ಸ್ಮಾರ್ಟ್‌ಫೋನ್‌ ತಯಾರಿಕೆಯ ಕನಸು


Team Udayavani, May 21, 2018, 10:39 AM IST

smartphone.jpg

ಸ್ಮಾರ್ಟ್‌ಫೋನ್‌ ಉತ್ಪಾದನೆಯ ಒಂದಷ್ಟಾದರೂ ತಂತ್ರಜ್ಞಾನ ಭಾರತದಲ್ಲಿ ಇದ್ದಿದ್ದರೆ, ಅದು ಲಕ್ಷಗಟ್ಟಲೆ ಯುವಕರಿಗೆ ಉದ್ಯೋಗ ಕೊಡುತ್ತಿತ್ತು. ಕೋಟ್ಯಂತರ ವಿದೇಶಿ ವಿನಿಮಯವನ್ನೂ ಉಳಿಸುತ್ತಿತ್ತು. ಆದರೆ ಈಗ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದನೆ ಎಂಬ ರೈಲು ತನ್ನ ನಿಲ್ದಾಣವನ್ನು ಬಿಟ್ಟು ಮುಂದೆ ಸಾಗಿಯಾಗಿದೆ.

ಸರ್ವೀಸ್‌ ಸೆಕ್ಟರ್‌ನಲ್ಲಿ ವಿಶ್ವವೇ ತಲೆಯೆತ್ತಿ ನೋಡುವಂತಹ ಸಾಧನೆ ಮಾಡಿದ ನಂತರ, ಸಾಫ್ಟ್ವೇರ್‌ ಲೋಕ ಆಕರ್ಷಣೆ ಕಳೆದು ಕೊಂಡು ಪೇಲವವಾಗುತ್ತಿದ್ದಂತೆಯೇ ಹಾರ್ಡ್‌ವೇರ್‌ನಲ್ಲಿ ಭಾರತ ಹಿಂದಿದೆ ಎಂಬ ಧ್ವನಿ ಕೇಳಲು ಶುರುವಾಗಿತ್ತು. ಆಗ ಸರಕಾರ ವೇನೋ ಎಚ್ಚೆತ್ತುಕೊಂಡು ಒಂದಷ್ಟು ನೀತಿ ನಿಯಮ ಗಳನ್ನು ತಿದ್ದುಪಡಿ ಮಾಡಿತು. ಕೆಲವು ಕ್ಷೇತ್ರಗಳಲ್ಲಿ ಇದು ವಕೌìಟ್‌ ಆಗಿದ್ದಂತೂ ನಿಜ. ಎಲೆಕ್ಟ್ರಾನಿಕ್ಸ್‌ ಉದ್ಯಮದಲ್ಲಿ ಒಂದು ಹಂತಕ್ಕೆ ಒಳ್ಳೆಯ ಬೇಡಿಕೆ ಬಂತು. ಸ್ಟೀಲ್‌ ಉದ್ಯಮ ಚೇತರಿಸಿಕೊಂಡಿತು. ಆದರೆ ಸ್ಮಾರ್ಟ್‌ಫೋನ್‌ ತಯಾರಿಕೆ ಉದ್ಯಮ ಸಮಯಕ್ಕೆ ಸರಿ ಯಾಗಿ ಭಾರತದಲ್ಲಿ ಬೇರೂರದ್ದರಿಂದ ಸಂಪೂರ್ಣ ವಿದೇಶದ ಮೇಲೆಯೇ ಅವಲಂಬಿಸುವಂತಾಯಿತು. ಈಗ ನಾವು ಹೇಗೆ ತೈಲದ ಬಹುತೇಕ ಬೇಡಿಕೆಯನ್ನು ವಿದೇಶದಿಂದ ತರುತ್ತೇ
ವೆಯೋ ಹಾಗೆಯೇ ವಿಶ್ವದಲ್ಲೇ ಅತಿಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಹೊಂದಿರುವ ದೇಶವಾಗಿರುವ ನಾವು ಬಹುತೇಕ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಬಿಡಿಭಾಗಗಳನ್ನು ವಿದೇಶದಿಂದ ತರುತ್ತೇವೆ.

