಳಗೆ ನಡೆದಂತೆ ಭಾಸವಾಗುತ್ತದೆ. ಗಾಳಿಯಿದ್ದರೂ ಅದು ಬಿಸಿ ಹವೆ, ಮೈಯಲ್ಲಿರುವ ಪಸೆಯಲ್ಲೇ ಒಣಗಿಹೋಗುತ್ತದೆ. ಇಂತಹ ಪ್ರದೇಶದಲ್ಲಿ ಹುಲಿ, ಸೀಳುನಾಯಿ, ಕಾಟಿ, ಕಡವೆ ಇನ್ನೂ ಹಲವಾರು ವನ್ಯಜೀವಿಗಳಿವೆ. ಮುಖ್ಯವಾಗಿ, ದಿನಕ್ಕೆ ಸುಮಾರು ಇನ್ನೂರು ಮುನ್ನೂರು ಲೀಟರ್‌ನಷ್ಟು ನೀರು ಸೇವಿಸುವ ಆನೆಗಳಿವೆ. ಈ ಪ್ರಾಣಿಗಳು ತಮಗೆ ಬೇಕಾದ ನೀರನ್ನು ಹೇಗೆ ಪಡೆಯುತ್ತವೆ ಎಂಬುದು ಬಹು ಸೋಜಿಗದ ಸಂಗತಿ. 

ಒಮ್ಮೆ ಮಲೈ ಮಹದೇಶ್ವರ ವನ್ಯಜೀವಿಧಾಮದ ರಾಮಾಪುರ ವಲಯದಲ್ಲಿ ನಡೆದು ಹೋಗುತ್ತಿದ್ದೆ. ಮಾರ್ಚ್‌ ತಿಂಗಳ ಬರ್ಬರ ಬೇಸಿಗೆ, ನೆತ್ತಿಯ ಮೇಲೆ ಸುಡುತ್ತಿರುವ ಸೂರ್ಯ, ಕಾಡೆಲ್ಲಾ ಸಂಪೂರ್ಣವಾಗಿ ಒಣಗಿದೆ. ಅಡವಿಯಲ್ಲೆಲ್ಲಾ  ಒಣಗಿ, ಬತ್ತಿ ಹೋದ ಹಳ್ಳಗಳು. ನೀರು ಬತ್ತಿ ಹೋಗಿ ವಾರಗಳೇ ಕಳೆದಿವೆ. ಈಗ ತೊರೆ, ಹಳ್ಳಗಳಲ್ಲಿ ಉಳಿದಿರುವುದು ಬಿಸಿಲಿನಿಂದ ಕಾದಿರುವ ಮರಳು ಮಾತ್ರ. 

ಒಣಗಿದ ಒಂದು ಹಳ್ಳದಲ್ಲಿ ಒಂದೆರೆಡು ಕಡೆ ಮರಳು ಯಾಕೋ ಸ್ವಲ್ಪ ಗಾಢವಾದ ಬಣ್ಣ ಹೊಂದಿದ್ದ ಹಾಗೆ ಕಂಡಿತು. ಹತ್ತಿರ ಹೋಗಿ ನೋಡಿದರೆ ಒಂದೆರೆಡು ಗುಪ್ಪೆ ಮರಳು ಒದ್ದೆ ಇದ್ದ ಹಾಗೆ ಕಂಡಿತು. ಪಕ್ಕದಲ್ಲಿ ಎರಡು ಅಡಿ ಆಳದ, ಒಂದು ಅಡಿ ಅಗಲದ ಪುಟ್ಟ ಗುಂಡಿ. ತಳದಲ್ಲಿ ನೀರು ಜಿನುಗುತ್ತಿದೆ. ಗುಂಡಿಯ ಸುತ್ತೆಲ್ಲ ಆನೆಗಳ ಹೆಜ್ಜೆ ಗುರುತು. ಆಶ್ಚರ್ಯವಾಯಿತು, ಕಾಡೆಲ್ಲಾ ಅಷ್ಟು ಒಣಗಿದ್ದು, ಎಲ್ಲೂ ಒಂದು ಹನಿ ನೀರಿಲ್ಲದಿದ್ದರೂ ಸಹ ಆನೆಗಳು ಒಣಗಿದ ಹಳ್ಳದಲ್ಲಿ ನೀರು ಹುಡುಕಿದ್ದವು. ಸ್ವಲ್ಪ ಪಕ್ಕದಲ್ಲೇ ಇನ್ನೊಂದು ಗುಂಡಿ ತೋಡಿದೆ, ಒಂದೆರೆಡು ಅಡಿ ಗುಂಡಿ ತೆಗೆದೊಡನೆ ನೀರು ಜಿನುಗಲು ಪ್ರಾರಂಭಿಸಿತು.     

