ಆಂಧ್ರ ಸಿಎಂ ನಾಯ್ಡುರಿಂದ ತಿರುಪತಿ ದೇವಳದ ನೂರು ಕೋಟಿ ದುರ್ಬಳಕೆ ?

Team Udayavani, May 21, 2018, 4:31 PM IST

tirumala-tirupati-temple1-700.jpg

ತಿರುಪತಿ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಪತಿ ತಿರುಮಲ ದೇವಸ್ಥಾನದ ನಿಧಿಯಿಂದ ಸುಮಾರು 100 ಕೋಟಿ ರೂ. ಬೇರೆಡೆಗೆ ವರ್ಗಾಯಿಸಿ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ ದೇವಳದ ಮುಖ್ಯ ಅರ್ಚಕ ಎ ವಿ ರಮಣ ದೀಕ್ಷಿತುಲು ಅವರನ್ನು ಹುದ್ದೆಯಿಂದ ಕಿತ್ತು ಹಾಕಿರುವುದು ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ.

ತಿರುಮಲ ತಿರುಪತಿ ವಿಶ್ವಸ್ಥ ಮಂಡಳಿಯು ಕಳೆದ ಬುಧವಾರ ‘ದೇವಳದ ವಂಶಪಾರಂಪರ್ಯದ ಎಲ್ಲ ಅರ್ಚಕರು 65 ವರ್ಷ ಪ್ರಾಯ ತಲುಪಿದೊಡನೆಯೇ ನಿವೃತ್ತರಾಗಬೇಕು’ ಎಂಬ ಠರಾವನ್ನು ಕೈಗೊಂಡ ಕೆಲವೇ ದಿನಗಳಲ್ಲಿ  ದೀಕ್ಷಿತುಲು ಅವರು ತಮ್ಮ ಮುಖ್ಯ ಅರ್ಚಕ ಹುದ್ದೆಯನ್ನು ಕಳೆದುಕೊಂಡಿದ್ದಾರೆ ಎಂದು ಟಿಟಿಡಿ ಹೇಳಿದೆ. 

ದೀಕ್ಷಿತುಲು ಅವರ ಸ್ಥಾನಕ್ಕೆ ಟಿಟಿಡಿ ಇದೀಗ ವೇಣುಗೋಪಾಲ ದೀಕ್ಷಿತುಲು ಅವರನ್ನು ತಿರುಮಲದ ವೆಂಕಟೇಶ್ವರ ದೇವಸ್ಥಾನದ ಮುಖ್ಯ ಅರ್ಚಕರನ್ನಾಗಿ ನೇಮಿಸಿದೆ. 

ಸಾವಿರಾರು ವರ್ಷಗಳಿಂದ ತಯಾರಿಸಲಾಗುತ್ತಿರುವ ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದ ಜಗತ್‌ ಪ್ರಸಿದ್ಧವಾಗಿದೆ. ಅದನ್ನು ತಯಾರಿಸುವ ಅಡುಗೆ ಮನೆಯನ್ನು ಈಚೆಗೆ  ಕೆಡಹಿ ಅದರ ಕೆಳಭಾಗದಲ್ಲಿ ಜೋಪಾನವಾಗಿ ಶೇಖರಿಸಿಡಲಾಗಿದ್ದ ಅತ್ಯಂತ ಪುರಾತನ ಹಾಗೂ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ಸರಕಾರ ತೆಗೆದುಕೊಂಡು ಹೋಗಿದೆ ಎಂದು ರಮಣ ದೀಕ್ಷಿತುಲು ಆರೋಪಿಸಿದ್ದರು. 

ಆಂಧ್ರಪ್ರದೇಶದ ತಿರುಪತಿ ತಿರುಮಲದಲ್ಲಿನ ವೆಂಕಟೇಶ್ವರ ದೇವಸ್ಥಾನ ಮಾತ್ರವಲ್ಲದೆ ತಿರುಪತಿಯಲ್ಲಿನ ಇತರ ಹಾಗೂ ವಿಶ್ವಾದ್ಯಂತದ ವೆಂಕಟೇಶ್ವರ ದೇವಾಲಯಗಳನ್ನು ಟಿಟಿಡಿ ನಡೆಸುತ್ತಿದೆ. 

ತಿರುಪತಿ ತಿರುಮಲ ದೇವಸ್ಥಾನದಲ್ಲಿನ ಎಲ್ಲ ಆಭರಣಗಳ ಸುರಕ್ಷೆಗಾಗಿ ಅವುಗಳ 3ಡಿ ಚಿತ್ರಗಳ ಕಡತವನ್ನು ರೂಪಿಸಲು ತಾನು ನಿರ್ಧರಿಸಿರುವುದಾಗಿ ಟಿಟಿಡಿ ಹೇಳಿಕೊಂಡಿದೆ. ಮಾತ್ರವಲ್ಲದೆ ದೇವಳದಲ್ಲಿನ ಆಗಮ ಶಾಸ್ತ್ರ ಪಂಡಿತರು ಒಪ್ಪಿದಲ್ಲಿ ದೇವಸ್ಥಾನದ ಸುಪ್ರಭಾತ, ತೋಮಲ ಸಹಿತ ಇತರ ಎಲ್ಲ  ಎಲ್ಲ ಪೂಜಾ ಕೈಂಕರ್ಯಗಳ ನೇರ ಟಿವಿ ಪ್ರಸಾರ ಕೈಗೊಳ್ಳಲು ತಾನು ಬಯಸಿರುವುದಾಗಿ ಟಿಟಿಡಿ ಹೇಳಿದೆ. 

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.