ಈಗ ಬಹುತೇಕ ಚೀನಾ ಕಂಪನಿಗಳೇ ಭಾರತದ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯನ್ನು ಆಳುತ್ತಿವೆ. ಒಂದು ದಶಕದ ಹಿಂದೆ ಸ್ಮಾರ್ಟ್‌ಫೋನ್‌ ಎಂಬ ಕಲ್ಪನೆ ಇನ್ನೂ ಭಾರತದಲ್ಲಿ ಕುಡಿಯೊಡೆದಿರಲಿಲ್ಲ. ಆದರೆ ಚೀನಾ ಮತ್ತು ತೈವಾನ್‌ನಂತಹ ಸ್ಮಾರ್ಟ್‌ಫೋನ್‌ ಜನಕ ದೇಶಗಳಲ್ಲಿ ಅದಾಗಲೇ ಫೀಚರ್‌ ಫೋನ್‌ಗಳ ಮಾರಾಟ ಕಡಿಮೆಯಾಗಿತ್ತು. ಭಾರತದಲ್ಲಿ ಆಗ ಫೀಚರ್‌ ಫೋನ್‌ಗಳದ್ದೇ ಕಾರುಬಾರು. ಫೀಚರ್‌ ಫೋನ್‌ಗಳ ಉತ್ಪಾದನೆಯಲ್ಲಾದರೂ ಭಾರತದ ಕಂಪನಿ ಒಂದೂ ಇರಲಿಲ್ಲ. ಮೊದಲು ದಕ್ಷಿಣ ಕೊರಿ ಯಾದ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಕಲ್ಪನೆಯನ್ನು ಬಿತ್ತಿದ್ದು. 

ಆ ವಲಯದಲ್ಲಿ ಅದು ಏಕಸ್ವಾಮ್ಯ ಹೊಂದಿತ್ತು. ಆದರೆ ಯಾವಾಗ ಮೈಕ್ರೋಮ್ಯಾಕ್ಸ್‌ ಅನ್ನೋ ಭಾರತೀಯ ಕಂಪನಿ ಚೀನಾದಿಂದ ಬಿಡಿಭಾಗಗಳನ್ನು ತರಿಸಿಕೊಂಡು ಭಾರತದಲ್ಲಿ ಅಸೆಂಬಲ್‌ ಮಾಡಿ ಮಾರಾಟ ಮಾಡಲು ಆರಂಭಿಸಿತೋ ಆಗ ಸ್ಯಾಮ್‌ಸಂಗ್‌ಗೆ ಹೊಡೆತ ಬಿತ್ತು. ಮೈಕ್ರೋಮ್ಯಾಕ್ಸ್‌ ಜೊತೆಗೇ ಇತರ ಕಂಪನಿಗಳೂ ಅಸೆಂಬಲ್‌ ಮಾಡಿ, ಅದಕ್ಕೆ ಮೇಡ್‌ ಇನ್‌ ಇಂಡಿಯಾ ಟ್ಯಾಗ್‌ ಹಾಕಿ ಮಾರಾಟ ಮಾಡಲು ಆರಂಭಿಸಿದವು. ವಾಸ್ತವವಾಗಿ ಇವು ಸ್ಮಾರ್ಟ್‌ಫೋನ್‌ನ ಹಿಂಬದಿ ಕವರನ್ನೂ ಉತ್ಪಾದಿಸುತ್ತಿರಲಿಲ್ಲ. ಎಲ್ಲವನ್ನೂ ಚೀನಾದಿಂದ ತಂದು ಅದನ್ನು ಗುರ್‌ಗಾಂವ್‌ನಲ್ಲಿರುವ ಫ್ಯಾಕ್ಟರಿಯಲ್ಲಿ ಅಸೆಂಬಲ್‌ ಮಾಡಿ ಮಾರುತ್ತಿದ್ದವು.