ಅಂದಿನಿಂದ ಬೇಸಿಗೆಯಲ್ಲಿ ಒಣಗಿ, ಬತ್ತಿದ ಹಳ್ಳಗಳು ಕಂಡೊ ಡನೆ ಪರೀಕ್ಷಿಸುತ್ತೇನೆ. ಕೆಲ ಹಳ್ಳಗಳಲ್ಲಿ ಆನೆಗಳು ಗುಂಡಿ ತೋಡಿ ನೀರು ಕುಡಿದು ಹೋಗಿರುತ್ತವೆ. ಆನೆಗಳು ಬಗೆದು ಹೋದ ಗುಂಡಿಗಳಲ್ಲಿ ಇತರ ಪ್ರಾಣಿಗಳು ಬಂದು ನೀರು ಕುಡಿದಿರುತ್ತವೆ. ಈ ತರಹದ ಗುಂಡಿಗಳಲ್ಲಿ ಹತ್ತಾರು ಚಿಟ್ಟೆಗಳು ತಮಗೆ ಬೇಕಿರುವ ನೀರನ್ನು ಹೀರುತ್ತಾ ಕುಳಿತಿರುತ್ತವೆ. ಆನೆಗಳ ದೆಸೆಯಿಂದ ಇನ್ನೂ ಹಲವಾರು ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರು ಸಿಗುತ್ತದೆ. 

ಆದರೆ ಎಲ್ಲಾ ಒಣಗಿದ ಹಳ್ಳಗಳಲ್ಲಿ ನೀರು ಸಿಗುವುದಿಲ್ಲ, ಕೆಲವು ವಿಶಿಷ್ಟ ಸ್ಥಳಗಳಲ್ಲಿ ಮಾತ್ರ. ಈ ಸ್ಥಳಗಳು ಆನೆಗಳಿಗೆ ಹೇಗೆ ತಿಳಿಯುತ್ತದೆ ಎಂಬುದು ಅದ್ಭುತವಾದ ವಿಚಾರ. ಆನೆಗಳ ಗುಂಪಿನ ನಾಯಕಿಗೆ ಯಾವ ಯಾವ ಋತುಗಳಲ್ಲಿ ಎಲ್ಲೆಲ್ಲಿ ನೀರು ಸಿಗುತ್ತದೆಂಬ ಸೂಕ್ಷ್ಮ ವಿವರಣೆಗಳುಳ್ಳ, ನಿಖರವಾದ, ಸುಲಭವಾಗಿ ಹಾಗೂ ತಕ್ಷಣ ಮರುಕಳಿಸಿಕೊಳ್ಳಬಲ್ಲ “ಕಾಡಿನ ಭೂಪಟ’ ಮಿದುಳಿನಲ್ಲಿ ಅಚ್ಚಾಗಿರುತ್ತದೆ. ಅದು ಮುಂದಾ
ಲೋಚಿಸಿ ತನ್ನ ಗುಂಪನ್ನು ನೀರು ಸಿಗುವ ಕಡೆ ಕರೆದುಕೊಂಡು ಹೋಗುತ್ತದೆ. ಯಾವುದೇ ಗೂಗಲ… ಮ್ಯಾಪ್‌ನ ಸಹಾಯವಿಲ್ಲದೆ ತನ್ನ ಜಾಣ್ಮೆ, ಸ್ಮ ೃತಿಕೋಶ ಮತ್ತು ನೀರಿನ ಮಬ್ಟಾದ ವಾಸನೆ ಹಿಡಿದು ತನ್ನ ಹಿಂದಿನ ತಲೆಮಾರಿನವರು ಹೆಜ್ಜೆ ಹಾಕಿರುವ ಕಾಡಿನಲ್ಲಿ, ಒಗಟಿನಂತಿರುವ ಗುಪ್ತ ಹಾದಿಗಳಲ್ಲಿ ಸಂಚರಿಸಿ, ತನ್ನ ಗುಂಪನ್ನು ನೀರಿನಂತಹ ಸಂಪನ್ಮೂಲಗಳಿರುವ ಜಾಗಕ್ಕೆ ಕರೆದುಕೊಂಡು ಹೋಗುತ್ತದೆ. 

