ಪಠ್ಯಪುಸ್ತಕ ರಗಳೆಗೆ ಪೂರ್ವಸಿದ್ಧತೆ ಮದ್ದು
Team Udayavani, May 21, 2018, 5:17 PM IST
ಹುಬ್ಬಳ್ಳಿ: ಸರಕಾರಿ ಶಾಲೆ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಪುಸ್ತಕ ವಿತರಣೆಯಲ್ಲಿ ಹಿಂದೆ ಆಗಿದ್ದ ಗೊಂದಲದಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಈ ಬಾರಿ ವ್ಯವಸ್ಥಿತವಾಗಿ ಪುಸ್ತಕ ವಿತರಣೆಗೆ ಸಜ್ಜುಗೊಂಡಿದ್ದು, ಶೇ. 80ರಷ್ಟು ಪಠ್ಯಪುಸ್ತಕ ಬಂದಿದ್ದು, ಸಮವಸ್ತ್ರ ಇನ್ನು ಬರಬೇಕಿದೆ.
ಕಳೆದ ವರ್ಷ ಶಾಲಾ ಮಕ್ಕಳು ಪಠ್ಯ ಪುಸ್ತಕವಿಲ್ಲದೇ ಸುಮಾರು 4-5 ತಿಂಗಳು ಕಳೆದಿದ್ದರು. ಈ ಬಾರಿ ಅಂತಹ ಸ್ಥಿತಿ ತಪ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಶಾಲೆ ಆರಂಭಕ್ಕೆ ಮುನ್ನವೇ ಬಹುತೇಕ ಪಠ್ಯಪುಸ್ತಕಗಳನ್ನು ರವಾನಿಸುವ ಕಾರ್ಯ ಮಾಡಿದೆ.
ಈಗಾಗಲೇ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ವಿಭಾಗದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಹರ ವಿಭಾಗದಿಂದ ಪಠ್ಯಪುಸ್ತಕ ವಿತರಣೆ ಆರಂಭಗೊಂಡಿದ್ದು, ಗ್ರಾಮೀಣ ವಿಭಾಗದಲ್ಲಿ ಮೇ 21ರಿಂದ ಪಠ್ಯಪುಸ್ತಕ ವಿತರಣೆ ಶುರುವಾಗಲಿದೆ.
ಶಹರ ವಿಭಾಗ: ಒಟ್ಟು 12 ಕ್ಲಸ್ಟರ್‌ಗಳಲ್ಲಿ 29 ಪ್ರಾಥಮಿಕ ಶಾಲೆ, 98 ಸರಕಾರಿ ಪ್ರೌಢಶಾಲೆ, 47 ಅನುದಾನಿತ ಸರಕಾರಿ ಪ್ರೌಢಶಾಲೆ, 135 ಅನುದಾನ ರಹಿತ ಸೇರಿ ಒಟ್ಟು 309 ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಬೇಕಿದೆ. ಇದರಲ್ಲಿ ಸರಕಾರಿ, ಅನುದಾನಿತ ಶಾಲೆಗಳಿಗೆ ಉಚಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಮಾರಾಟ ಪ್ರಕ್ರಿಯೆ ನಡೆಯಲಿದೆ.
ಪ್ರಾಥಮಿಕ ಶಾಲೆಗೆ ಒಂದು ಚಾಕ್ ಬಾಕ್ಸ್ ಹಾಗೂ ಪ್ರೌಢಶಾಲೆಗೆ 2 ಚಾಕ್ ಬಾಕ್ಸ್ ಸೇರಿದಂತೆ ಎಲ್ಲ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಎಸ್‌ಎಟಿಎಸ್ (ಸ್ಟುಡೆಂಟ್ ಅಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ಮೂಲಕ ಆಯಾ ಶಾಲೆಗೆ ಬೇಕಾಗುವ ಪುಸ್ತಕದ ಮಾಹಿತಿ ಕಲೆ ಹಾಕಿದ್ದು ಅದರಂತೆ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. ಎಲ್ಲ ವಿಷಯಗಳ ಸುಮಾರು 5,65,305 ಪಠ್ಯಪುಸ್ತಕಗಳ ಬೇಡಿಕೆ ಇದ್ದು, ಅದರಲ್ಲಿ ಸರಕಾರಿ ಶಾಲೆಗಳಿಗೆ ಉಚಿತವಾಗಿ ಪೂರೈಸಲು 3,00,448 ಹಾಗೂ ಮಾರಾಟಕ್ಕೆ 2,64,857 ಪಠ್ಯಪುಸ್ತಕಗಳ ಬೇಡಿಕೆ ಇದೆ.