ಅಂದಹಾಗೆ ಈ ಎಲ್ಲ ಕಂಪನಿಗಳ ಮಾಲೀಕರು ಸ್ಯಾಮ್‌ಸಂಗ್‌, ನೋಕಿಯಾ ಫೀಚರ್‌ ಫೋನ್‌ಗಳ ವಿತರಕರಾಗಿ ಕೆಲಸ ಮಾಡಿದ್ದ ವರೇ. ವರ್ಷಗಟ್ಟಲೆ ಸಂಶೋಧನೆ, ಹೊಸ ಹೊಸ ಫೀಚರುಗಳು ಎಲ್ಲವನ್ನೂ ಮಾಡಿ, ಕೊನೆಗೆ ಮಾರುಕಟ್ಟೆಗೆ ಒಂದು ಉತ್ಪನ್ನವನ್ನು ಸ್ಯಾಮ್‌ಸಂಗ್‌ ನೋಕಿಯಾ ಬಿಡುಗಡೆ ಮಾಡುತ್ತಿದ್ದರೆ, ಈ ಭಾರತೀಯ ಕಂಪನಿಗಳು ಅವುಗಳಿಗೆ ಸೆಡ್ಡು ಹೊಡೆಯುವಂತೆ ಕೆಲವೇ ತಿಂಗಳುಗಳಲ್ಲಿ ಅವುಗಳಿಗಿಂತ ಅರ್ಧದಷ್ಟು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ದವು. ಇದಕ್ಕೆ ನೆರವಾಗಿದ್ದೇ ಇದೇ ಚೀನಾ ಕಂಪನಿಗಳು. ಈ ವ್ಯವಸ್ಥೆ ಸುಮಾರು ನಾಲ್ಕೈದು ವರ್ಷಗಳವರೆಗೆ ನಡೆಯಿತು.

ಯಾವಾಗ ಚೀನಾದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ನಿರೀಕ್ಷಿತ ವೇಗದಲ್ಲಿ ಬೆಳೆಯುತ್ತಿಲ್ಲ ಎಂದು ಚೀನಾ ಕಂಪನಿಗಳಿಗೆ ಅರಿವಾ ಯಿತೋ ಅವು ಹೊಸ ವಸಾಹತುಗಳನ್ನು ಹುಡುಕತೊಡಗಿದವು. ಅಂದರೆ ತಮ್ಮ ಆದಾಯವನ್ನು ಸ್ಥಿರವಾಗಿಟ್ಟುಕೊಳ್ಳಲು ಬೇರೆ ದೇಶಗಳಿಗೆ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವುದು ಅವರ ಅಗತ್ಯವಾಗಿತ್ತು. ಅದಕ್ಕೆ ಮೊದಲು ಅವರ ಕಣ್ಣು ಹೋಗಿದ್ದೇ ಭಾರತದ ಮೇಲೆ. ಶಿಯೋಮಿ, ಒಪ್ಪೊ, ವಿವೋ ಕಂಪನಿಗಳೆಲ್ಲ ಹಿಂದೆ ಇದೇ ಸ್ಯಾಮ್‌ಸಂಗ್‌ ನೋಕಿಯಾಗೆ ಬಿಡಿಭಾಗಗಳನ್ನು ತಯಾರಿಸಿಕೊಡುತ್ತಿದ್ದವು. ಅಷ್ಟೇ ಅಲ್ಲ, ಭಾರತೀಯ ಕಂಪನಿಗಳೂ ಇದೇ ಕಂಪನಿಗಳಿಂದ ಬಿಡಿಭಾಗಗಳನ್ನು ತರುತ್ತಿದ್ದವು. ಮೈಕ್ರೋ ಮ್ಯಾಕ್ಸ್‌ನಂಥ ಕಂಪನಿಗೆ ಬಿಡಿಭಾಗವನ್ನು ಮಾರಿದ್ದರಿಂದ ಭಾರತದ ಗ್ರಾಹಕರ ಬೇಡಿಕೆ ಏನು ಹಾಗೂ ಅವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಇವರಿಗೆ ತಿಳಿದಿತ್ತು. ಹೀಗಾಗಿ ಮಾರುಕಟ್ಟೆಗೆ ಬರಲು ಹೆಚ್ಚೇನೂ ಕಾಲಾವಕಾಶ ಬೇಕಿರಲಿಲ್ಲ. ನೇರವಾಗಿ ಭಾರತದ ಮಾರುಕಟ್ಟೆಗೆ ಇಳಿದಿದ್ದೇ, ಮೈಕ್ರೋಮ್ಯಾಕ್ಸ್‌ ಹಾಗೂ ಇತರ ಭಾರತೀಯ ಕಂಪನಿಗಳಿಗೆ ಹೊಡೆತ ಬಿತ್ತು.