ಪ್ರಪಂಚದಲ್ಲೇ ಯಾವುದೇ ಪ್ರಾಣಿಗಿಂತ ಅತೀ ಉದ್ದವಾದ ಮೂಗನ್ನು ಹೊಂದಿರುವ ಈ ಬುದ್ಧಿಜೀವಿಗಳು ಗಾಳಿಯಲ್ಲಿರುವ ನೀರಿನ ಕಣಗಳನ್ನು ಗುರುತಿಸಿ ನೀರಿನ ಸೆಲೆ ಎಷ್ಟು ದೂರದಲ್ಲಿದೆ ಎಂಬುದನ್ನು ಕೂಡ ಗುರುತಿಸಬಲ್ಲವು ಎಂದು ಹೇಳಲಾಗಿದೆ. ಆಫ್ರಿಕಾದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ, ಆನೆಗಳು ಐವತ್ತು ಕಿಲೋಮೀಟರ್‌ವರೆಗಿನ ದೂರದ ನೀರಿನ ಮೂಲವನ್ನು ಸಹ ಗುರುತಿಸಬಲ್ಲವು ಎಂದು ದಾಖಲಿಸಲಾಗಿದೆ. ಆನೆಗಳು ಇನ್‌ಫ್ರಾಸೋನಿಕ್‌ ತರಂಗಗಳ ಸಹಾಯದಿಂದ ಕೂಡ ಭೂಮಿಯಲ್ಲಿ ನೀರೆಲ್ಲಿದೆ ಎಂಬುದನ್ನು ಕಂಡು ಹಿಡಿಯುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

