ಫೈನಲ್‌ನಲ್ಲಿ ಕೊರಿಯಕ್ಕೆ ಶರಣಾದ ಭಾರತ
Team Udayavani, May 21, 2018, 7:00 AM IST
ಡಾಂಗೆ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ವನಿತಾ ಹಾಕಿ ಕೂಟದ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಭಾರತ ವಿಫಲವಾಗಿದೆ. ರವಿವಾರ ನಡೆದ ಫೈನಲ್ ಹೋರಾಟದಲ್ಲಿ ಭಾರತ ವನಿತೆಯರು ಆತಿಥೇಯ ದಕ್ಷಿಣ ಕೊರಿಯಕ್ಕೆ 0-1 ಗೋಲಿನಿಂದ ಸೋಲುವ ಮೂಲಕ ಪ್ರಶಸ್ತಿ ಗೆಲ್ಲದೇ ನಿರಾಶೆ ಅನುಭವಿಸಿದರು.
ಲೀಗ್ ಹಂತದಲ್ಲಿ ಕೊರಿಯ ವಿರುದ್ಧ ಡ್ರಾ ಸಾಧಿಸಿದ್ದ ಭಾರತ ವನಿಇತೆಯರು ಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದರು. ಆದರೆ ಕೊರಿಯ ಅಮೋಘವಾಗಿ ಆಡಿ ಭಾರತಕ್ಕೆ ಗೋಲು ದಾಖಲಿಸುವ ಅವಕಾಶ ನಿರಾಕರಿಸಿತು. 24ನೇ ನಿಮಿಷದಲ್ಲಿ ಫೀಲ್ಡ್ ಗೋಲು ಹೊಡೆಯುವ ಮೂಲಕ ಮುನ್ನಡೆ ಸಾಧಿಸಿದ ಕೊರಿಯ ಅದನ್ನು ಕೊನೆಯ ಹಂತದವರೆಗೂ ಉಳಿಸಿಕೊಳ್ಳಲು ಯಶಸ್ವಿಯಾಯಿತು.
ಪಂದ್ಯದ ಆರಂಭದಲ್ಲಿ ಕೊರಿಯ ಅಮೋಘವಾಗಿ ಆಡಿದ್ದರಿಂದ ಭಾರತದ ರಕ್ಷಣಾ ಆಟಗಾರರು ಒದ್ದಾಡಬೇಕಾಯಿತು. 24ನೇ ನಿಮಿಷದಲ್ಲಿ ಯಂಗ್‌ಸಿಲ್ ಲೀ ಆಕರ್ಷಕ ಗೋಲು ಹೊಡೆದ ಬಳಿಕ ಭಾರತೀಯರೂ ಆಕ್ರಮಣಕಾರಿ ಆಟಕ್ಕೆ ಇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.