ಭಾರತೀಯ ಕಂಪನಿಗಳು ಸ್ಮಾರ್ಟ್‌ಫೋನ್‌ನಲ್ಲಿನ ಆಧುನಿಕ ತಂತ್ರಜ್ಞಾನಗಳನ್ನು ಕಂಡುಕೊಳ್ಳಲು ಸಂಶೋಧನೆಗೆ ಕೈಹಾಕಲೇ ಇಲ್ಲ. ಸದ್ಯ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಅಷ್ಟೂ ಪೇಟೆಂಟ್‌ ತೈವಾನ್‌, ಚೀನಾ ಹಾಗೂ ಯುರೋಪ್‌ ದೇಶಗಳಲ್ಲಿವೆ. ಸ್ಮಾರ್ಟ್‌ ಫೋನ್‌ನ ಹೃದಯ ಎಂದೇ ಹೇಳಲಾಗುವ ಚಿಪ್‌ ಕ್ವಾಲ್‌ ಕಾಮ್‌ ಪಾಲಾಗಿದೆ.

ಕ್ವಾಲ್‌ಕಾಮ್‌ನಿಂದಲೇ ಚಿಪ್‌ಗ್ಳನ್ನು ಖರೀದಿ ಸಬೇಕೆ ಹೊರತು ಅವರಿಂದ ಚಿಪ್‌ ತಯಾರಿಕೆಯ ತಂತ್ರಜ್ಞಾನ ಪಡೆಯ ಲಾಗದು. ಹೀಗಾಗಿ ಭಾರತದ ಒಂದು ಕಂಪನಿ ಈಗ ಭಾರತದಲ್ಲೇ ಸ್ಮಾರ್ಟ್‌ಫೋನ್‌ಅನ್ನು ಸಂಪೂರ್ಣವಾಗಿ ಉತ್ಪಾದಿ ಸುತ್ತೇನೆ ಎಂದು ಹೊರಟರೆ ಅದು ಅಸಾಧ್ಯದ ಮಾತೇ ಸರಿ. ಸ್ಮಾರ್ಟ್‌ ಫೋನ್‌ಗೆ ಬೇಕಿರುವ ಅತ್ಯಂತ ಉನ್ನತ ಗುಣಮಟ್ಟದ ಪ್ಲಾಸ್ಟಿಕ್‌ ಇಲ್ಲಿ ಲಭ್ಯವಿಲ್ಲ. ಡಿಸ್‌ಪ್ಲೇ ಟೆಕ್ನಾಲಜಿಯೂ ಭಾರತದಲ್ಲಿಲ್ಲ. ಹೀಗಾಗಿ ಎಲ್ಲ ತಂತ್ರ ಜ್ಞಾನಗಳ ಪೇಟೆಂಟ್‌ ತೆಗೆದುಕೊಂಡು ಬಂದು ಭಾರತದಲ್ಲಿ ಉತ್ಪಾದಿಸಲು ಹೊರಟರೆ ಸಾಮಾನ್ಯ ಸ್ಮಾರ್ಟ್‌ಫೋನಿಗೆ ಐಫೋನ್‌ ಬೆಲೆ ಇಟ್ಟರೂ ಕಂಪನಿ ನಷ್ಟಕ್ಕೊಳಗಾದೀತು.