ಋತುಗಳ ಆಧಾರದ ಮೇಲೆ ಬದಲಾಗುವ ಕಾಡಿನ ಭೂ ಪ್ರದೇಶದಲ್ಲಿ, ಒಂದು ನೀರಿನ ಸೆಲೆಯಿಂದ ಇನ್ನೊಂದು ನೀರಿನ ಸೆಲೆಗೆ ಕೂಡುವ ಈ ಸ್ಮರಣಾಶಕ್ತಿಯ, ಅಮೂಲ್ಯ ಭೂಪಟವನ್ನು ಅದು ತನ್ನ ಮರಿ ಮತ್ತು ಗುಂಪಿನ ಇತರ ಸದಸ್ಯರಿಗೂ ಬಳುವಳಿಯಾಗಿ ಕೊಡುತ್ತದೆ. ಈ “ಪಿಟ್‌ ಸ್ಟಾಪ್‌’ಗಳು ಅವುಗಳ ಉಳಿವಿಗೆ ಬಹು ಮುಖ್ಯ. ನಾವು ಹತ್ತು ದೂರವಾಣಿ ಸಂಖ್ಯೆಗಳನ್ನೇ ಜ್ಞಾಪಕವಿಟ್ಟುಕೊಳ್ಳಲು ಪ್ರಯಾಸ ಪಡುವಾಗ ಈ ಪ್ರಾಣಿಗಳು ನೂರಾರು ನಿಖರವಾದ ಸ್ಥಳಗಳನ್ನು ಹೇಗೆ ಮನಸ್ಸಿನಲ್ಲಿಟ್ಟುಕೊಂಡಿರುತ್ತವೆಂದು ಯೋಚಿಸಿದರೆ ಅದೊಂದು ನಿಸರ್ಗದ ಅದ್ಭುತವೇ ಸರಿ.  ನಾನು ಗಮನಿಸಿದ ಹಾಗೆ ಬೇಸಿಗೆಯಲ್ಲಿ ದೊಡ್ಡ ಹಳ್ಳಗಳು ಸಂಪೂರ್ಣವಾಗಿ ಒಣಗಿದ್ದರೂ, ಮರಗಳಿಂದ ಆವೃತವಾಗಿರುವ, ಹೆಚ್ಚು ನೆರಳಿರುವ ಸ್ಥಳಗಳಲ್ಲಿ, ಚಿಕ್ಕ ಗುಂಡಿಗಳಲ್ಲಿ ನೀರು ಉಳಿದಿ ರುತ್ತದೆ. ಆದರೆ ನೀರಿಗೆ ಸಾಕಷ್ಟು ಪೈಪೋಟಿಯಿರುವುದರಿಂದ, ಇರುವ ಪುಟ್ಟ ನೀರಿನ ಗುಂಡಿಗಳು ರಾಡಿಯಾಗಿರುತ್ತವೆ. ಅದ ರೊಟ್ಟಿಗೆ ಆನೆಗಳ ಲದ್ದಿ, ಕೊಳೆತ ಎಲೆಗಳು, ಹೀಗೆ ಎಲ್ಲಾ ಕಲ್ಮಶಗಳು ಸೇರಿ ನೀರು ಸಾಕಷ್ಟು  ಮಲಿನವಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ಆನೆಗಳು ನೀರಿನ ಗುಂಡಿಯ ಪಕ್ಕದಲ್ಲಿ ತಮ್ಮದೇ ಪುಟ್ಟ ಗುಂಡಿ ಗಳನ್ನು ತೆಗೆದು ಸ್ವತ್ಛವಾಗಿರುವ ನೀರನ್ನು ಕುಡಿದಿರುವ ಉದಾ ಹರಣೆಗಳನ್ನು ಗಮನಿಸಿದ್ದೇನೆ. ಹೀಗೆ ನೀರು ಸಿಗುವ ರಹಸ್ಯ ಸ್ಥಳಗಳಲ್ಲಿ ಹತ್ತಾರು ಆನೆಗಳು ಅಥವಾ ಬೇರೆ ಬೇರೆ ಸಮಯ ಗಳಲ್ಲಿ, ಬೇರೆ ಬೇರೆ ಗುಂಪಿನ ಆನೆಗಳು ಬಂದು ತಮ್ಮ ಕಾಲು, ಸೊಂಡಿಲುಗಳಿಂದ ಮರಳು ಬಗೆದು ನೀರು ಕುಡಿದಿರುವ ಕುರು ಹನ್ನು ಅಲ್ಲಿ ಬಿದ್ದಿರುವ ಲದ್ದಿಗಳನ್ನು ನೋಡಿ ಹೇಳಬಹುದು. ನಮೀಬಿಯಾ ದೇಶದ ಕ್ಯೂನೇನಿ ಪ್ರದೇಶದ ಮರಳುಗಾಡಿನಲ್ಲಿ ಆನೆಗಳು ಹೀಗೆಯೇ ನೀರು ಹುಡುಕುವುದನ್ನು ನೋಡಿದ್ದೇನೆ.   ಒಮ್ಮೆ ಮಹದೇಶ್ವರ ಬೆಟ್ಟದ ಹೂಗ್ಯಂ ಪ್ರದೇಶದಲ್ಲಿ ಒಣಗಿದ ಹಳ್ಳದಲ್ಲಿ ಚಿಕ್ಕದಾದ ಗುಂಡಿಯಲ್ಲಿ ನೀರಿನ್ನೂ ಉಳಿದಿತ್ತು. ಅಲ್ಲಿಗೆ ಯಾವ ಪ್ರಾಣಿಗಳು ಬರಬಹುದೆಂದು ನೋಡಲು ಕುತೂಹಲ ದಿಂದ ಕ್ಯಾಮೆರಾ ಟ್ರಾಪ್‌ ಕಟ್ಟಿದೆವು. ಒಂದು ದಿನ ಸಂಜೆಯ ವೇಳೆ ದೊಡ್ಡ ಹೆಣ್ಣಾನೆಯೊಂದು ತನ್ನ ಸುಮಾರು ನಾಲ್ಕು ವರ್ಷದ ಗಂಡು ಮರಿಯೊಂದಿಗೆ ಬಂದು ಗುಂಡಿಯಲ್ಲಿದ್ದ ಗಲೀಜು ನೀರು ಕುಡಿಯದೆ ಪಕ್ಕದÇÉೇ ಇನ್ನೊಂದು ಗುಂಡಿ ತೆಗೆದು ಸ್ವತ್ಛವಾದ ನೀರು ಕುಡಿದಿತ್ತು. ತಾಯಿ ನೀರು ಕುಡಿದು ಮುಗಿಸುವವರೆಗೆ ತಾಳ್ಮೆಯಿಂದ ಕಾದು, ನಂತರ ಮರಿಯೂ ಸಹ ಅದೇ ಗುಂಡಿಯಿಂದ ನೀರು ಕುಡಿದಿತ್ತು. ಅವುಗಳ ಅಷ್ಟೂ ಕಾರ್ಯ ಕೇವಲ ಹತ್ತು ನಿಮಿಷದಲ್ಲಿ ನಮ್ಮ ಕ್ಯಾಮೆರಾ ಟ್ರಾಪ್‌ನಲ್ಲಿ 346 ಚಿತ್ರಗಳಾಗಿ ದಾಖಲಾಗಿತ್ತು. 

