ಹತ್ತೇ ತಾಸುಗಳಲ್ಲಿ ನಿಫಾ ದೃಢಪಡಿಸಿದೆವು: ಡಾ| ಅರುಣ್
Team Udayavani, May 23, 2018, 6:00 AM IST
ಉಡುಪಿ: ಕೇರಳದಲ್ಲಿ ಆತಂಕ ಸೃಷ್ಟಿಸಿರುವ ನಿಫಾ ವೈರಸನ್ನು ಮಣಿಪಾಲದಲ್ಲಿ ಅತ್ಯಂತ ಕ್ಷಿಪ್ರವಾಗಿ ಪತ್ತೆ ಹಚ್ಚಲಾಗಿತ್ತು. ಅಪರೂಪದ ಈ ಕಾಯಿಲೆ ಬಗ್ಗೆ ಮಾಹಿತಿ ಬಂದ 10 ತಾಸುಗಳೊಳಗೆ ವೈರಸ್ ಪತ್ತೆ ಸಾಧ್ಯವಾಗಿದೆ. ಈ ಕೂಡಲೇ ಕ್ರಮ ಕೈಗೊಂಡಿರುವುದರಿಂದ ಈಗ ನಿಫಾ ಸೋಂಕು ಕೇರಳದಲ್ಲಿ ಒಂದು ಹಂತದ ನಿಯಂತ್ರಣಕ್ಕೆ ಬಂದಿದೆ ಎಂದು ಕೇರಳ ಸರ ಕಾರದ ಜತೆಗಿನ ವೈದ್ಯಕೀಯ, ಸಂಶೋಧಕರ ತಂಡದಲ್ಲಿರುವ ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ (ಎಂಸಿವಿಆರ್) ನ ಮುಖ್ಯಸ್ಥ ಡಾ| ಅರುಣ್ ಕುಮಾರ್ ತಿಳಿಸಿದ್ದಾರೆ.
ನಿಫಾದಂತಹ ವೈರಸ್ ರೋಗಗಳನ್ನು ಪತ್ತೆ ಹಚ್ಚಲು ಬೇಕಾದ ಪ್ರಯೋಗಾಲಯಗಳು ಮಣಿಪಾಲದ ಕೆಎಂಸಿ, ಪುಣೆಯಲ್ಲಿ ಮಾತ್ರವೇ ಇವೆ. ನಮಗೆ ಬಂದ ಸ್ಯಾಂಪಲ್‌ಗಳ ಕುರಿತಾದ ವರದಿಯನ್ನು ಅತ್ಯಂತ ಕ್ಷಿಪ್ರವಾಗಿ ನೀಡಿದ್ದೇವೆ. ಮೇ18ರಂದೇ ವೈರಸ್ ಪತ್ತೆ ಹಚ್ಚಿದ್ದೇವೆ. ಅಪರೂಪದ ವೈರಸ್ ಆಗಿರುವುದರಿಂದ ಅದನ್ನು ಪುಣೆಯ ಲ್ಯಾಬ್‌ನಲ್ಲಿಯೂ ಮತ್ತೂಮ್ಮೆ ಖಚಿತ ಪಡಿಸಿಕೊಳ್ಳಲು ನಿರ್ಧರಿಸಲಾಯಿತು. ಪುಣೆಯಿಂದ ವರದಿ ಬಂದ ಅನಂತರವೇ ಪ್ರಕಟಿಸಲಾಯಿತು. ಕ್ಷಿಪ್ರ ವರದಿಯಿಂದಾಗಿ ಸರಕಾರ ಕೂಡ ಅಗತ್ಯ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು. ಈಗ ಪರಿಸ್ಥಿತಿ ಒಂದು ಹಂತದ ನಿಯಂತ್ರಣಕ್ಕೆ ಬಂದಿದೆ ಎಂದು ಡಾ| ಅರುಣ್ ಕುಮಾರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಒಂದು ಕುಟುಂಬ ಮಾತ್ರ:
ಒಂದು ನಿರ್ದಿಷ್ಟ ಪ್ರದೇಶದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗಲಿದೆ. ಇದು ಯಾವ ರೀತಿ ತಗಲಿತು ಎಂಬುದರ ಬಗ್ಗೆ ಇನ್ನೂ ಅಧ್ಯಯನ ನಡೆಸುತ್ತಿದ್ದೇವೆ. ಇವರು ದಾಖಲಾದ ಎರಡು ಆಸ್ಪತ್ರೆಗಳಲ್ಲಿದ್ದ ಇತರ ಕೆಲವು ರೋಗಿಗಳಿಗೆ ಹಾಗೂ ಶುಶ್ರೂಷಕಿಯರಿಗೆ ಸೋಂಕು ತಗಲಿತು. ಎರಡನೇ ಪ್ರಕರಣ ದಾಖಲಾದ ಕೂಡಲೇ ವೈರಸ್ ಪತ್ತೆ ಹಚ್ಚಿ ಮುಂಜಾಗರೂಕತೆ ಕ್ರಮ ಕೈಗೊಂಡಿದ್ದರಿಂದ ನಿಫಾ ಹೆಚ್ಚು ಪ್ರಸರಣವಾಗಿಲ್ಲ. ಆತಂಕ ಬೇಕಾಗಿಲ್ಲ, ಸೂಕ್ತ ಎಚ್ಚರಿಕೆ ಬೇಕು. ಎರಡೂ ಆಸ್ಪತ್ರೆಗಳಲ್ಲಿ ಕೂಡ “ಪ್ರತ್ಯೇಕ ವಾರ್ಡ್’ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 12 ಮಂದಿಗೆ ಸೋಂಕು ತಗಲಿದ್ದು, ಇವರಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೇ 19ರಿಂದ ಸೇವೆ
ಕೇರಳ ಸರಕಾರದ ತುರ್ತು ಆಹ್ವಾನದ ಮೇರೆಗೆ ಮೇ 19ರಂದು ಮಣಿಪಾಲದಿಂದ ಹೊರಟು ಸೇವೆ ಆರಂಭಿಸಿದ್ದೇವೆ. ಮಣಿಪಾಲ್ ಲ್ಯಾಬ್‌ನ 4-5 ಮಂದಿ ತಜ್ಞರು, ಸಿಬಂದಿಯ ಜತೆಗೆ ನಾನು ಕೋಯಿಕ್ಕೋಡ್‌ನಲ್ಲಿ ಸೇವಾನಿರತರಾಗಿದ್ದೇವೆ. ಮಣಿಪಾಲ ಲ್ಯಾಬ್‌ನಲ್ಲಿಯೂ ಹಲವು ಮಂದಿ ತಜ್ಞರು ಪರೀಕ್ಷೆಯಲ್ಲಿ ತೊಡಗಿಕೊಂಡಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಗೋವಾ ಮೊದಲಾದೆಡೆ ವಿವಿಧ ರೀತಿಯ ವೈರಸ್ ರೋಗಗಳು ಹರಡಿದ್ದಾಗ ಕೂಡ ಸೇವೆ ಸಲ್ಲಿಸಿದ್ದೇನೆ ಎಂದು ಡಾ| ಅರುಣ್ ಕುಮಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.