ಮೂಢನಂಬಿಕೆ ಕಿತ್ತೂಗೆಯುವಲ್ಲಿ ಮಹಾಂತ ಶ್ರೀ ಸೇವೆ ಅನನ್ಯ
Team Udayavani, May 20, 2018, 2:39 PM IST
ಲಿಂಗಸುಗೂರು: ಬಸವತತ್ವ ಸಾರುವ ಮೂಲಕ ಸಮಾಜದಲ್ಲಿ ಆಳವಾಗಿ ಬೇರೂರಿರುವ ಮೂಢನಂಬಿಕೆ, ಕಂದಾಚಾರಗಳನ್ನು ಕಿತ್ತೂಗೆಯುವ ನಿಟ್ಟಿನಲ್ಲಿ ಇಲಕಲ್‌ನ ಡಾ| ಮಹಾಂತ ಶ್ರೀಗಳ ಪರಿಶ್ರಮ ಅನನ್ಯವಾಗಿದೆ ಎಂದು ಲೋಕೋಪಯೋಗಿ ಎಇಇ ಅಶೋಕ ಬರಗುಂಡಿ ಹೇಳಿದರು.
ಇಲಕಲ್‌ನ ಮಹಾಂತ ಜೋಳಿಗೆಯ ಡಾ| ಮಹಾಂತ ಶ್ರೀಗಳು ಲಿಂಗೈಕ್ಯರಾದ ಪ್ರಯುಕ್ತ ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಶನಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಅಜ್ಞಾನವೆಂಬ ಕತ್ತಲಲ್ಲಿರುವ ನಮ್ಮನ್ನು ಮಹಾಂತಪ್ಪಗಳು ಬೆಳಕಿನ ಕಡೆಗೆ ಕರೆದುಕೊಂಡು ಹೋಗಿದ್ದಾರೆ.
ಭಕ್ತರಿಂದ ದುರ್ಗುಣ ಬೇಡುವ ಮೂಲಕ ಅವರ ಬದುಕನ್ನು ಹಸನಾಗಿಸಿದವರು. ಮೂಢನಂಬಿಕೆಯಲ್ಲಿ ತೇಲುತ್ತಿರುವ ಸಮಾಜಕ್ಕೆ ನಿಜಾಚರಣೆಯ ವೈಚಾರಿಕೆಯನ್ನು ಭಕ್ತರ ಅರಿವಿಗೆ ತರುವ ಮೂಲಕ ಇಂದಿನ ಸಮಾಜದಲ್ಲಿ ಹೊಸ ಸಂಸ್ಕೃತಿಯನ್ನೇ ಬಿತ್ತುತ್ತಿದ್ದ ಶ್ರೀಗಳು ನಾಡಿಗೆ ಮಾದರಿಯಾಗಿದ್ದರು. ಪೂಜ್ಯರು ಭೌತಿಕವಾಗಿ ನಮ್ಮಿಂದ ಅಗಲಿದ್ದರೂ, ಮಾನಸಿಕವಾಗಿ ಜೊತೆಯಲ್ಲಿದ್ದಾರೆ. ಅವರು ಹಾಕಿಕೊಟ್ಟ ಆದರ್ಶಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮುಖಂಡರಾದ ಶಿವಾನಂದ ಐದನಾಳ, ವೀರಣ್ಣ ಹುರಕಡ್ಲಿ, ಬಸವರಾಜ ಐದನಾಳ, ಶರಣಪ್ಪ ಸಕ್ರಿ, ಜಂಗಮಮೂರ್ತಿ, ವೀರೇಶ ಚಕ್ರಸಾಲಿ, ಡಾ| ಲತಾ ಹೆಸರೂರು, ವಿಶ್ವನಾಥ ಸಕ್ರಿ, ದೊಡ್ಡಪ್ಪ ಹೆಸರೂರು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.