ಹಟ್ಟಿಯಂಗಡಿ – ಜಾಡಿ ರಸ್ತೆ: ಅಲ್ಲಲ್ಲಿ ಹೊಂಡಗಳು: ಸಂಚಾರಕ್ಕೆ ಅಡ್ಡಿ
Team Udayavani, May 22, 2018, 2:35 AM IST
ಕೊಲ್ಲೂರು: ತಲ್ಲೂರಿನಿಂದ ಹಟ್ಟಿಯಂಗಡಿಯ ತಿರುವಿನ ಜಾಡಿ ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ಮುಖ್ಯರಸ್ತೆಯ ದುಃಸ್ಥಿತಿಯ ಬಗ್ಗೆ ಉದಯವಾಣಿ 2 ಬಾರಿ ಸಚಿತ್ರ ವರದಿಯೊಡನೆ ಜನಪ್ರತಿನಿಧಿಗಳಿಗೆ ಆ ಬಗ್ಗೆ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸುವಂತೆ ಸಂಪೂರ್ಣ ಮಾಹಿತಿ ನೀಡಿದ್ದರೂ ಎಚ್ಚೆತ್ತುಕೊಳ್ಳದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಹಟ್ಟಿಯಂಗಡಿಯ ಸಂಪರ್ಕ ಕೊಂಡಿಯ ಆದಿಯಲ್ಲಿ ಒಂದಿಷ್ಟು ದೂರ ವ್ಯಾಪ್ತಿಗೆ ಡಾಮರು ಮಾಡಲಾಗಿದ್ದರೂ ಅದಕ್ಕೆ ಚಾಚಿಕೊಂಡಿರುವ 4 ಕಿ. ಮೀ. ದೂರದ ಮುಖ್ಯರಸ್ತೆಯು ಡಾಮರು ಕಾಣದೇ ವರುಷಗಳು ಸಂದಿವೆ. ಕನಿಷ್ಠ ತೇಪೆ ಹಾಕುವ ಕಾರ್ಯಕ್ಕೂ ಇಲಾಖೆ ಹಾಗೂ ಗ್ರಾ.ಪಂ. ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಅನುದಾನದ ಕೊರತೆ
ಗ್ರಾ.ಪಂ. ಹಾಗೂ ತಾಲೂಕು ಪಂಚಾಯತ್‌ಗೆ ಒಂದಿಷ್ಟು ನಿರ್ದಿಷ್ಟ ಅನುದಾನ ಹಂಚಿಕೆಯಾಗಿದ್ದು ರಸ್ತೆ ಡಾಮರು ಕಾಮಗಾರಿಗೆ ಆ ಮೊತ್ತವು ಎಲ್ಲೂ ಸಲ್ಲದು. ಹಾಗಾಗಿ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕಾರಿಗಳೊಡನೆ ಅನುದಾನವನ್ನು ಜೋಡಿಸಿ ರಸ್ತೆ ಕಾರ್ಯದ ನಿರ್ವಹಣೆಯ ಜವಾಬ್ದಾರಿ ವಹಿಸಬೇಕೆಂದು ಮನವಿ ಮಾಡಲಾಗಿದೆ ಎಂದು ತಾ.ಪಂ. ಸದಸ್ಯ ಕರುಣ ಪೂಜಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.