ಅರವತ್ತು ರೂಪಾಯಿಗಳ ಸೀರೆ
Team Udayavani, May 22, 2018, 6:00 AM IST
ನನಗೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಂಪ್ರದಾಯಿಕ ತತ್ವಗಳಿಗೆ ಅಂಟಿಕೊಂಡಿದ್ದ ಅಣ್ಣನಿಂದ ಸಮ್ಮತಿ ದೊರಕಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ನನಗೆ ಅಂದಿನ ದಿನಗಳಲ್ಲಿ ಉದ್ಯೋಗ ದೊರೆಯುವುದು ಕಷ್ಟವಾಗಿರಲಿಲ್ಲ. ನಮ್ಮ ಮನೆತನದಲ್ಲಿ ಹೆಣ್ಣುಮಕ್ಕಳು ಯಾರೂ ಕೆಲಸಕ್ಕೆ ಹೋಗಬಾರದು ಎಂಬ ಆಜ್ಞೆ ಅಣ್ಣನಿಂದ. ತಂದೆಯನ್ನು ಕಳೆದುಕೊಂಡಿದ್ದ ನಾವು ಅವನ ಮಾತಿಗೆ ತಲೆ ಬಾಗಲೇಬೇಕಾಗಿತ್ತು. ಕಿತ್ತು ತಿನ್ನುವ ಬಡತನ. ಸಣ್ಣಪುಟ್ಟ ಬೇಕು ಬೇಡಗಳಿಗೂ ಮನೆಯವರನ್ನು ಅವಲಂಬಿಸಬೇಕಾಗಿತ್ತು.
ಅಂಥ ಸಮಯದಲ್ಲಿ ನನಗೆ ನೆರವಾದವಳು ನನ್ನ ಗೆಳತಿ. ಆ ದಿನಗಳಲ್ಲಿ ಮಹಿಳಾ ಸಮಾಜದಿಂದ ಬಾಸ್ಕೆಟ್‌ಗಳನ್ನು ಹೆಣೆಸಿ, ಒಂದಕ್ಕೆ ಹನ್ನೆರಡು ರೂಪಾಯಿಗಳಂತೆ ಕೊಡುತ್ತಿದ್ದರು. ಅವುಗಳನ್ನು ಒಬ್ಬಳೇ ಮಾಡಿ ಪೂರೈಸುವ ಅರ್ಹತೆಯಿದ್ದರೂ ಆ ಗೆಳತಿ ನನ್ನ ಕಷ್ಟವನ್ನು ನೋಡಿ, ಅದರಲ್ಲಿ ಅರ್ಧವನ್ನು ನನಗೂ ವಹಿಸಿ ನಾನೂ ಅಲ್ಪಸ್ವಲ್ಪ ದುಡ್ಡು ಗಳಿಸುವಂತೆ ಮಾಡಿದಳು.
ಮಹಿಳಾ ಮಂಡಳಿಯವರು ಸದಸ್ಯೆಯರಿಂದ ಹಣ ಸಂಗ್ರಹಿಸಿ, ಅದನ್ನು ಅಂಚೆ ಕಚೇರಿಯ ಉಳಿತಾಯ ಖಾತೆಗೆ ತಿಂಗಳು ತಿಂಗಳೂ ಠೇವಣಿ ಇಡುತ್ತಿದ್ದರು. ಅದನ್ನು ಬರೆದು ಕಚೇರಿಗೆ ಕಳುಹಿಸುವ ಜವಾಬ್ದಾರಿಯನ್ನು ನನಗೇ ವಹಿಸಿ, ತಿಂಗಳಿಗೆ ಮೂವತ್ತು ರೂಪಾಯಿಗಳಂತೆ ಕೊಡುತ್ತಿದ್ದರು.
ಈ ಎಲ್ಲಾ ಹಣವನ್ನು ಸಂಗ್ರಹಿಸಿ, ಅಂಚೆ ಕಚೇರಿಯಲ್ಲಿಟ್ಟು ಅದರಿಂದ 60-70 ರೂಪಾಯಿಗಳನ್ನು ತೆಗೆದು ನನ್ನ ಅಮ್ಮನಿಗೆ ಒಂದು ಸೀರೆ ತೆಗೆದುಕೊಟ್ಟೆ. ಹೊರಗಡೆ ಉಟ್ಟುಕೊಂಡು ಹೋಗಲು ಒಂದು ಒಳ್ಳೆಯ ಸೀರೆಯೂ ಇಲ್ಲದಿದ್ದ ಅವರಿಗೆ ಇದು ಪೀತಾಂಬರದಂತೆ ಭಾಸವಾಗಿ ಸೀರೆಯನ್ನು ಕಂಡು ಗಳಗಳನೆ ಅತ್ತಿದ್ದರು. ಅದನ್ನು ಅವರು ನಾಲ್ಕಾರು ಸಲ ಉಟ್ಟಿರಬಹುದು. ನಂತರ ದುರದೃಷ್ಟಕ್ಕೆ ಹಾಸಿಗೆ ಹಿಡಿದುಬಿಟ್ಟರು.
ಸೀರೆಯ ಮೌಲ್ಯ ಎಷ್ಟೇ ಇರಲಿ, ಅದನ್ನು ಅವರು ಎಷ್ಟು ಬಾರಿಯೇ ಉಟ್ಟಿರಲಿ, ನನ್ನ ಅಮ್ಮನಿಗೆ ಮೊದಲ ಸಂಪಾದನೆಯಿಂದ ತೆಗೆದುಕೊಟ್ಟ ಉಡುಗೊರೆ ಅದು ಎಂಬ ತೃಪ್ತಿ ನನ್ನಲ್ಲಿ ಇನ್ನೂ ಮಾಸಿಲ್ಲ.
ಪುಷ್ಪಲತಾ ಎನ್.ಕೆ. ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.