ಓಡು ಬಾರಾ ಬೆಂಗಳೂರ ಮ್ಯಾರಥಾನ್
Team Udayavani, May 21, 2018, 11:31 AM IST
ವಿಶ್ವದ ಪ್ರಮುಖ ನಗರಗಳಲ್ಲಿ ಹವಾಮಾನಕ್ಕೆ ಅನುಗುಣವಾಗಿ ವರ್ಷಕ್ಕೆ ಒಂದು ಸಲ ಮ್ಯಾರಥಾನ್ ಆಯೋಜಿಸಲಾಗುತ್ತದೆ. ಇದಕ್ಕೆ ನಮ್ಮ ಬೆಂಗಳೂರು ಮಹಾನಗರಿ ಕೂಡ ಹೊರತಾಗಿಲ್ಲ. ಮೋಜಿಗಾಗಿ ನಡೆಯುವ ಮ್ಯಾರಥಾನ್‌ಗಳ ಹಿಂದೆ ಸಾಮಾಜಿಕ ಕಳಕಳಿಯೂ ಇದೆ. ಜತೆಗೆ ವೃತ್ತಿಪರ ಸ್ಪರ್ಧೆಯೂ ಕೂಡ. ಒಟ್ಟಾರೆ ನಮ್ಮ ಬೆಂಗಳೂರು ಮಹಾನಗರಿಯ ಸೊಬಗಿನ ಸುಂದರ ಮೋಹಕ ವಿಶಿಷ್ಟ ಆಧುನಿಕ ಮ್ಯಾರಥಾನ್‌ಗಳು ನೋಡುಗರ ಕಣ್ಮನ ಸೆಳೆಯುತ್ತದೆ. ಇಂತಹ ಓಟಗಳಲ್ಲಿ ಆಯ್ದ ಕೆಲವು ಕೂಟಗಳ ಬಗ್ಗೆ ಪರಿಚಯ ಮಾಡಿಕೊಡುವ ಲೇಖನ ಇಲ್ಲಿದೆ ಓದಿ.
ಮಹಾನಗರಿಯ ಪ್ರಮುಖ ಓಟಗಳು: ಉದ್ಯಾನನಗರಿಯ ಬೆಂಗಳೂರಿಗೆ ಪ್ರಮುಖ ಮ್ಯಾರಥಾನ್‌ಗಳೆಂದರೆ ಶ್ರೀರಾಮ್ ಪ್ರಾಪರ್ಟಿಸ್ ಬೆಂಗಳೂರು ಮ್ಯಾರಥಾನ್, ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್. ಇವೆರಡು ದೊಡ್ಡ ಮಟ್ಟದಲ್ಲಿ ನಡೆಯುವ ಕೂಟಗಳು. ಮಧ್ಯರಾತ್ರೀಲಿ ನಡೆಯುವ ಮಿಡ್‌ನೈಟ್ ಮ್ಯಾರಥಾನ್ ಜನರ ಮೆಚ್ಚುಗೆಗಳಿಸಿದೆ. ಉಳಿದಂತೆ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಪಿಂಕಾಥಾನ್, ಮಳೆಗಾಲದ ಹನಿಗಳ ಜತೆಗೆ ನಡೆಯುವ ಮಾನ್ಸೂನ್ ಮ್ಯಾರಥಾನ್, ಮ್ಯೂಸಿಕ್ ರನ್. ಅರ್ಬನ್ ಫಿಟೆ°ಸ್ ಪ್ರಾಯೋಜಿತ ದಿ ರನ್, ಕಾವೇರೊ ಟ್ರೆಯಲ್ ಮ್ಯಾರಥಾನ್, ಆಕ್ಸಪಾಮ್ ಟ್ರೆಯಲ್‌ವಾಲ್ಕರ್ ಹಾಗೂ 10ಕೆ ಇನ್‌ಟೆನ್ಸಿಟಿ ರನ್ ಹೀಗೆ ವಿವಿಧ ಅರೆಕಾಲಿಕ ಮಜಾ ರನ್‌ಗಳು ವರ್ಷಕ್ಕೊಂದರಂತೆ ನಡೆಯುತ್ತಲೇ ಇರುತ್ತವೆ.