ಒಂದು ವೇಳೆ ಸ್ಮಾರ್ಟ್‌ಫೋನ್‌ ಉತ್ಪಾದನೆಯ ಒಂದಷ್ಟಾದರೂ ತಂತ್ರಜ್ಞಾನ ಭಾರದಲ್ಲಿದ್ದಿದ್ದರೆ, ಅದು ಲಕ್ಷಗಟ್ಟಲೆ ಯುವಕರಿಗೆ ಉದ್ಯೋಗ ಕೊಡುತ್ತಿತ್ತು. ಕೋಟ್ಯಂತರ ವಿದೇಶಿ ವಿನಿಮಯವನ್ನೂ ಉಳಿಸುತ್ತಿತ್ತು. ಆದರೆ ಈಗ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದನೆ ಎಂಬ ರೈಲು ತನ್ನ ನಿಲ್ದಾಣವನ್ನು ಬಿಟ್ಟು ಮುಂದೆ ಸಾಗಿಯಾಗಿದೆ. ಹೀಗಾಗಿ ಸದ್ಯಕ್ಕಂತೂ ಪರಿಶುದ್ಧವಾದ ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ಫೋನ್‌ನ ನನಸಾಗದ ಕನಸು ಕಾಣಬೇಕಷ್ಟೇ.

ದೀರ್ಘ‌ ಬಾಳಿಕೆ ಬ್ಯಾಟರಿಯ ತೈವಾನ್‌ನ ಆಸಸ್‌ ಮ್ಯಾಕ್ಸ್‌ ಪ್ರೊ ಹಲವು ವರ್ಷಗಳ ಹಿಂದೆಯೇ ಭಾರತಕ್ಕೆ ಕಾಲಿಟ್ಟ ತೈವಾನ್‌ ಮೂಲದ ಆಸಸ್‌ ಇನ್ನೂ ಗಮನ ಸೆಳೆಯುವ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಶಕ್ತವಾಗಿಲ್ಲ. ಆದರೂ ಆಗಾಗ್ಗೆ ಹೊಸ ಹೊಸ ಮಾಡೆಲ್‌ಗ‌ಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಇತ್ತೀಚೆಗಷ್ಟೇ 5 ಸಾವಿರ ಎಂಎಎಚ್‌ ಬ್ಯಾಟರಿ ಹೊತ್ತು ಸದ್ದು ಮಾಡುತ್ತಲೇ ಆನ್‌ಲೈನ್‌ ಮಾರುಕಟ್ಟೆಗೆ ಬಂದ ಆಸಸ್‌ ಮ್ಯಾಕ್ಸ್‌ ಪ್ರೊ ಈ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ ಕೊಡುತ್ತದೆ ಎಂದು ಊಹಿಸಲಾಗಿತ್ತು. ಆದರೆ ಹಾಗೇನೂ ಚಮತ್ಕಾರ ಮಾರುಕಟ್ಟೆಯಲ್ಲಿ ಆದಂತಿಲ್ಲ. ಒಟ್ಟು ಫೀಚರ್‌ ನೋಡಿದರೆ ಸ್ಮಾರ್ಟ್‌  ಫೋನ್‌ ಚೆನ್ನಾಗಿಯೇ ಇದೆ. ಆದರೆ ಕೊರತೆ ಇರುವುದು ಬ್ರಾಂಡ್‌ನ‌ ವಿಶ್ವಾಸಾರ್ಹತೆಯಲ್ಲಿ. ಸ್ಮಾರ್ಟ್‌ಫೋನ್‌ ಕಾಲದ ಆರಂಭದ ದಿನಗಳಲ್ಲಿ ಕೆಲವು ಮಾಡೆಲ್‌ಗ‌ಳ ಪರ್ಫಾರ್ಮೆನ್ಸ್‌ ಕ್ಷೀಣವಾಗಿದ್ದರಿಂದ ಬ್ರಾಂಡ್‌ ಬಗ್ಗೆ ಜನ ಅಷ್ಟೇನೂ ವಿಶ್ವಾಸಾರ್ಹತೆ ತೋರಿಸುತ್ತಿಲ್ಲ.

