ಕುಕ್ಕೆ: ಪುಣ್ಯ ಕ್ಷೇತ್ರದಲ್ಲಿ ರವಿವಾರ ಅತ್ಯಧಿಕ ಭಕ್ತಸಂದಣಿ
Team Udayavani, May 21, 2018, 12:55 PM IST
ಷಷ್ಠಿಯ ದಿನವಾದ ರವಿವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ದೇವರ ದರುಶನ ಮಾಡಿದರು. ಶಾಲೆಗಳಿಗೆ ಬೇಸಗೆ ರಜೆ ಮತ್ತು ಕಚೇರಿಗಳಿಗೆ ವಾರದ ರಜೆ ಇದ್ದುದರಿಂದ ಹಾಗೂ ಷಷ್ಠಿ ತಿಥಿಯೂ ಬಂದುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತಸಂದಣೆ ಕಂಡು ಬಂತು. ಜಾತ್ರೆ ಹೊರತುಪಡಿಸಿ ದಾಖಲೆ ಸಂಖ್ಯೆಯ ಭಕ್ತರು ಆಗಮಿಸಿದ ದಿನವಾಗಿ ರವಿವಾರ ಗುರುತಿಸಿಕೊಂಡಿತು. ದೇವರ ದರ್ಶನ, ಭೋಜನ ಶಾಲೆ ಎಲ್ಲ ಕಡೆಯೂ ಸರದಿ ಸಾಲು ದೊಡ್ಡದಿತ್ತು.
ಇಡೀ ಕ್ಷೇತ್ರದಲ್ಲಿ ಜಾತ್ರೆಯ ವಾತಾವರಣವೇ ತುಂಬಿತ್ತು. ಶನಿವಾರ ಸಂಜೆ ಬಳಿಕ ಯಾತ್ರಾರ್ಥಿಗಳು ಕ್ಷೇತ್ರದ ಕಡೆಗೆ ಆಗಮಿಸಿದ್ದರಿಂದ ಕ್ಷೇತ್ರದ ದೇವಸ್ಥಾನ ಹಾಗೂ ಖಾಸಗಿ ವಸತಿಗೃಹಗಳು ಭರ್ತಿಯಾಗಿದ್ದವು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಮಹಾಪೂಜೆ, ಶೇಷಸೇವೆ, ಪಂಚಾಮೃತ ಅಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಮುಂತಾದ ಸೇವೆಗಳನ್ನು ನೆರವೇರಿಸಿದರು. ಬೆಳಗ್ಗೆ ಆರು ಗಂಟೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ಈ ಎಲ್ಲ ಸೇವೆ, ಹರಕೆ ಸಲ್ಲಿಸಿದರು. ಗೋಪುರದಿಂದಲೇ ಭಕ್ತರ ಸಾಲು ಗೋಚರಿಸಿತು. ಭೋಜನ ಶಾಲೆಯ ಮುಂದೆ ರಥಬೀದಿಯಿಂದಲೇ ಸರದಿಯಿತ್ತು.
ಆದಿ ಸುಬ್ರಹ್ಮಣ್ಯ ಮತ್ತು ಕುಮಾರಧಾರಾ ಸ್ನಾನಘಟ್ಟದಲ್ಲಿಯೂ ಭಕ್ತ ಸಂದಣಿ ಅತ್ಯಧಿಕವಾಗಿತ್ತು. ಭಕ್ತರೊಂದಿಗೆ ಅವರನ್ನು ಕರೆದುಕೊಂಡು ಬಂದ ವಾಹನಗಳ ಸಂಖ್ಯೆಯೂ ಜಾಸ್ತಿಯಿದ್ದ ಕಾರಣ ಕ್ಷೇತ್ರದ ಪಾರ್ಕಿಂಗ್ ಸ್ಥಳಗಳು ಭರ್ತಿಯಾಗಿದ್ದವು. ರಸ್ತೆಗಳೂ ಆಗಾಗ ಬ್ಲಾಕ್ ಆಗಿ ಕಿರಿಕಿರಿ ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.