ಯಾರಿಗಾಗಿ ಮ್ಯಾರಥಾನ್?: ಐಟಿ (ಇನ್‌ಪಾರ್ಮೆಷನ್ ಟೆಕ್ನಾಲಜಿ), ಬಿಟಿ (ಬಯೋ ಟೆಕ್ನಾಲಜಿ), ಕಾರ್ಪೊàರೇಟ್ ಕಂಪನಿಗಳ ಉದ್ಯೋಗಿಗಳೇ ಹೆಚ್ಚಾಗಿ ಈ ಮ್ಯಾರಥಾನ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ. ಇವರಿಗಾಗಿಯೇ ವಾರದ ಕೊನೆಯ 2 ದಿನಗಳಲ್ಲಿ ಹೆಚ್ಚಾಗಿ ರೇಸ್ ನಿಗದಿಪಡಿಸಲಾಗುತ್ತದೆ. ಇವರೆಲ್ಲರೂ ಹವ್ಯಾಸಿ ಓಟಗಾರರು. ಆರೋಗ್ಯಕ್ಕಾಗಿ ಓಟ ಇವರೆಲ್ಲರ ಧ್ಯೇಯ. ಇನ್ನು ದೊಡ್ಡ ಮಟ್ಟದ ಮ್ಯಾರಥಾನ್‌ಗಳಲ್ಲಿ ಮುಕ್ತ (ಅಂತಾರಾಷ್ಟ್ರೀಯ ಓಟಗಾರರೂ ಸೇರಿ), ದೇಶಿಯ ಹಾಗೂ ಸ್ಥಳೀಯ ವಿಭಾಗಗಳಲ್ಲಿ ಸಂಘಟಕರು ಓಟ ಆಯೋಜಿಸುತ್ತಾರೆ.
ಗಮನ ಸೆಳಿತಾರೇ ವೃತ್ತಿಪರ ಸ್ಪರ್ಧಿಗಳು: ಒಲಿಂಪಿಕ್ಸ್, ವಿಶ್ವ ಕೂಟಗಳಲ್ಲಿ ಭಾಗವಹಿಸಿದ ಓಟಗಾರರು ಪಾಲ್ಗೊಳ್ಳುತ್ತಾರೆ. ಉದಾಹರಣೆಗೆ ಬೆಂಗಳೂರು ವಿಶ್ವ 10ಕೆ ನಲ್ಲಿ ಕೀನ್ಯಾದ ಅಲೆಕ್ಸ್ ಈ ವರ್ಷ ಪುರುಷರ ವಿಭಾಗದಲ್ಲಿ ಚಾಂಪಿಯನ್. 2015 ಹಾಗೂ 2016ರಲ್ಲಿ ಇಂಥಿಯೋಪಿಯಾದ ಗ್ರೀಮಿವ್ ಚಾಂಪಿಯನ್. 2014ರಲ್ಲಿ ಕೀನ್ಯಾದ ಕಿಪ್ಸಾಂಗ್ ಗೆದ್ದಿದ್ದರು. ಹೀಗೆಯೆ ಶ್ರೀರಾಮ್ ಪ್ರಾಪರ್ಟಿಸ್ ಬೆಂಗಳೂರು ಮ್ಯಾರಥಾನ್, ಮಿಡ್‌ನೈಟ್ ಮ್ಯಾರಥಾನ್‌ಗಳಲ್ಲಿ ವಿದೇಶಿ ಸ್ಪರ್ಧಿಗಳು ಭಾಗವಹಿಸುತ್ತಾರೆ. ಗಮನಿಸಬೇಕಾದ ಅಂಶವೆನೆಂದರೆ ವೃತ್ತಿಪರ ಓಟಗಾರರಿಗೂ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ.
ಮ್ಯಾರಥಾನ್ ಹಿಂದಿನ ಉದ್ದೇಶವೇನು?: ಪ್ರತಿಯೊಂದು ಮ್ಯಾರಥಾನ್‌ನ ಆಯೋಜಕರ ಹಿಂದೆ ಒಂದು ಸಾಮಾಜಿಕ ಕಳಕಳಿ ಇದೆ. ಆರೋಗ್ಯ, ಶಿಕ್ಷಣ, ಸಾಮಾಜಿಕ ಕಲ್ಯಾಣ, ಹಾಗೂ ಗ್ರಾಮೀಣ ಯೋಜನೆಗಳಿಗೆ ಆರ್ಥಿಕ ನೆರವು ಉದ್ದೇಶವನ್ನು ಸಂಘಟಕರು ಹೊಂದಿರುತ್ತಾರೆ. ಬಂದ ಹಣದಲ್ಲಿ ವಿಜೇತರಿಗೆ ನೀಡುವ ಪ್ರಶಸ್ತಿ ಮೊತ್ತ, ಪದಕ ಹೊರತುಪಡಿಸಿದಂತೆ ಉಳಿದೆಲ್ಲ ಹಣವನ್ನು ಚಾರಿಟಿಗಳಿಗೆ ನೀಡುತ್ತದೆ, ಅಲ್ಲಿಂದ ಅದು ತಲುಪಬೇಕಾದವರಿಗೆ ತಲುಪುತ್ತದೆ.
ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್: ವಿಶ್ವದ ಪ್ರಮುಖ ಓಟಗಾರರು ಭಾಗವಹಿಸುತ್ತಾರೆ. ಟಿಸಿಎಸ್ ವಿವಿಧ ನಗರಗಳಲ್ಲಿ 10ಕೆ ಆಯೋಜಿಸುತ್ತದೆ. ಅಂತೆಯೇ ಬೆಂಗಳೂರಿನಲ್ಲೂ ಅದು ವರ್ಷಕ್ಕೊಮ್ಮೆ ಸ್ಪರ್ಧೆ ಆಯೋಜಿಸಿ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳನ್ನು ಆಕರ್ಷಿಸುತ್ತದೆ.
ಮುಂದಿನ ಕೂಟ: ಮೇ-2018ಕ್ಕೆ (ಅ—ಕೃತ ದಿನಾಂಕ ಪ್ರಕಟವಾಗಿಲ್ಲ)
ಆರಂಭ ಸ್ಥಳ: ಶ್ರೀಕಂಠೀರವ ಕ್ರೀಡಾಂಗಣ
ಆವೃತ್ತಿ: 10 ಆವೃತ್ತಿ ಮುಗಿದಿದೆ.
ಪ್ರಾಯೋಜಕತ್ವ: ಟಾಟ ಕನ್ಸೆಲ್ಟೆನ್ಸಿ
ಆಯೋಜಕರು: ಪೊಕಾಮ್ ಇಂಟರ್‌ನ್ಯಾಷನಲ್
ರಾಯಭಾರಿ: ಮೈಕ್ ಪೋವೆಲ್, ಅಮೆರಿಕ ಮಾಜಿ ಅಥ್ಲೀಟ್
ಒಟ್ಟು ಸ್ಪರ್ಧಿಗಳು: 25 ಸಾವಿರ
2017ರಲ್ಲಿ ಸಂಗ್ರಹಗೊಂಡ ಹಣ: 7.55 ಕೋಟಿ ರೂ.
ರೇಸ್ ವಿಭಾಗಗಳು: ವಿಶ್ವ 10ಕೆ (ಅಂ.ರಾ ಮತ್ತು ದೇಶಿಯ ಅಥ್ಲೀಟ್‌ಗಳಿಗಾಗಿ), ಓಪನ್ 10ಕೆ (ಅಮೆಚೂರ್ ರನ್ನರ್ಗಳಿಗೆ), 5.7ಕೆ ಮಜಾ ರನ್, 4.2 ಸೀನಿಯರ್ ಸಿಟಿಜನ್ ರನ್ ಹಾಗೂ 4.2 ಕಿ.ಮೀ. ಅಂಗವಿಕಲರಿಗಾಗಿ ಓಟ, 10 ಕಿ.ಮೀ. ಕಾರ್ಪೊರೇಟ್ ಚಾಂಪಿಯನ್ಸ್ ವಿಭಾಗ.
ಶ್ರೀರಾಮ್ ಪ್ರಾಪರ್ಟಿಸ್ ಬೆಂಗಳೂರು ಮ್ಯಾರಥಾನ್: ವಿಶ್ವ 10ಕೆ ಆದ ಬಳಿಕ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ದೊಡ್ಡ ಮ್ಯಾರಥಾನ್. ದೇಶ-ವಿದೇಶದ ಓಟಗಾರರಲ್ಲದೆ ಹವ್ಯಾಸಿ ಓಟಗಾರರೂ ಇಲ್ಲಿ ಪಾಲ್ಗೊಳ್ಳುತ್ತಾರೆ.
