ವಾಹನ ಚಾಲನೆಯ ನಿಯಂತ್ರಣಕ್ಕೆ ಫೈಬರ್ ಕೋನ್ಗಳ ಅಳವಡಿಕೆ
Team Udayavani, May 21, 2018, 10:09 AM IST
ಮಹಾನಗರ: ನಗರದಲ್ಲಿ ಸಂಚಾರ ದಟ್ಟಣೆಗೆ ವಾಹನ ಸಂಖ್ಯೆ ಏರಿಕೆಯ ಜತೆಗೆ ವಾಹನ ಚಾಲಕರು/ ಸವಾರರ ಅಡ್ಡಾದಿಡ್ಡಿ ಚಲನೆಯೂ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಗಳ ಚಾಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರವಿವಾರ ನಗರ ಸಂಚಾರಿ ಪೊಲೀ ಸರು ಅಗತ್ಯ ಸ್ಥಳಗಳಲ್ಲಿ ಫೈಬರ್ ಕೋನ್ ಗಳನ್ನು ಅಳವಡಿಸಿದರು.
ಮೇ 18ರಂದು ನಡೆದ ಪೊಲೀಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ವಾಹನಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕೋನ್ಗಳನ್ನು ಅಳವಡಿಸುವ ಸಾರ್ವಜನಿಕರಿಂದ ಬೇಡಿಕೆಗಳು ಕೇಳಿಬಂದಿ ದ್ದವು. ಮುಖ್ಯವಾಗಿ ನಗರದ ಪಾಂಡೇಶ್ವರ ರೈಲ್ವೇಗೇಟ್ ಹಾಗೂ ಬಾವುಟಗುಡ್ಡೆ ಬಸ್ಬೇಗಳಲ್ಲಿ ಕೋನ್ಗಳ ಅಳವಡಿಕೆಗೆ ಒತ್ತಾಯಿಸಿದ್ದರು.
ರಿಫ್ಲೆಕ್ಟರ್ಗಳ ಬಳಕೆ
ಕೆಲವೊಂದು ಪ್ರದೇಶಗಳಲ್ಲಿ ಕೋನ್ ಗಳಿದ್ದರೂ ಅವುಗಳು ಹಳತಾಗಿದ್ದವು. ಇನ್ನು ಕೆಲವು ಪ್ರದೇಶಗಳಲ್ಲಿ ಹೊಸದಾಗಿ ಕೋನ್ ಗಳನ್ನು ಅಳವಡಿಸಲಾಗಿದೆ. ಹೊಸದಾಗಿ ಕಾಮಗಾರಿ ನಡೆದ ಪ್ರದೇಶಗಳಲ್ಲೂ ಕೋನ್ಗಳ ಅಳವಡಿಕೆಯಾಗಿದೆ. ರಾತ್ರಿ ವೇಳೆಯೂ ವಾಹನ ಚಾಲಕರು ಕೋನ್ ಗಳನ್ನು ಗುರುತಿಸುವ ನಿಟ್ಟಿನಲ್ಲಿ ರಿಫ್ಲೆಕ್ಟರ್ ಗಳೂ ಇವೆ.
ಅಡ್ಡಾದಿಡ್ಡಿ ವಾಹನ ನಿಲುಗಡೆ
ಪಾಂಡೇಶ್ವರ ರೈಲ್ವೇಗೇಟ್ ಬಳಿ ಎರಡೂ ಬದಿಗಳಲ್ಲೂ ಕೋನ್ಗಳ ಅಳವಡಿಕೆಯಾಗಿದೆ. ಇಲ್ಲಿ ರೈಲು ಸಾಗುವ ಸಂದರ್ಭದಲ್ಲಿ ರೈಲ್ವೇ ಗೇಟ್ ಹಾಕಿ ವಾಹನ ಸಂಚಾರ ನಿಲ್ಲಿಸಲಾಗುತ್ತದೆ. ಆಗ ವಾಹನ ಚಾಲಕರು ವಿರುದ್ಧ ದಿಕ್ಕಿನಲ್ಲಿ ವಾಹನ ಸಾಗುವ ರಸ್ತೆಯಲ್ಲೂ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಾರೆ. ಗೇಟ್ ತೆಗೆದ ತತ್ಕ್ಷಣ ಎಲ್ಲ ವಾಹನಗಳು ಏಕಕಾಲದಲ್ಲೇ ನುಗ್ಗುವುದರಿಂದ ಅನಗತ್ಯ ಟ್ರಾಫಿಕ್ ಜಾಮ್ ಕೂಡ ಸಂಭವಿಸುತ್ತದೆ.
ಹೀಗಾಗಿ ಕಳೆದ ಹಲವು ಸಮಯಗಳಿಂದ ಇಲ್ಲಿ ಬ್ಯಾರಿಕೇಡ್ ಗಳನ್ನು ಇಡುವಂತೆ ಬೇಡಿಕೆಗಳು ಕೇಳಿಬಂದಿತ್ತು. ಆದರೆ ಬ್ಯಾರಿಕೇಡ್ ಗಳಿಗೆ ಹೆಚ್ಚಿನ ಸ್ಥಳಾವಕಾಶ ಬೇಕಿದ್ದು, ಅದು ಸಂಚಾರಕ್ಕೂ ತೊಂದರೆಯಾಗುವ ಹಿನ್ನೆಲೆಯಲ್ಲಿ ಪ್ರಸ್ತುತ ಕೋನ್ಗಳನ್ನು ಅಳವಡಿಸಲಾಗಿದೆ.
ಇದರ ಜತೆಗೆ ಇತರ ಕಡೆಗಳಲ್ಲಿ ಪ್ರಯಾಣಿಕರನ್ನು ಪಿಕ್ಅಪ್ ಮಾಡುವ ಬಸ್ಗಳು ನಿಗದಿತ ಬಸ್ ಬೇನಲ್ಲೇ ನಿಲ್ಲಿಸುವಂತೆಯೂ ಕೋನ್ ಗಳ ಅಳವಡಿಕೆಯಾಗಿದೆ. ಡಿವೈಡರ್ ಗಳು, ಪಾದಚಾರಿಗಳಿಗೆ ನಡೆದಾಡಲು ಅನುಕೂಲವಾಗುವ ನಿಟ್ಟಿನಲ್ಲೂ ಕೋನ್ ಅಳವಡಿಕೆಯಾಗಿದೆ.
ವಿವಿಧೆಡೆ ಅಳವಡಿಕೆ
ರವಿವಾರ ಪೊಲೀಸರು ನಗರದ ಹಂಪನಕಟ್ಟೆ, ಆರ್ಟಿಒ ಕಚೇರಿ ಬಳಿ, ಪಾಂಡೇಶ್ವರ ರೈಲ್ವೇ ಗೇಟ್, ಕಾಶಿಯಾ ರಸ್ತೆ, ಜಿಎಚ್ಎಸ್ ರಸ್ತೆ, ಕರಾವಳಿ ವೃತ್ತ ಮೊದಲಾದ ಪ್ರದೇಶಗಳಲ್ಲಿ ಫೈಬರ್ ಕೋನ್ ಗಳನ್ನು ಅಳವಡಿಸಿದ್ದಾರೆ. ರವಿವಾರ ನಗರದಲ್ಲಿ ವಾಹನಗಳ ಸಂಚಾರ ಕಡಿಮೆ ಇರುವ ಹಿನ್ನೆಲೆಯಲ್ಲಿ ಕೋನ್ಗಳ ಅಳವಡಿಕೆಗೆ ಅನುಕೂಲವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.