ಸಸ್ಯಾಹಾರ ದಿನಕ್ಕೆ ಪ್ರಸ್ತಾವ
Team Udayavani, May 21, 2018, 9:43 AM IST
ಹೊಸದಿಲ್ಲಿ: ಕೇಂದ್ರ ಸರಕಾರ ಮಹಾತ್ಮ ಗಾಂಧಿ ಅವರ 150ನೇ ಹುಟ್ಟಿದ ದಿನದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ರೈಲ್ವೇ ಮಂಡಳಿ ಕೂಡ ಈ ವರ್ಷ ಅ.2ರಂದು ರೈಲು ನಿಲ್ದಾಣದಲ್ಲಿ ಮಾಂಸಾಹಾರ ವಿತರಣೆ ಮಾಡದೇ ಇರುವ ಬಗ್ಗೆ ಯೋಜನೆ ಹಾಕಿಕೊಂಡಿದೆ. ಈ ಮೂಲಕ “ಸಸ್ಯಾಹಾರ ದಿನ’ವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅದನ್ನೇ 2019ರ ಅ.2, 2020ರ ಅ.2 ರಂದೂ ಮುಂದುವರಿಸುವ ಬಗ್ಗೆ ಮಂಡಳಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. “ರಾಷ್ಟ್ರೀಯ ಸ್ವತ್ಛತಾ ದಿನ’ವನ್ನು ಅ.2ರಂದೇ ನಡೆಸಲು ನಿರ್ಧರಿಸಲಾಗಿದೆ.
ಮಹಾತ್ಮ ಗಾಂಧಿ ಅವರು ಸಸ್ಯಾಹಾರವನ್ನೇ ಇಷ್ಟ ಪಡುತ್ತಿದ್ದುದರಿಂದ ರೈಲ್ವೇ ಮಂಡಳಿ ಈ ಬಗ್ಗೆ ಪ್ರಸ್ತಾಪ ಮಾಡಿದೆ. ಇದರ ಜತೆ ಮಹಾತ್ಮಾ ಗಾಂಧಿ ಹೊಂದಿದ್ದ ವಿಶೇಷ ಬಾಂಧವ್ಯದ ಸ್ಥಳಗಳಿಗೆ “ಸ್ವತ್ಛತಾ ಎಕ್ಸ್‌ಪ್ರೆಸ್’ ಗಳನ್ನು ಓಡಿಸಲೂ ರೈಲ್ವೇ ಇಲಾಖೆ ಮುಂದಾಗಿದೆ. ಇನ್ನು ದಂಡಿಯಾತ್ರೆಯ ನೆನಪಿಗಾಗಿ ಸಬರಮತಿಯಿಂದ ರೈಲು
ಗಳಲ್ಲಿ “ಉಪ್ಪಿನ ವಿಶೇಷ ಬೋಗಿ’ಯನ್ನು ಸೇರಿಸಲಿದೆ. ಟಿಕೆಟ್‌ಗಳಲ್ಲಿ ಗಾಂಧೀಜಿಯವರ ಅಳಿಸಲಾ ಗದಂಥ ಚಿತ್ರಗಳನ್ನೂ ಮುದ್ರಿಸಲಿದೆ.
ಈ ಎಲ್ಲಾ ಪ್ರಸ್ತಾವಗಳನ್ನು ಕೇಂದ್ರ ಸಂಸ್ಕೃತಿ ಖಾತೆ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಅದರ ಉಸ್ತುವಾರಿಯಲ್ಲಿಯೇ ಮಹಾತ್ಮ ಗಾಂಧಿಯವರ 150ನೇ ಹುಟ್ಟಿದ ಹಬ್ಬದ ಕಾರ್ಯಕ್ರಮಗಳು ನೆರವೇರಲಿವೆ. ಇದರ ಜತೆಗೆ ವಿಶೇಷ ಲಾಂಛನವನ್ನೂ ಸಿದ್ಧಪಡಿಸಲಾ ಗುತ್ತಿದೆ. ಎಲ್ಲಾ ರೈಲ್ವೇ ವಿಭಾಗೀಯ ಕಚೇರಿಗಳ ಮುಂಭಾಗದಲ್ಲಿ ಗಾಂಧೀಜಿಯವರ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.