ಮುಂದಿನ ಕೂಟ: ಅ-2018ಕ್ಕೆ (ಅಧಿಕೃತ ದಿನಾಂಕ ಪ್ರಕಟವಾಗಿಲ್ಲ)
ಆರಂಭ ಸ್ಥಳ: ಶ್ರೀಕಂಠೀರವ ಕ್ರೀಡಾಂಗಣ
ಆವೃತ್ತಿ: 4 ಆವೃತ್ತಿ ಪೂರ್ಣ
ಪ್ರಾಯೋಜಕತ್ವ: ಎನ್‌ಇಬಿ ನ್ಪೋರ್ಟ್ಸ್
ರಾಯಭಾರಿ: ರೀತ್ ಅಬ್ರಾಹಂ, ಮಾಜಿ ಅಥ್ಲೀಟ್
ಒಟ್ಟು ಸ್ಪರ್ಧಿಗಳು: 15 ಸಾವಿರಕ್ಕೂ ಅಧಕ
2017ರಲ್ಲಿ ಸಂಗ್ರಹಗೊಂಡ ಹಣ: ಅಂದಾಜು 5 ಕೋಟಿ ರೂ.
ರೇಸ್ ವಿಭಾಗಗಳು: ಪುಲ್ ಮ್ಯಾರಥಾನ್ (ಪುರುಷರ ಹಾಗೂ ಮಹಿಳಾ ವಿಭಾಗ), ಹಾಪ್ ಮ್ಯಾರಥಾನ್ (ಪುರುಷರ ಹಾಗೂ ಮಹಿಳಾ ವಿಭಾಗ).
ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ಮಧ್ಯರಾತ್ರಿ ನಡೆಯುವ ಈ ಓಟ ನೋಡುವುದೇ ಕಣ್ಣಿಗಾನಂದ. ಇತರೆ ಮ್ಯಾರಥಾನ್‌ಗಳಿಗೆ ಹೋಲಿಸಿದರೆ ಇದು ಸ್ವಲ್ಪ ಭಿನ್ನ. ಕೂಟದ ಸ್ಪರ್ಧಿಗಳಿಗೆ ಬೆಂಗಳೂರು ಟ್ರ್ಯಾಫಿಕ್ ಕಿರಿಕಿರಿ ಇಲ್ಲ. ಜತೆಗೆ ಸಾರ್ವಜನಿಕರಿಗೂ ಯಾವುದೇ ತೊಂದರೆ ಆಗದಂತೆ ರೇಸ್ ಆಯೋಜಿಸುವ ಸಂಘಟಕರು ಫಿಟೆ°ಸ್ ಧ್ಯೇಯವನ್ನು ಹೊತ್ತಿದ್ದಾರೆ.
ಮುಂದಿನ ಕೂಟ: ಡಿ-2018ಕ್ಕೆ (ಅ—ಕೃತ ದಿನಾಂಕ ಪ್ರಕಟವಾಗಿಲ್ಲ)
ಆರಂಭ ಸ್ಥಳ: ಕೆಪಿಟಿಓ, ವೈಟ್‌ಫೀಲ್ಡ್
ಆವೃತ್ತಿ: 11 ಆವೃತ್ತಿ ಪೂರ್ಣ
ಆಯೋಜಕರು: ರೋಟರಿ ಬೆಂಗಳೂರು ಐಟಿ ಕಾರಿಡರ್
ರಾಯಭಾರಿ: ಮೇರಿ ಕೋಮ್
ಒಟ್ಟು ಸ್ಪರ್ಧಿಗಳು: 18 ಸಾವಿರಕ್ಕೂ ಹೆಚ್ಚು
ಒಟ್ಟಾರೆ ಬಹುಮಾನ: 12 ಲಕ್ಷ ರೂ.