ಆದರೆ ನೀರು ಕುಡಿದು ಮುಗಿಸಿದ ಮರಿಯಾನೆಗೆ ಏನು ಎನ್ನಿಸಿತೋ ತನ್ನ ಹಿಂಬದಿಯನ್ನು ನಮ್ಮ ಕ್ಯಾಮೆರಾ ಟ್ರಾಪ್‌ ಕಡೆಗೆ ತಿರುಗಿಸಿ ಮಲ ವಿಸರ್ಜನೆ ಮಾಡಿತ್ತು. ಅದೂ ಸಹ ನಮ್ಮ ಕ್ಯಾಮೆರಾದಲ್ಲಿ ದಾಖಲಾಗಿದೆ!  ಆನೆಗಳಿಗೆ ನೀರು ಕಂಡರೆ ಇರುವ ಸೆಳೆತ ಮತ್ತು ಬೇಸಿಗೆಯಲ್ಲಿ ಅವುಗಳಿಗಿರುವ ದಾಹದ ಪ್ರಮಾಣ ಅರ್ಥ ಮಾಡಿಕೊಳ್ಳ ಬೇಕಾದರೆ ಬೇಸಿಗೆಗಾಲದಲ್ಲಿ ಕಾಡಿನಲ್ಲಿರುವ ಹೊಂಡ, ಕೆರೆಗಳ ಬಳಿ ಕುಳಿತು ನೋಡಬೇಕು. ಆನೆಗಳ ಗುಂಪು ನೀರಿನ ಹತ್ತಿರ ಬರುತ್ತಿದ್ದಂತೆ ಸಂಭ್ರಮದಿಂದ, ಸಡಗರ, ಉತ್ಸಾಹದಿಂದ ನೀರಿಗೆ ಓಡುವ ಪರಿ ಬಹು ಸುಂದರವಾದ ದೃಶ್ಯ. ನೀರಿಗೆ ಇಳಿದೊಡನೆ ನೀರಿನ ಮೇಲ್ಪ ದರವನ್ನು ಸೂಕ್ಷ್ಮವಾಗಿ ಗ್ರಹಿಸಿ, ಸ್ವತ್ಛವಾಗಿರುವ ನೀರನ್ನು ತಮ್ಮ ಸೊಂಡಿಲಿಗೆ ತುಂಬಿಸಿಕೊಂಡು, ಸೊಂಡಿಲನ್ನು ಬಾಯಿಯೊಳಗಿಟ್ಟು ಪಿಚಕಾರಿಯನ್ನು ಒತ್ತಿ ನೀರನ್ನು ಚಿಮ್ಮಿಸುವ ಹಾಗೆ ಬಾಯಿಯೊಳಗೆ ನೀರನ್ನು ತುಂಬಿಕೊಳ್ಳುವುದನ್ನು ನೋಡು ವುದು ಬಹು ಆಸಕ್ತಿದಾಯಕ. 

