ಸಿದ್ಧಗೊಂಡ ಸಂಪರ್ಕ ಸೇತುವೆ
Team Udayavani, May 21, 2018, 11:30 AM IST
ಬೆಂಗಳೂರು: ಕೊನೆಗೂ ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು “ನಮ್ಮ ಮೆಟ್ರೋ’ ನಡುವೆ ಸಂಪರ್ಕ ಸೇತುವೆ ಸಿದ್ಧಗೊಂಡಿದೆ. ನಗರದ ಹೃದಯಭಾಗಕ್ಕೆ ಮೆಟ್ರೋ ಬಂದು ಎರಡು ವರ್ಷಗಳ ನಂತರ ಪಾದಚಾರಿ ಮಾರ್ಗ ಬಹುತೇಕ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಸೇವೆಗೆ ಮುಕ್ತಗೊಳ್ಳಲಿದೆ.
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಡುವೆ ಇರುವ ಎತ್ತರಿಸಿದ ಪಾದಚಾರಿ ಮಾರ್ಗದಿಂದ ಮೆಟ್ರೋ ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸಬೇಕು ಎನ್ನುವುದು ಪ್ರಯಾಣಿಕರ ಬಹುದಿನಗಳ ಬೇಡಿಕೆ ಆಗಿತ್ತು. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸ್ಕೈವಾಕ್‌ನಿಂದ ಸುಮಾರು 30 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ಈ ಮೊದಲು ಸುತ್ತು ಹಾಕಿ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ತಲುಪಬೇಕಿತ್ತು. ನೂತನ ಸ್ಕೈವಾಕ್‌ನಿಂದ ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ನಡುವಿನ ಅಂತರ ಹೆಚ್ಚು-ಕಡಿಮೆ 600ರಿಂದ 800 ಮೀ.ನಷ್ಟು ಕಡಿಮೆ ಆಗಲಿದೆ. ಈ ಮೂಲಕ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸಿದಂತಾಗಿದೆ.
ರೈಲು ನಿಲ್ದಾಣಕ್ಕೆ ತೆರಳುವವರು ಈಗಾಗಲೇ ನಿರ್ಮಾಣಗೊಂಡ ಅಂಡರ್‌ಪಾಸ್ ಮೂಲಕ ಹೋಗಬಹುದು. ಆದರೆ, ಸ್ಕೈವಾಕ್ ಮತ್ತು ಅಂಡರ್‌ಪಾಸ್‌ಗಳಲ್ಲಿ ಮುಂದಿನ ದಿನಗಳಲ್ಲಿ ಅಕ್ರಮ ಚಟುವಟಿಕೆ, ಫುಟ್‌ಪಾತ್ ವ್ಯಾಪಾರಿಗಳ ಹಾವಳಿ ಆಗದಂತೆ ನೋಡಿಕೊಳ್ಳಬೇಕಿದೆ. ಇಲ್ಲದಿದ್ದರೆ, ಇದು ಪ್ರಯಾಣಿಕರಿಗೆ ಮತ್ತೂಂದು ಕಿರಿಕಿರಿ ಆಗಲಿದೆ ಎಂದು ಪ್ರಜಾ ಸಂಸ್ಥೆಯ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.
ನಿತ್ಯ 6 ಲಕ್ಷ ಜನ ಸಂಚಾರ!: ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲ್ವೆ ಪ್ರಯಾಣಿಕರು ಸೇರಿದಂತೆ ಪ್ರತಿ ದಿನ ಮೆಜೆಸ್ಟಿಕ್‌ಗೆ ಬಂದು-ಹೋಗುವವರ ಸಂಖ್ಯೆ 8.5ರಿಂದ 9 ಲಕ್ಷ. ಇದರಲ್ಲಿ ಸಿಂಹಪಾಲು ಬಿಎಂಟಿಸಿಯದ್ದು. ಇಲ್ಲಿ ನಿತ್ಯ 6ರಿಂದ 6.5 ಲಕ್ಷ ಜನ ಬಂದು-ಹೋಗುತ್ತಾರೆ. ಇನ್ನು ಪೂರ್ವ-ಪಶ್ಚಿಮ ಕಾರಿಡಾರ್‌ನ ಮೆಟ್ರೋ ರೈಲಿನಲ್ಲಿ ನಿತ್ಯ 2 ಲಕ್ಷ ಜನ ಪ್ರಯಾಣಿಸುತ್ತಾರೆ. ಇದರಲ್ಲಿ ಬಹುತೇಕ ಪ್ರಯಾಣಿಕರು ಈ ಮೂರೂ ಮೂಲಗಳಿಂದಲೇ ಬರುತ್ತಾರೆ.