ರೇಸ್ ವಿಭಾಗಗಳು: ಪುಲ್ ಮ್ಯಾರಥಾನ್ (ಪುರುಷರ ವಿಭಾಗ-ಮಹಿಳಾ ವಿಭಾಗ), ಆರ್‌ಬಿಎಲ್ (ಹಾಪ್ ಮ್ಯಾರಥಾನ್, ಪುರುಷರ ವಿಭಾಗ, ಮಹಿಳಾ ವಿಭಾಗ), 10ಕೆ ರನ್ (ಪುರುಷರ ವಿಭಾಗ), ಓಪನ್ 10ಕೆ (ಮಹಿಳಾ ವಿಭಾಗ)
ಮಾನ್ಸೂನ್ ಮ್ಯಾರಥಾನ್: ಯಶಸ್ವಿ ಮೂರು ಆವೃತ್ತಿ ಕಂಡಿದೆ. ಮಳೆಗಾಲದ ಚುಮುಚುಮು ಚಳಿಗೆ ಕೂಟ ಆಯೋಜಿಸಲಾಗುತ್ತದೆ. ಮಳೆಯನ್ನೂ ಲೆಕ್ಕಿಸದೇ ಇಲ್ಲಿ ಸ್ಪರ್ಧಿಗಳು ಪಾಲ್ಗೊಳ್ಳುವರು.
ಮುಂದಿನ ಕೂಟ: ಆಗಸ್ಟ್-2018ಕ್ಕೆ (ಅ—ಕೃತ ದಿನಾಂಕ ಪ್ರಕಟವಾಗಿಲ್ಲ)
ಆರಂಭ ಸ್ಥಳ: ವೈಟ್‌ಫೀಲ್ಡ್
ಆವೃತ್ತಿ: 3 ಆವೃತ್ತಿ ಮುಗಿದಿದೆ.
ಪ್ರಾಯೋಜಕತ್ವ: ಐಬಿಎಂ
ಆಯೋಜಕರು: ಮ್ಯಾಕ್ಸ್‌ಮೈಸ್ ಮೀಡಿಯಾ
ರಾಯಭಾರಿ: ಮಿಲ್ಕಾ ಸಿಂಗ್, ಮಾಜಿ ಅಥ್ಲೀಟ್
ಒಟ್ಟು ಸ್ಪರ್ಧಿಗಳು: 10 ಸಾವಿರ
ರೇಸ್ ವಿಧಾನ: 21ಕೆ (ಪುರುಷರ ವಿಭಾಗ ಹಾಗೂ ಮಹಿಳಾ ವಿಭಾಗ), 10ಕೆ (ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗ), 5ಕೆ (ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗ).
ಬೆಂಗಳೂರು ಪಿಂಕಥಾನ್: ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿಗಾಗಿ ನಡೆಯುವ ಮ್ಯಾರಥಾನ್. ವರ್ಷಕ್ಕೆ ಒಂದು ಸಲ ಬೆಂಗಳೂರಿನಲ್ಲಿ ನಡೆಯುತ್ತದೆ. ವಿಶೇಷವೆನೆಂದರೆ ಇಲ್ಲಿ ಪ್ರಶಸ್ತಿ ಮೊತ್ತ ಇರುವುದಿಲ್ಲ. ಒಟ್ಟಾಗಿ ಓಡುವುದು ಅರಿವು ಮೂಡಿಸುವುದು ಇಲ್ಲಿನ ಪ್ರಮುಖ ಉದ್ದೇಶ.
9 ನಗರದಲ್ಲಿ ಪಿಂಕಥಾನ್: ಬೆಂಗಳೂರು, ಅಹಮದಾಭಾದ್, ಹೈದರಾಭಾದ್, ಕೋಲ್ಕತಾ, ಚೆನ್ನೆç, ದಿಲ್ಲಿ, ಗುವಾಹಟಿ, ಪುಣೆ, ಮುಂಬೈನಲ್ಲಿ ಪಿಂಕಥಾನ್ ಆಯೋಜಿಸಲಾಗುತ್ತದೆ.
ಆಯೋಜಕರು: ಮಿಲಿಂದ್ ಸೋಮನ್, ನಟ-ನಿರ್ಮಾಪಕ
ಬೆಂಗಳೂರಲ್ಲೇ ಮ್ಯಾರಥಾನ್ ಆಯೋಜನೆ ಏಕೆ?: ಇತರೆ ನಗರಕ್ಕೆ ಹೋಲಿಸಿದರೆ ಬೆಂಗಳೂರು ಹವಾಮಾನ ಹೆಚ್ಚು ಪೂರಕವಾಗಿದೆ. ಮ್ಯಾರಥಾನ್ ಓಡುವಂತೆ ಪ್ರೇರಣೆ ನೀಡುತ್ತದೆ. ಇದಕ್ಕೆಲ್ಲ ಕಾರಣ ಇಲ್ಲಿನ ಹಸಿರು ಮರಗಳು. ಇದನ್ನು ಮುಂದಿನ ಜನಾಂಗಕ್ಕೆ ಉಳಿಸಬೇಕು ಬೆಳಸಬೇಕು ಎನ್ನುವ ಧ್ಯೇಯಗಳಿಂದ ಕೆಲವು ಮ್ಯಾರಥಾನ್‌ಗಳು ಆಯೋಜನೆಗೊಳ್ಳುತ್ತದೆ. ಇನ್ನು ಕೆಲವು ಮ್ಯಾರಥಾನ್‌ಗಳು ನಾಡು ನುಡಿ ಸಂಸ್ಕೃತಿ ಉಳಿವಿಗಾಗಿ ಆಯೋಜಿಸಲಾಗುತ್ತಿದೆ.