ಮ್ಯಾಕ್ಸ್‌ ಪ್ರೊ ಎಂ1 ಹೆಸರಿನ 3ಜಿಬಿ ರ್ಯಾಮ್‌ ಹಾಗೂ 32 ಜಿಬಿ ಸ್ಟೊರೇಜ್‌ ವರ್ಷನ್‌ಗೆ 10,999 ರೂ. ಇದ್ದರೆ 4ಜಿಬಿ ರ್ಯಾಮ್‌ ಹಾಗೂ 64 ಜಿಬಿ ಆವೃತ್ತಿಗೆ 12,999 ರೂ. ಇದೆ. ಶಿಯೋಮಿ ಕಂಪನಿಯ ರೆಡ್ಮಿ ನೋಟ್‌ 5 ಹಾಗೂ ನೋಟ್‌ 5 ಪ್ರೊಗೆ ಇದು ನೇರ ಪ್ರತಿಸ್ಪರ್ಧಿ ಎಂದು ಹೇಳಲಾಗುತ್ತದೆ. ನೋಡುವುದಕ್ಕೇನೋ ಸ್ಮಾರ್ಟ್‌ಫೋನ್‌ ಚೆನ್ನಾಗಿದೆ. ಹೊಸ ಜನಾಂಗ ಬಯಸುವ 18:9 ರೇಶಿಯೋ ಸ್ಕ್ರೀನ್‌ ಇದೆ. ಸಾಕಷ್ಟು ಅಗಲವಾಗಿದ್ದರೂ ಒಂದೇ ಕೈಯಲ್ಲಿ ಆಪರೇಟ್‌ ಮಾಡುವುದಕ್ಕೇನೂ ಕಷ್ಟವಿಲ್ಲ. 5.99 ಇಂಚು ಎಫ್ಎಚ್‌ಡಿ ಫ‌ುಲ್‌ ವ್ಯೂ ಡಿಸ್‌ಪ್ಲೇ ಇದೆ.

ಕಾರ್ನರ್‌ಗಳು ರೌಂಡ್‌ ಆಗಿವೆ. ಹೀಗಾಗಿ ಬಿದ್ದಾಗ, ಉಜ್ಜಿದಾಗ ಅಂಚು ಬೇಗ ಅಂದಕೆಡುವುದಿಲ್ಲ. ಸಾಮಾನ್ಯ 
ಫೋನ್‌ನ ಹಾಗೆಯೇ ಬದಿಯಲ್ಲಿ ಪವರ್‌ ಮತ್ತು ವಾಲ್ಯೂಮ್‌ ಕೀಗಳಿವೆ. ಕೈಗಳಿಗೆ ಸುಲಭವಾಗಿ ಸಿಗುತ್ತವೆ. ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹಿಂಭಾಗದಲ್ಲಿ ಮಧ್ಯದಲ್ಲಿದೆ. ಇದರ ಕೆಳಗೆ ಆಸಸ್‌ ಲೋಗೋ ಇದೆ. ಕ್ಯಾಮೆರಾ ಹಾಗೂ ಫ್ಲಾಶ್‌ ಒಂದು ಮೂಲೆಯಲ್ಲಿರುವುದರಿಂದ ಹಿಂಭಾಗದಲ್ಲಿರುವ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಒಂಟಿಯಾದಂತೆ ಅನಿಸುತ್ತದೆ.

ಜೊತೆಗೆ, ಒಟ್ಟಾರೆ ಸ್ಮಾರ್ಟ್‌ಫೋನ್‌ನ ಹಿಂಭಾಗ ಅದೇಕೋ ಅಲೈನ್‌x ಆದಂತೆ ಕಾಣಿಸುವುದಿಲ್ಲ. ಆದರೆ ಇದರ ಒಂದು ಅನುಕೂಲವೆಂದರೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಮೇಲೆ ಬೆರಳಿಡುವಾಗ ತಪ್ಪಾಗಿ ಫ್ಲಾಶ್‌ ಮೇಲೆ ಬೆರಳಿಡುವ ಪ್ರಮೇಯ ಇರುವುದಿಲ್ಲ.

