ಪಾಕಿಸ್ತಾನದ ಹೊಸ ಘಾತಕತನ ಬಯಲು
Team Udayavani, May 23, 2018, 6:00 AM IST
ನವದೆಹಲಿ: ರಾತ್ರಿ ವೇಳೆ ಭಾರತದ ಗಡಿಯೊಳಗೆ ನುಸುಳುವ ಭಯೋತ್ಪಾದಕರನ್ನು ಸದೆಬಡಿಯುವ ಸಲುವಾಗಿ, ಭಾರತ, ಗಡಿ ಕಾಯುವ ಯೋಧರಿಗೆ ನೈಟ್ ವಿಷನ್ ಪರಿಕರಗಳನ್ನು ಒದಗಿಸಿದ್ದರೂ, ಪಾಕಿಸ್ತಾನ, ಅವುಗಳ ಕಣ್ತಪ್ಪಿಸಿ ಭಾರತದೊಳಕ್ಕೆ ಬಂದು ವಿಧ್ವಂಸಕ ಕೃತ್ಯ ಮಾಡುವ ಹೊಸ ಷಡ್ಯಂತ್ರ ರೂಪಿಸಿರುವುದು ಬೆಳಕಿಗೆ ಬಂದಿದೆ. ನೈಟ್ ವಿಷನ್ ಪರಿಕರಗಳ ತಂತ್ರಜ್ಞಾನದ ದೌರ್ಬಲ್ಯವನ್ನೇ ದಾಳವಾಗಿಸಿಕೊಂಡು, ಭಾರತದೊಳಕ್ಕೆ ಬಂದು ಇತ್ತೀಚೆಗೆ ಯೋಧನೊಬ್ಬನನ್ನು ಕೊಂದು ಹಾಕಿರುವುದು ಈಗ ಭಾರತಕ್ಕೆ ಹೊಸ ಸವಾಲಾಗಿ ಮಾರ್ಪಟ್ಟಿದೆ.
ಏನಿದು ಷಡ್ಯಂತ್ರ?: ಇತ್ತೀಚೆಗೆ, ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಆರ್.ಎಸ್.ಪೋರಾ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಸೀತಾರಾಮ್ ಯಾದವ್ (28) ಮೇ 18ರ ಮಧ್ಯರಾತ್ರಿ ಗುಂಡೇಟಿನಿಂದ ಸಾವನ್ನಪ್ಪಿದ್ದರು. ಇದು ಗಡಿಯಾಚೆಗಿನ ಪಾಕಿಸ್ತಾನ ಸೈನಿಕರು ನಡೆಸಿದ ಸ್ನೆ„ಪರ್ ದಾಳಿ ಪರಿ ಣಾಮ ಎಂದೇ ಭಾವಿಸಲಾಗಿತ್ತು. ಆದರೆ, ಗಡಿಯಲ್ಲಿನ ಯೋಧರಿಗೆ ನೀಡಲಾಗಿರುವ ಹ್ಯಾಂಡ್ ಹೆಲ್ಡ್ ಥರ್ಮಲ್ ಇಮೇಜರ್ (ಎಚ್‌ಎಚ್‌ಟಿಐ) ಪರಿಕರಗಳಲ್ಲಿ ಮನುಷ್ಯರ ಆಕಾರದ ನೆರಳುಗಳು ಯೋಧನ ಹತ್ತಿರಕ್ಕೆ ಬಂದು ಆತನ ಕಡೆಗೆ ಗುಂಡು ಹಾರಿಸಿರುವುದು ಗೊತ್ತಾಗಿದೆ. ಇದು ಹೇಗಾಯ್ತು ಎಂಬ ಪ್ರಶ್ನೆಗೆ ಉತ್ತರ “ಥರ್ಮಲ್ ಕೆಮೊಫ್ಲಾಜ್’ ಉಡುಪು. ಇದು ಹಸಿರಿಗೆ ಹೊಂದಿಕೊಂಡಂತೆ ಇರುವುದರಿಂದ ಪತ್ತೆ ಕಷ್ಟವಾಗಿದೆ ಎಂದೇ ಹೇಳಲಾಗುತ್ತಿದೆ.
ಏನಿದು ಕೆಮೊಫ್ಲಾಜ್ ಸೂಟ್?
ಸಾಮಾನ್ಯವಾಗಿ ನೈಟ್ ವಿಷನ್ ಪರಿಕರಗಳು ತಮ್ಮ ಎದುರಿಗಿರುವ ಮನುಷ್ಯರ, ಪ್ರಾಣಿಗಳ ದೇಹದ ಉಷ್ಣಾಂಶವನ್ನು ದೂರದಿಂದಲೇ ಗ್ರಹಿಸಿ ಅವುಗಳ ಚಲನ ವಲನವನ್ನು ಛಾಯೆಯ ರೂಪದಲ್ಲಿ ಇಲೆಕ್ಟ್ರಾನಿಕ್ ಪರದೆಯ ಮೇಲೆ ಮೂಡಿಸುತ್ತವೆ. ಕೆಮೊಫ್ಲಾಜ್ ಧರಿಸಿದ ಮನುಷ್ಯ ಅಥವಾ ಪ್ರಾಣಿಯ ದೇಹದ ಉಷ್ಣಾಂಶ ಹೊರಕ್ಕೆ ಬಾರದಂತೆ ಈ ಕೆಮೊಫ್ಲಾಜ್ ಸೂಟ್‌ಗಳು ತಡೆಯುವುದರಿಂದ ಇವನ್ನು ಧರಿಸಿದ ಮನುಷ್ಯರು, ನೈಟ್ ವಿಷನ್ ಪರಿಕರಗಳಿಗೆ ಕಾಣಿಸುವುದೇ ಇಲ್ಲ. “ಥರ್ಮಲ್ ಕೆಮೊಫ್ಲಾಜ್’ ಉಡುಪುಗಳಿಂದ ಮನುಷ್ಯರ ಬಿಂಬ ಗೊತ್ತಾಗದಿದ್ದರೂ ಅವರ ನೆರಳನ್ನೂ ಎಚ್‌ಎಚ್‌ಟಿಐ ಪರಿಕರಗಳು ನಿಖರವಾಗಿ ದಾಖಲಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ಮತ್ತೆ ಪುಂಡಾಟ: ಐವರಿಗೆ ಗಾಯ
ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಅಖೂ°ರ್‌ನಿಂದ ಸಾಂಬಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ಸೇನೆಯು, ಮಂಗಳವಾರ ನಡೆಸಿರುವ ಶೆಲ್ ದಾಳಿಯಿಂದಾಗಿ 70 ವರ್ಷದ ವೃದ್ಧ ಸೇರಿ ಐವರು ನಾಗರಿಕರು ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಅಂತಾರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿ ಬಳಿ ಪಾಕಿಸ್ತಾನ ಕಳೆದೊಂದು ವಾರದಿಂದ ನಡೆಸುತ್ತಿರುವ ಅಪ್ರಚೋದಿತ ದಾಳಿ ವಿರೋಧಿಸಿ ಜಮ್ಮು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ವಕೀಲರು, ಮಂಗಳವಾರ ತಮ್ಮ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.