ಸದ್ಯ ಸರಕಾರಿ ಶಾಲೆಗಳಿಗೆ ಉಚಿತವಾಗಿ ಪೂರೈಸಲು 1,79,045 ಹಾಗೂ ಮಾರಾಟಕ್ಕೆ 1,88,578 ಪಠ್ಯಪುಸ್ತಕಗಳು ಸೇರಿ ಒಟ್ಟು 3,67,623 ಪಠ್ಯಪುಸ್ತಕಗಳು ಬಂದಿವೆ. ಉಚಿತ ವಿತರಣೆಗೆ 1,21,403 ಹಾಗೂ ಮಾರಾಟಕ್ಕೆ 76,279 ಸೇರಿ ಒಟ್ಟು 1,97,682 ಪಠ್ಯಪುಸ್ತಕಗಳು ಬರಬೇಕಾಗಿದೆ. ಇವು ಕೂಡಾ ಈ ತಿಂಗಳ ಕೊನೆಯವರೆಗೆ ಆಗಮಿಸಲಿದ್ದು, ಜೂನ್ ಮೊದಲ ವಾರದಲ್ಲಿ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪುಸ್ತಕ ವಿತರಣೆ
ಮಾಡಲಾಗುವುದು. ಸದ್ಯ ಶೇ.80 ರಷ್ಟು ಪಠ್ಯಪುಸ್ತಕಗಳು ಬಂದಿದ್ದು, ಇನ್ನುಳಿದ ಶೇ. 20 ಪಠ್ಯಪುಸ್ತಕ ಶೀಘ್ರವೇ ಬರಲಿವೆ. ಶಹರ ವಿಭಾಗದಿಂದ ಈಗಾಗಲೇ 4 ಕ್ಲಸ್ಟರ್‌ಗಳಿಗೆ ಪುಸ್ತಕ ವಿತರಣೆ ಮಾಡಲಾಗಿದ್ದು, 8 ಕ್ಲಸ್ಟರ್ ಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಬೇಕಿದೆ. ಇದರಲ್ಲಿ 3 ಕ್ಲಸ್ಟರ್‌ಗಳು ಉರ್ದು ಮಾಧ್ಯಮದ ಕ್ಲಸ್ಟರ್‌ಗಳಾಗಿವೆ.
ಗ್ರಾಮೀಣ ವಿಭಾಗ
12 ಕ್ಲಸ್ಟರ್‌ಗಳಲ್ಲಿ 115 ಸರಕಾರಿ ಪ್ರಾಥಮಿಕ ಶಾಲೆ, 22 ಉರ್ದು ಶಾಲೆ, 13+2 ಸರಕಾರಿ ಪ್ರೌಢಶಾಲೆ, 7 ಪ್ರಾಥಮಿಕ ಹಾಗೂ 15 ಅನುದಾನಿತ ಪ್ರೌಢಶಾಲೆ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಕನ್ನಡ ಮಾಧ್ಯಮ 36 ಹಾಗೂ ಆಂಗ್ಲ ಮಾಧ್ಯಮ 35 ಶಾಲೆಗಳಿವೆ. ಸದ್ಯ ಗ್ರಾಮೀಣ ವಿಭಾಗದ ಶಾಲೆಗಳಿಗೆ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ವಿತರಣೆಗೆ 1,81,566 ಹಾಗೂ ಮಾರಾಟ ಪ್ರತಿಗಳಿಗೆ 69,089 ಪ್ರತಿಗಳು ಬೇಡಿಕೆ ಇದೆ. ಉಚಿತ ವಿತರಣೆಗೆ 1,39,650 ಪಠ್ಯಪುಸ್ತಕಗಳು ಹಾಗೂ ಮಾರಾಟಕ್ಕೆ 55,867 ಪಠ್ಯಪುಸ್ತಕಗಳು ಬಂದಿವೆ. ಇನ್ನುಳಿದ ಪಠ್ಯಪುಸ್ತಕಗಳು ಶೀಘ್ರದಲ್ಲಿಯೇ ಬರಲಿದ್ದು ಈ ಬಾರಿ ಪಠ್ಯಪುಸ್ತಕದ ಸಮಸ್ಯೆ ಆಗಲಿಕ್ಕಿಲ್ಲ ಎಂಬ ನಿರೀಕ್ಷೆಯಿದೆ.
ಈಗಾಗಲೇ ಹುಬ್ಬಳ್ಳಿ ಶಹರ ವಿಭಾಗದ 12 ಕ್ಲಸ್ಟರ್‌ಗಳಿಗೆ ಪಠ್ಯಪುಸ್ತಕಗಳು ಆಗಮಿಸಿದ್ದು, ಅದರಲ್ಲಿ ಎಲ್ಲ ಕ್ಲಸ್ಟರ್‌ಗಳಿಗೆ ಅಂಕಿ-ಅಂಶಗಳ ಆಧಾರದ ಮೇಲೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಉರ್ದು, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಯ ಪಠ್ಯಪುಸ್ತಕಗಳು ಶೀಘ್ರದಲ್ಲಿಯೇ ಬರಲಿವೆ. ಈ ಬಾರಿ ಪಠ್ಯಪುಸ್ತಕದ ಯಾವುದೇ ಸಮಸ್ಯೆ ಇಲ್ಲ. ಶಾಲೆಯ ಆರಂಭಕ್ಕೂ ಮುನ್ನ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ.
ಪಿ.ಡಿ. ಬಸನಾಳ,
ಶಹರ ವಿಭಾಗದ ಶಿಕ್ಷಣ ಸಂಯೋಜಕ
ಕಳೆದ ಬಾರಿ ಸರಿಯಾದ ಸಮಯಕ್ಕೆ ಪಠ್ಯಪುಸ್ತಕಗಳು ವಿತರಣೆಯಾಗದೆ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರಿಗೂ ಆತಂಕವಾಗಿತ್ತು. ಈ ವರ್ಷ ಈಗಾಗಲೇ ಎಲ್ಲ ತರಗತಿಯ ಪಠ್ಯಪುಸ್ತಕಗಳು ಬಂದಿದ್ದು ಮೇ 21ರಿಂದ ಎಲ್ಲ ಗ್ರಾಮೀಣ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುವುದು. ಉರ್ದು ಮಾಧ್ಯಮಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳು ಶೀಘ್ರ ಬರಲಿವೆ.
ಎಸ್.ಎನ್. ಬಶೆಟ್ಟಿಯವರ,
ಗ್ರಾಮೀಣ ಶಿಕ್ಷಣ ಸಂಯೋಜಕ
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.