ಶಿಕ್ಷಕರಿಗಾಗಿ ಹೊಸ ಕೋರ್ಸ್?
Team Udayavani, May 23, 2018, 6:00 AM IST
ನವ ದೆಹಲಿ: ರಾಷ್ಟ್ರಮಟ್ಟದಲ್ಲಿ ಪ್ರತಿಭಾನ್ವಿತ ಶಿಕ್ಷಕರನ್ನು ರೂಪಿಸಲು ಪದವಿ ಮಟ್ಟದಲ್ಲಿ ಬಿಎ.ಎಜುಕೇಷನ್ ಹಾಗೂ ಬಿಎಸ್‌ಸಿ. ಎಜುಕೇಷನ್ ಎಂಬ ನಾಲ್ಕು ವರ್ಷಗಳ ಅಂತರ್ಗತ ಕೋರ್ಸ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದ ಸಮಿತಿ ಶಿಫಾರಸು ಮಾಡಿದೆ. ಈ ಪದವಿ ಕೋರ್ಸ್‌ಗಳ ಜವಾಬ್ದಾರಿಯನ್ನು ನೂತನವಾಗಿ ಸ್ಥಾಪಿಸಲಾಗುವ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಸಂಸ್ಥೆ (ಎನ್‌ಐಟಿಇ) ವಹಿಸಿಕೊಳ್ಳಬೇಕೆಂದು ಸಮಿತಿ ಹೇಳಿದೆ.
ಶಿಕ್ಷಕರಿಗಾಗಿಯೇ ಪ್ರತ್ಯೇಕ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲು ಇಚ್ಛೆ ಪಟ್ಟಿದ್ದ ಕೇಂದ್ರ ಕಳೆದ ವರ್ಷ ತಜ್ಞರ ಸಮಿತಿ ನೇಮಿಸಿ, ಈ ಕುರಿತಂತೆ ಅಗತ್ಯ ಸಲಹೆಗಳನ್ನು ನೀಡುವಂತೆಯೂ, ವಿವಿಯಲ್ಲಿ ಆರಂಭಿಸಬಹುದಾದ ಕೋರ್ಸ್‌ಗಳ ಬಗ್ಗೆ ವರದಿ ಸಲ್ಲಿಸುವಂತೆಯೂ ಸೂಚಿಸಿತ್ತು. ಅದರಂತೆ, ವರದಿ ನೀಡಿರುವ ಸಮಿತಿ, ಪ್ರತ್ಯೇಕ ವಿವಿ ಬದಲು ಎನ್‌ಐಟಿಇ ಸ್ಥಾಪನೆ, 4 ವರ್ಷಗಳ 2 ಅಂತರ್ಗತ ಕೋರ್ಸ್‌ಗಳ ಚಾಲನೆಗೆ ಶಿಫಾರಸು ಮಾಡಿದೆ. ಅವುಗಳು ಪ್ರಾಥಮಿಕ ಪೂರ್ವ ಮಟ್ಟದಿಂದ ಮಾಧ್ಯಮಿಕ, ಪ್ರೌಢ ಶಿಕ್ಷಣಗಳ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರನ್ನು ರೂಪಿಸಲಿದೆ. ಕೋರ್ಸ್‌ಗಳ ಜತೆಗೆ, ಶಿಕ್ಷಕರಲ್ಲಿ ಬೋಧನಾ ಕೌಶಲ್ಯ ಹೆಚ್ಚಿಸಲು ತರಬೇತಿ ಶಿಬಿರಗಳನ್ನು ಎನ್‌ಐಇಟಿ ನಡೆಸಬೇಕೆಂದು ಸಮಿತಿ ಹೇಳದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.