ಡಿಸ್‌ಪ್ಲೇ ಆಕರ್ಷಕವಾಗಿದೆ. ಕಡಿಮೆ ಸೂರ್ಯನ ಬೆಳಕಿದ್ದರೂ ಸ್ಕ್ರೀನ್‌ ಸಾಕಷ್ಟು ಪ್ರಖರವಾಗಿಯೇ ಇರುತ್ತದೆ. ವ್ಯೂವಿಂಗ್‌ ಆಂಗಲ್‌ ಕೂಡ ಚೆನ್ನಾಗಿಯೇ ಇದೆ. ಅಂದರೆ ಸ್ಮಾರ್ಟ್‌ಫೋನನ್ನು ಯಾವ ಕೋನದಿಂದ ನೋಡಿದರೂ ಪೇಲವವಾಗುವುದಿಲ್ಲ. ನೈಟ್‌ ಮೋಡ್‌ ಇರುವುದು ವಿಶೇಷ. ಜೊತೆಗೆ ಸೆಟ್ಟಿಂಗ್‌ನಲ್ಲಿ ಕಲರ್‌ ಟೆಂಪರೇಚರನ್ನೂ ಹೊಂದಿಸಿಕೊಳ್ಳಬಹುದು. ಇದೇ ಶ್ರೇಣಿಯ ಇತರ ಸ್ಮಾರ್ಟ್‌ಫೋನ್‌ಗಳಲ್ಲಿರುವ ಸ್ನ್ಯಾಪ್‌ಡ್ರ್ಯಾಗನ್‌ 636 
ಚಿಪ್‌ಸೆಟ್‌ ಇದರಲ್ಲೂ ಇದೆ. ಅಚ್ಚರಿಯ ಸಂಗತಿಯೆಂದರೆ ಆಸಸ್‌ನ ಯೂಸರ್‌ ಇಂಟರ್‌ಫೇಸ್‌ ಕೈಬಿಟ್ಟು, ಆಂಡ್ರಾಯ್ಡ ಸ್ಟಾಕ್‌ ಇಂಟರ್‌ಫೇಸನ್ನೇ ಇದರಲ್ಲಿ ಬಳಸಲಾಗಿದೆ. ಹೀಗಾಗಿ ಅಪ್ಲಿಕೇಶನ್‌ಗಳ ಬಳಕೆ ಹಿತಕರವಾಗಿದೆ.

ಹಿಂಭಾಗದಲ್ಲಿ 13 ಎಂಪಿ ಹಾಗೂ 5 ಎಂಪಿ ಕ್ಯಾಮೆರಾಗಳಿವೆ. ಫೋಟೋಗಳು ಅಷ್ಟೇನೂ ಆಕರ್ಷಕವಲ್ಲದಿದ್ದರೂ, ಈ ಶ್ರೇಣಿಯ ಮೊಬೈಲ್‌ಗ‌ಳಲ್ಲಿ ಸಾಮಾನ್ಯ ಮಟ್ಟದ್ದಾಗಿವೆ. ಮುಂಭಾಗದಲ್ಲಿ 8ಎಂಪಿ ಕ್ಯಾಮೆರಾ ಇದೆ. ಈ ಮಾಡೆಲ್‌ನ ಆಕರ್ಷಣೆಯ ಅಂಶವೇ 5 ಸಾವಿರ ಎಂಎಎಚ್‌ ಬ್ಯಾಟರಿ. ಬ್ಯಾಟರಿ ಬಾಳಿಕೆಯೇನೋ ಚೆನ್ನಾಗಿಯೇ ಇದೆ. ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳವರೆಗೆ ಬಂದೀತು. ಆದರೆ ಇಷ್ಟು ಭಾರಿ ಸಾಮರ್ಥ್ಯದ ಬ್ಯಾಟರಿಯ ಜೊತೆಗೆ ಕ್ವಿಕ್‌ ಚಾರ್ಜರ್‌ ಇಲ್ಲದ್ದೇ ಕೊರತೆ. ಬ್ಯಾಟರಿ ಸಂಪೂರ್ಣ ಚಾರ್ಜ್‌ ಆಗಲು ಎರಡು ತಾಸಾದರೂ ಬೇಕು. ಬ್ಯಾಟರಿ ಬಾಳಿಕೆ ನಿರೀಕ್ಷಿಸುತ್ತಿದ್ದರೆ ಈ ಸ್ಮಾರ್ಟ್‌ಫೋನ್‌ ಉತ್ತಮ.

– ಕೃಷ್ಣ ಭಟ್‌

ಟಾಪ್ ನ್ಯೂಸ್

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

2

Kasaragod: ಯುವತಿ ನಾಪತ್ತೆ; ದೂರು ದಾಖಲು

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.