ಈ ಪ್ರಾಣಿಗಳಿಗೆ ಆತ್ಮವಿಶ್ವಾಸ ಬರುವುದು ಅವುಗಳ ಗಾತ್ರದಿಂದ. ಅದರ ಗಾತ್ರ, ಅದರ ಬುದ್ಧಿಶಕ್ತಿ, ಸ್ಮರಣಶಕ್ತಿ ಮತ್ತು ಇತರ ಎಲ್ಲಾ ಸ್ವಭಾವಗಳು ಸಾವಿರಾರು ವರ್ಷಗಳ ವಿಕಸನದಿಂದ ರೂಪು ಗೊಂಡಿವೆ. ಆದರೆ ಅವುಗಳ ಪ್ರದೇಶದಲ್ಲಿರುವ ಸಂಪನ್ಮೂಲಗಳನ್ನು ನಾವು ಹಾಳುಗೆಡುವುತ್ತಿದ್ದೇವೆ. ಕಾಡಿನ ಮಧ್ಯದಲ್ಲಿರುವ ನೀರಿನ ಸೆಲೆಗಳನ್ನು ಮುಚ್ಚಿ ಅವುಗಳ ಮೇಲೆ ಹೆದ್ದಾರಿ, ರೈಲ್ವೆ ಹಳಿಗಳನ್ನು ಹಾಕಿ ಪ್ರಾಣಿಗಳಿಗೆ ಏನೂ ತೊಂದರೆ ಆಗುವುದಿಲ್ಲ ವೆಂದು ವಾದಿಸುತ್ತೇವೆ. ಬೇಸಿಗೆಯಲ್ಲಿ ನೆಲದಲ್ಲಿರುವ ನೀರನ್ನು ತನ್ನ ಪದರದಿಂದ ಸಂರಕ್ಷಿಸುವ ಮರಳನ್ನು ತೊರೆ, ಹಳ್ಳಗಳಿಂದ ತೆಗೆದು ನೀರು ಬತ್ತಿ ಹೋಗಿ, ಪ್ರಾಣಿಗಳಿಗೆ ನೀರಿಲ್ಲದ ಹಾಗೆ ಮಾಡುತ್ತೇವೆ. ದುರಾದೃಷ್ಟವಶಾತ್‌ ನಮಗಿರುವ ದುರಾಸೆಯಿಂದ ವನ್ಯಜೀವಿಗಳಿಗಿರುವ ಒಂದೇ ಮನೆಯ ನಾವು ಹಾಳುಗೆಡುವುತ್ತಿದ್ದೇವೆ. ನಿಸರ್ಗ ಎಂತಹ ಅದ್ಭುತ ಶಕ್ತಿಗಳನ್ನು ಪ್ರಾಣಿಗಳಿಗೆ ಕೊಟ್ಟಿದೆ ಯೆಂದರೆ, ಅವು ನಮಗೆ ಎಂದೆಂದಿಗೂ ಸವಾಲೇ. ಆದರೆ ವನ್ಯಜೀವಿಗಳನ್ನು ನಾವು ಮನುಷ್ಯರಿಗೆ ಹೋಲಿಸಿ ಕೊಳ್ಳುತ್ತೇವೆ ಮತ್ತು ನಮ್ಮ ಬೇಕು, ಬೇಡುಗಳನ್ನು ಅವುಗಳಿಗೆ ಸಹ ಅನ್ವಯ ವಾಗುತ್ತದೆಂದು ಊಹಿಸಿಕೊಳ್ಳುತ್ತೇವೆ. ನೀರು ಆಹಾರ ಪಡೆಯಲು ಅವುಗಳಿಗಿರುವ ಕೌತುಕ ಶಕ್ತಿಯನ್ನು ತಿಳಿಯದೆ ಅವುಗಳಿಗೆ ಕೃತಕವಾಗಿ ಸಂಪನ್ಮೂಲ ಒದಗಿಸಲು ಪ್ರಯತ್ನಿಸುತ್ತೇವೆ.

ಚಿತ್ರಗಳು: ಸಂಜಯ್ ಗುಬ್ಬಿ, ಹರೀಶ್‌ ಎನ್‌.ಯಸ್‌.

ಲೇಖನ ಸಂಬಂಧಿ ವಿಡಿಯೋ ನೋಡಲುಈ ಲಿಂಕ್‌ ಟೈಪ್‌ ಮಾಡಿ: bit.ly/2IVM9ti

ಟಾಪ್ ನ್ಯೂಸ್

Deepvali-MNG

Deepavali Dhamakha: ಓದುಗರ ಸಂತೃಪ್ತಿಯಿಂದ ಸಾರ್ಥಕ್ಯದ ಭಾವ: ಡಾ.ಸಂಧ್ಯಾ ಪೈ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Deepvali-MNG

Deepavali Dhamakha: ಓದುಗರ ಸಂತೃಪ್ತಿಯಿಂದ ಸಾರ್ಥಕ್ಯದ ಭಾವ: ಡಾ.ಸಂಧ್ಯಾ ಪೈ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Deepvali-MNG

Deepavali Dhamakha: ಓದುಗರ ಸಂತೃಪ್ತಿಯಿಂದ ಸಾರ್ಥಕ್ಯದ ಭಾವ: ಡಾ.ಸಂಧ್ಯಾ ಪೈ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.