ಬಿಎಂಟಿಸಿ ಬಸ್ ನಿಲ್ದಾಣದ ಯಾವುದೇ ಮೂಲೆಯಿಂದ ಎತ್ತರಿಸಿದ ಸೇತುವೆ ಏರಿ, 20ನೇ ಪ್ಲಾಟ್ ಫಾರಂ ಎದುರು ಇಳಿಯಬೇಕು. ಅಲ್ಲಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ಗಮಿಸಲು ಇರುವ ಎರಡೂ ರಸ್ತೆಗಳನ್ನು ದಾಟಿ, ಸಾರ್ವಜನಿಕ ಶೌಚಾಲಯದ ಮುಂದೆಹಾದು ಮೆಟ್ರೋ ನಿಲ್ದಾಣ ತಲುಪಬೇಕು. ಇನ್ನು ಉತ್ತರ ಕರ್ನಾಟಕದ ಕಡೆಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಂದಿಳಿಯುವ ಪ್ರಯಾಣಿಕರು ಕೂಡ ಮೆಟ್ರೋ ನಿಲ್ದಾಣಕ್ಕೆ ಬರಬೇಕಾದರೆ ಇದೇ ರೀತಿಯ ಸಾಹಸ ಮಾಡಬೇಕಾದ ಸ್ಥಿತಿ ಈಗ ಇದೆ. ನೂತನ ಸ್ಕೈವಾಕ್‌ನಿಂದ ಈ ಸಮಸ್ಯೆ ತಪ್ಪಲಿದೆ.
ಆದರೆ, ಇನ್ನೂ ಸ್ಕೈವಾಕ್‌ನಲ್ಲಿ ಪ್ರಯಾಣಿಕರಿಗೆ ಬಿಸಿಲು, ಮಳೆ ರಕ್ಷಣೆಗಾಗಿ ಶೆಲ್ಟರ್ ಅಳವಡಿಸಬೇಕು. ಬೀದಿ ದೀಪಗಳ ಅಳವಡಿಕೆ ಕೆಲಸ ಬಾಕಿ ಇದೆ. ಮೆಟ್ರೋ ನಿಲ್ದಾಣಕ್ಕೆ ತೆರಳಲು ಸೂಕ್ತ ಸೂಚನಾ ಫಲಕಗಳ ಅಳವಡಿಕೆಯೂ ಆಗಬೇಕಿದೆ. ಬಿಎಂಆರ್‌ಸಿ ಈ ಸ್ಕೈವಾಕ್ ನಿರ್ಮಾಣ ಮಾಡಿದೆ.
ಇದ್ದೂ ಇಲ್ಲದಂತಾದ ಸುರಂಗ ಮಾರ್ಗ: ಚಿಕ್ಕ ಲಾಲ್‌ಬಾಗ್‌ನಿಂದ ಗೋಪಾಲಪುರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಸುರಂಗ ಮಾರ್ಗದ ಪ್ರವೇಶದ್ವಾರ ಬಹುತೇಕ ಮುಚ್ಚಿರುತ್ತದೆ. ಹಾಗಾಗಿ, ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಫೆಬ್ರವರಿಯಲ್ಲೇ ಈ ಅಂಡರ್‌ಪಾಸ್ ಸೇವೆಗೆ ಮುಕ್ತಗೊಂಡಿದ್ದು, ನೇರವಾಗಿ ಗೋಪಾಲಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಆ ಭಾಗದಲ್ಲಿರುವ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ಯಾವಾಗಲೂ ಬೀಗ ಹಾಕಿರುತ್ತದೆ. ಹಾಗಾಗಿ, ಇದ್ದೂ ಇಲ್ಲದಂತಾಗಿದೆ. ಈ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.