ಸ್ವಸ್ಥ ಸಮಾಜಕ್ಕೆ ಮಹಾಂತಶ್ರೀ ಕೊಡುಗೆ ಅನನ್ಯ
Team Udayavani, May 20, 2018, 10:59 AM IST
ಕಲಬುರಗಿ: ಮದ್ಯಪಾನ, ಧೂಮಪಾನ, ಗುಟಕಾ ಸೇವನೆಯಂತಹ ಮುಂತಾದ ಕೆಟ್ಟ ಚಟಗಳಿಗೆ ದಾಸರಾಗಿ ತಾವು ಹಾಳಾಗುವ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದ ಅಸಂಖ್ಯಾತ ಯುವ ಜನತೆಯ ಚಟ ಬಿಡಿಸಿ, ಅವರ ಬಾಳನ್ನು ಸುಂದರವಾಗಿಸುವ ಜೊತೆಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ ಇಲಕಲ್‌ನ ಪೂಜ್ಯ ಡಾ| ಮಹಾಂತ ಶಿವಯೋಗಿಗಳನ್ನು ಸಮಾಜ ಮರೆಯುವಂತಿಲ್ಲವೆಂದು ಎಚ್.ಬಿ. ಪಾಟೀಲ ಹೇಳಿದರು.
ಚಿತ್ತರಗಿಯ ವಿಜಯಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್‌ನ ಪೀಠಾಧಿಪತಿಗಳಾಗಿದ್ದ ಡಾ| ಮಹಾಂತ
ಶಿವಯೋಗಿಗಳು ಲಿಂಗೈಕ್ಯರಾದ ನಿಮಿತ್ತ ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಜೆಆರ್
ನಗರದ ಬಳಗದ ಗ್ರಂಥಾಲಯದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಗುರು ನಮನ ಸಭೆಯಲ್ಲಿ ಅವರು
ಮಾತನಾಡಿದರು.
ಶ್ರೀಗಳು ಬಸವ ತತ್ವವನ್ನು ಎಲ್ಲೆಡೆ ಪ್ರಸರಿಸಲು ಸಾಕಷ್ಟು ಶ್ರಮಿಸಿದ್ದಾರೆ. ಸರಳ, ಸಜ್ಜನಿಕೆಯ ಮೂರ್ತಿಯಾಗಿದ್ದ
ಅವರು ಒಬ್ಬ ಆದರ್ಶ ಗುರುಗಳು ಹೇಗೆ ಇರಬೇಕೆಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಬಳಗದ ಗೌರವಾಧ್ಯಕ್ಷ ಶಾಂತಪ್ಪ ನರೋಣಾ, ರಾಜಶೇಖರ ಮರಡಿ, ಉಮೇಶ ಪಾಟೀಲ, ಸೂರ್ಯಕಾಂತ ಕೋಬಾಳ, ಅಮಿತ ಕುಲಕರ್ಣಿ, ಸಚಿನ್ ಬತಗುಣಕಿ, ಬಾಬುರಾವ ಪೂಜಾರಿ, ರಮೇಶ ಪಾಟೀಲ, ಶರಣಬಸಪ್ಪ ಮದರಿ, ಶಿವಲಿಂಗಪ್ಪ ಶಿವಣಗಿ, ರಾಮಚಂದ್ರ ಭಜಂತ್ರಿ, ಬಸವರಾಜ ಜಮಾದಾರ, ಮಲ್ಲಿಕಾರ್ಜುನ ಹೊಡಲ್ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.