ಮ್ಯಾರಥಾನ್ ಸ್ವಾರಸ್ಯ
ಅಯ್ಯಯ್ಯೋ.. ನಾಯಿ ಅಟ್ಟಾಡಿಸ್ತಿದೆ..!: ಕಳೆದ ವರ್ಷ ವಿಶ್ವ 10ಕೆ ಆಗಿದ್ದಾಗ ಹೀಗೊಂದು ಘಟನೆ ನಡೆಯಿತು. ಅಗ್ರ ತಾರೆಯಾಗಿ ಹೊರಹೊಮ್ಮಬೇಕಿದ್ದ ಇಥಿಯೋಪಿಯಾದ ತಾರೆ ಮೌಲೆ ವಾಸಿಹುನ್ ಒಂದು ನಾಯಿಯಿಂದಾಗಿ ಮೊದಲ ಸ್ಥಾನ ತಪ್ಪಿ ಹೋಗಿತ್ತು.
ಏನಿದು ಘಟನೆ?: ವಿಧಾನ ಸೌದದ ಬಳಿ ನಾಯಿಯೊಂದು ಇವರು ಓಡುತ್ತಿರುವುದನ್ನು ನೋಡಿ ಹಿಂದೆಯೇ ಓಡಿ ಬಂತು, ಇವರು ವೇಗವಾಗಿ ಓಡಿದರು. ನಾಯಿಯೂ ವೇಗವಾಗಿ ಓಡಿ ಕಾಲಿನ ಹತ್ತಿರ ಬಂದು ಕಚ್ಚಲು ಪ್ರಯತ್ನಿಸಿತು. ಹೀಗಿದ್ದರೂ ಕೊನೆಗೂ 9ನೇಯವರಾಗಿ ಸ್ಪರ್ಧೆ ಮುಗಿಸಿದರು ಎನ್ನುಮದು ವಿಶೇಷ.
ದಾರಿ ತಪ್ಪಿ ಬಸ್, ಮೆಟ್ರೊ ಹತ್ತಿದ್ದರು!: 2014ರಲ್ಲಿ ಬೆಂಗಳೂರು ಮ್ಯಾರಥಾನ್ ನಡೆದಿದ್ದಾಗ ಪುಲ್ ಮ್ಯಾರಥಾನ್ ಹಾಗೂ ಪುಲ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ರೋಡ್ ಮ್ಯಾಪ್‌ನಲ್ಲಿ ಗೊಂದಲಕ್ಕೆ ಒಳಗಾಗಿ ದಾರಿ ತಪ್ಪಿದ್ದರು. ವಾಪಸ್ ಕೂಟ ನಡೆಯುವ ಸ್ಥಳಕ್ಕೆ ಹೋಗಲು ಇವರ ಬಳಿ ಹಣ ಇರಲಿಲ್ಲ. ಕೊನೆಗೆ ಅವರಿವರ ಹತ್ತಿರ ಹಣ ಕೇಳಿಕೊಂಡು ಕೆಲವರು ಮೆಟ್ರೋ ಏರಿದರು. ಮತ್ತೆ ಕೆಲವರು ಬಿಎಂಟಿಸಿ ಬಸ್ ಹತ್ತಿ ಕೂಟ ನಡೆಯುವ ಸ್ಥಳಕ್ಕೆ ವಾಪಸ್ ಬಂದರು.
ಮಾಹಿತಿ: ಹೇಮಂತ್ ಸಂಪಾಜೆ, ಮಂಜು ಮಳಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ
Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು
1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್ ಹುಕುಂ ಚೀಟಿ
Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ
GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.